ವಿಶ್ವ ಯೋಗ ದಿನ
ವಿಶ್ವವೇ ಒಂದು ಪರಿವಾರ
ಜನರಿಗೆ ಯೋಗವೆ ಆಧಾರ
ಶರೀರಕೆ ಹಿತಮಿತ ಆಹಾರ
ಮನಕೆ ಸದ್ವಿಚಾರ ಸದಾಚಾರ
ಯೋಗಾಸನಗಳ ಮೂಲ ಭಾರತ
ಯೋಗಿಪುರುಷರ ಹಿಂದುಸ್ತಾನ
ಕಾಯಕವಂತರಿಗೆ ಕರ್ಮಯೋಗ
ರಾಜಮಾರ್ಗಿಗಳಿಗೆ ರಾಜಯೋಗ
ಜ್ಞಾನಿಗಳಿಗೆ ಜ್ಞಾನಯೋಗ
ಶಿವಯೋಗಿಗಳಿಗೆ ಧ್ಯಾನಯೋಗ
ಯೋಗಾಸನ ಶರೀರ ಸಮೃದ್ಧಿಗೆ
ಮನಸಿನ ಸ್ಥಿರತೆ ನೆಮ್ಮದಿಗೆ
ನಿತ್ಯ ಯೋಗಾಚರಣ
ದೇಹದ ಸುಂದರ ಆಭರಣ
ಯೋಗ್ಯ ವ್ಯಕ್ತಿ ವಿಕಸನ
ಸಮಾಜ ದೇಶದ ಪರಿವರ್ತನ
ಎಲ್ಲ ಯೋಗ ಮಾಡೋಣ
ಒಳ್ಳೆಯ ಮಾನವರಾಗೋಣ
ಮಾಡೋಣ ಬನ್ನಿ ಯೋಗಾಚರಣೆ
ದೇಶಕೆ ತ್ಯಾಗದ ಸಮರ್ಪಣೆ
ರಚನೆ – ಅನ್ನಪೂರ್ಣ ಸಕ್ರೋಜಿ ಪುಣೆ