ಮಕ್ಕಳ ಸೃಜನಶೀಲತೆಗೆ ಹೆಚ್ಚಿಸಲು ಸಾಹಿತ್ಯ ಸಹಕಾರಿ – ಶ್ರೀಮತಿ ಸುನೀತಾ ಚಂದ್ರಡ್ಡಿ

ಮಕ್ಕಳ ಸೃಜನಶೀಲತೆಗೆ ಹೆಚ್ಚಿಸಲು ಸಾಹಿತ್ಯ ಸಹಕಾರಿ –
ಶ್ರೀಮತಿ ಸುನೀತಾ ಚಂದ್ರಡ್ಡಿ

e-ಸುದ್ದಿ ಸಿಂಧನೂರು

ಸರಕಾರಿ ನೌಕರ ಭವನ ಸಿಂಧನೂರಿನಲ್ಲಿ ನಡೆದ 50ನೇ ಮಕ್ಕಳ ಕವಿಗೋಷ್ಠಿ ಸಮಾರಂಭದ ಉದ್ಘಾಟನೆಯನ್ನು ಮಾಡಿ ಹಿರಿಯ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನೆ ತುವಿ೯ಹಾಳ ಶ್ರೀಮತಿ ಸುನೀತಾ ರವರು ಮಾತಾಡಿ ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸಲು ಮಕ್ಕಳ ಸಾಹಿತ್ಯ ತುಂಬಾ ಸಹಕಾರಿ ಎಂದು ಅಭಿಪ್ರಾಯಪಟ್ಟರು

ಪ್ರಸ್ತಾವಿಕವಾಗಿ ಮಾತನಾಡಿದ ಶ್ರೀ ವಿರುಪಾಕ್ಷಪ್ಪ ಅವರು ಮಕ್ಕಳ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳ ಪ್ರತಿಭೆಗೆ ವೇದಿಕೆ ನೀಡುವುದು ಮಕ್ಕಳ ಸಾಹಿತ್ಯ ಪರಿಷತ್ತಿನ ಉದ್ದೇಶ ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಹೆಚ್.ಜಿ.ಹಂಪಣ್ಣ ಅವರು ಮಕ್ಕಳ ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯ ಅವರು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಶಂಕರ ದೇವರು ಹಿರೇಮಠ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿ ಅತಿ ಹೆಚ್ಚು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಸಾಹಿತ್ಯ ಪ್ರೇಮ ಹಾಗೂ ಮಕ್ಕಳ ಸಾಹಿತ್ಯವನ್ನು ರಚಿಸುವ ಕೌಶಲ್ಯವನ್ನು ಮಕ್ಕಳಲ್ಲಿ ಬೆಳೆಸಿದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಕಾವ್ಯ ರಚನೆಯಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.

ಇದೇ ಸಂಧಭ೯ ದಲ್ಲಿ ಚೆಲುವ ಚಿಣ್ಣರು ತಿಂಗಳ ಮಕ್ಕಳ ಸಾಹಿತ್ಯ ಪತ್ರಿಕೆಯ ತಿಂಗಳ ಸಂಚಿಕೆ ಯನ್ನು ಲೋಕರ್ಪಣೆ ಮಾಡಲಾಯಿತು

ಬೀರಪ್ಪ ಶಂಭೋಜಿ ಅವರು ಮಾತನಾಡಿ ವಿದ್ಯಾರ್ಥಿಗಳು ಕವನ ರಚನೆ ಮಾಡುವ ಮೂಲಕ ಸಾಹಿತ್ಯದ ಒಲವನ್ನು ಬೆಳೆಸಿಕೊಂಡಿದ್ದಾರೆ ಮಕ್ಕಳ ಸಾಹಿತ್ಯ ಪರಿಷತ್ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಂಪಯ್ಯಸ್ವಾಮಿ ಅವರು ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯದ ಪಾತ್ರ ಪ್ರಮುಖವಾದದ್ದು ನಮ್ಮ ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತಿಗಳ ಕೊಡುಗೆ ಅಪಾರ ಎಂದು ಹೇಳಿದರು

ದಲಿತ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಹುಸೇನಪ್ಪ ಅಮರಾಪುರ ಅವರು ಮಾತನಾಡಿ ಮಕ್ಕಳ ಸಾಹಿತಿಗಳ ಕೊಡುಗೆ ಅಪಾರ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು

ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ್ ನಾಯಕ್ ಅವರು ಮಕ್ಕಳ ಪಾಲಕರು ಮಕ್ಕಳ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ||ಮಹದೇವಸ್ವಾಮಿ ಅವರು ವಿದ್ಯಾರ್ಥಿಗಳು ಅದೇನ ಶೀಲರಾಗಬೇಕು ಹಾಗೂ ಬೇರೆಯವರ ಕವನಗಳನ್ನು ನಕಲು ಮಾಡಬಾರದು ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದು ಹೇಳಿದರು

ವೇದಿಕೆಯಲ್ಲಿ ಅಶೋಕ್ ಬೆನ್ನೂರು ಅಧ್ಯಕ್ಷರು ಪತ್ರಕರ್ತರ ಸಂಘ, ಇಸ್ಮಾಯಿಲ್ ಸಾಬ್ ಕಲಾವಿದರು, ಪಂಪಾಪತಿ ಹೂವಿನಬಾವಿ ಅಧ್ಯಕ್ಷರು ಸಂಪಾದಕರು ಹಾಗೂ ಪತ್ರಕರ್ತರ ಸಂಘ, ಹಾಗೂ ಕೊಟ್ರೇಶ್ ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ 30ಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನ ವಾಚನ ಮಾಡಿದರು

ಸಂಮಾರಂಭದಲ್ಲಿ ದುರುಗಪ್ಪ ಗುಡದೂರು ಸ್ವಾಗತಿಸಿದರು. ಕುಮಾರಿ ರಂಗು ಗಲಗ ಪ್ರಾರ್ಥನೆ ಹಾಡಿದರು. ವಿರುಪಾಕ್ಷಪ್ಪ ಪಕೀರಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಅಂಬಿಗರ ನಿರೂಪಣೆ ಮಾಡಿದರು. ಭೀಮಸೇನ್ ಕುಲಕರ್ಣಿ ವಂದಿಸಿದರು

Don`t copy text!