ಜಿಲ್ಲಾಧ್ಯಕ್ಷ ಸ್ಥಾನಕ್ಕೆರಾಜೀನಾಮೆ
ಪಂಪಯ್ಯಸ್ವಾಮಿ ಸಾಲಿಮಠ
e-ಸುದ್ದಿ ಸಿಂಧನೂರು
ವಚನ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶರಣ ಶ್ರೀ M,V, ತ್ಯಾಗರಾಜರವರಿಗೆ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿದ್ದ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ರಾಜ್ಯ ಅಧ್ಯಕ್ಷರಾದ M, V, ತ್ಯಾಗರಾಜ ಅವರಿಗೆ ಪತ್ರ ಬರೆದು ರಾಜಿನಾಮೆ ಸಲ್ಲಿಸಿದ್ದಾರೆ.
ನನ್ನನ್ನು ಈ ವರೆಗೂ ರಾಯಚೂರು ಜಿಲ್ಲಾಧ್ಯಕ್ಷ ರನ್ನಾಗಿ ಮಾಡಿದ ತಮಗೆ ಹೃತ್ಪೂರ್ವಕ ಅಭಿನಂದನೆಗಳು. ಆತ್ಮೀಯರೇ ನನ್ನ ಮೇಲೆ ವಿಶ್ವಾಸವಿಟ್ಟು ರಾಯಚೂರು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರನ್ನಾಗಿ ತಾವು ಮಾಡಿದ್ದು ಅಷ್ಟೇ ಅಲ್ಲದೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನಿಂದ ರಾಜ್ಯ ಮಟ್ಟದ “ಕಾಯಕ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದೀರಿ, ತಮ್ಮನ್ನು ಹಾಗೂ ಪರಿಷತ್ತನ್ನು ಸದಾ ಸ್ಮರಿಸುತ್ತೇನೆ.
ನನ್ನ ವೈಯಕ್ತಿಕ ಕೆಲಸದ ಒತ್ತಡದಿಂದ ಜೊತೆಗೆ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ರಾಯಚೂರು ಜಿಲ್ಲಾಧ್ಯಕ್ಷರಗಿರುವುದರಿಂದ ಹಾಗೂ ಪ್ರಸ್ತುತ ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ವಹಿಸಿರುವುದರಿಂದ ನನಗೆ ವಚನ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ, ಹಾಗಾಗಿ ರಾಜಿನಾಮೆ ಸಲ್ಲಿಸುತ್ತಿರುವದಾಗಿ ತಿಳಿಸಿದ್ದಾರೆ.
.