ಪದವಿ ಪ್ರಶಸ್ತಿ
ಬಯಸಿ ಬಂದುದು ಅಂಗ ಭೋಗ,
ಬಯಸದಿ ಬಂದುದು ಲಿಂಗ ಭೋಗ,
ಚನ್ನ ಬಸವಣ್ಣನ ನುಡಿ ಚೆಂದ.
ಬಾರದಿರುವುದು ಬೆನ್ನತ್ತಿ ಹೋಗದೆ,
ಬಂದಿರುವುದು ನನ್ನದೆಂಬ ಭಾವದಿ,
ನಿಷ್ಠೆಯಿಂದಿರಲು ದೊರೆಯುವ,
ಆತ್ಮತೃಪ್ತಿ ನಿಜ ಪದವಿ ಪುರಸ್ಕಾರ.
ವ್ಯಾಮೋಹ ರಹಿತರೆಂದು,
ಬರೀ ಅದರದಿಂದ ಉದುರಿಸದೆ,
ಬೇಡೆಂಬ ಭಾವ ಮನದೊಳು,
ಆಳವಾಗಿ ಬೇರುರಲು,
ನನ್ನೆದೆಂಬುವುದು,
ನನ್ನನು ಅರಸಿ ಬರುವುದು.
ಸ್ಥಾನ ,ಮಾನ,ಪದವಿ,ಪ್ರಶಸ್ತಿ
ದೊರೆಯಲೇಬೇಕೆಂತ್ತಿದ್ದರೆ,
ತಡೆಯುವರಾರು?
ಎಲ್ಲವ ತಂದು ಉಡಯಲಿಡುವ ಪರಶಿವ
– ಮಂಜುಶ್ರೀ ಬಸವರಾಜ ಹಾವಣ್ಣವರ