ಅಪ್ಪನ ನೆನಪು

ಅಪ್ಪನ ನೆನಪು

ಅಪ್ಪನಿಗಾಗಿ
ಮೊದಲು ನುಡಿ.
ನನ್ನ ತೊದಲು ನುಡಿ.
ಅಪ್ಪನೆಂದರೆ ಆತ್ಮಸ್ಥೈರ್ಯ.
ಪ್ರೀತಿ, ವಾತ್ಸಲ್ಯದ,
ಶಿಸ್ತಿನ ಮೂರ್ತಿ,
ನಮ್ಮ ಸಾಧನೆಗೆ ಸ್ಪೂರ್ತಿ. ನನ್ನ ಗೆಲುವಿನಲ್ಲಿ
ಹಿರಿಹಿರಿ ಹಿಗ್ಗಿ .,
ಶಿಕ್ಷಕನಾಗಿ ಬೋಧಿಸಿ,
ಅಕ್ಕರೆಯಿಂದ ದಂಡಿಸಿ ,
ಸೋಲಿನಲ್ಲಿ ಸಂತೈಸಿ
ಧೈರ್ಯ ನೀಡಿದ
ಸವಿಸವಿ ನೆನಪು.
ನನಗೆ ಕರುಣಾಳು ಬೆಳಕಾಗಿ,
ನಿರಾಸೆಗಳಿಗೆ ಆಸರೆಯಾಗಿ,
ನನ್ನ ಆತ್ಮಸ್ಥೈರ್ಯಕ್ಕೆ
ಭದ್ರ ಬುನಾದಿಯಾಗಿ..
ಭಾವನೆಯ ಆಕಾಶದಲ್ಲಿ,
ನನ್ನ ಪುಟ್ಟ ಕನಸುಗಳಿಗೆ
ಕಾಮನಬಿಲ್ಲಿನಕಿಂತಲೂ
ಸುಂದರ ಬಣ್ಣ ತುಂಬಿ,
ನನ್ನ ಕಲ್ಪನೆಗಳಿಗೆ ರೆಕ್ಕೆ
ನೀಡಿ, ಇನ್ನೇನು ನಾನು
ಹಾರಬೇಕೆನ್ನುವಷ್ಟರಲ್ಲಿ
ಹಾಗೆ ನಕ್ಷತ್ರದಂತೆ,
ಬೆಳ್ಳಿ ಮೋಡಗಳಲ್ಲಿ ಮರೆಯಾದರು. ಬಾಳ ಬಂಡಿಯನೇರಿ
ಬಹುದೂರ ಸಾಗಿರಲು,
ಕಣ್ತುಂಬಿ ಭಾವನೆಗಳ ಕದಡುತ್ತ,
ಬಂತೊಂದು ಸವಿ ನೆನಪು
ಮನಸ್ಸನ್ನು ಮಿಡಿಯುತ್ತ..
ನೋವನ್ನು ತಂದಿರಲು
ಮರೆಸಿಹಾಕಲು ಅದಕೆ ಸಿಗಲಿಲ್ಲ ನೆಪ..

ಡಾ ಶಾರದಾಮಣಿ ಹುಣಶಾಳ ವಿಜಯಪುರ

Don`t copy text!