ಜಲದೊಳಗಿರ್ದ ಕಿಚ್ಚು ಜಲವ ಸುಡದೆ

ಜಲದೊಳಗಿರ್ದ ಕಿಚ್ಚು ಜಲವ ಸುಡದೆ

ಜಲದೊಳಗಿರ್ದ ಕಿಚ್ಚು ಜಲವ ಸುಡದೆ
ಜಲವು ತಾನಾಗಿಯೆ ಇದ್ದಿತ್ತು ನೋಡಾ,
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ,
ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗಟ್ಟುನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು,
*ಗುಹೇಶ್ವರಾ ನಿಮ್ಮ ನಿಲವು ನೋಡಾ.

                                           -ಅಲ್ಲಮಪ್ರಭುದೇವರು.

ಅಲ್ಲಮ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು ಅಧ್ಯಾತ್ಮ ಮತ್ತು ಪಾರಮಾರ್ಥಿಕ ಸರಳ ಸೂತ್ರ. ಅವರು ಇಂದಿನ ಶಿವ ಮೊಗ್ಗೆ ಜಿಲ್ಲೆಯ ಬಳ್ಳಿಗಾವಿ ಹಳ್ಳಿ ಜನಿಸಿದರು. ಅಲ್ಲಿನ ಶಿವನ ದೇವಾಲಯದಲ್ಲಿ ಮದ್ದಳೆ ನುಡಿಸುವ ಕಾಯಕ . ಮುಂದೆ ಆಧ್ಯಾತ್ಮಿಕ ಸಾಧನೆಯತ್ತ ಗಮನ ಹರಿಸಿ ಬಸವಣ್ಣನವರ ಸಮ ಸಮಾಜ ನಿರ್ಮಾಣದ ಹೋರಾಟಕ್ಕೆ ಸಂಘಟನೆಗೆ ಮುಂದಾಗುತ್ತಾರೆ. ಅವರ ವಚನಗಳಲ್ಲಿ ಆಳವಾದ ಅನುಭವ ಆಧ್ಯಾತ್ಮಿಕ ಸಾಧನೆಯನ್ನು ಸರಳವಾಗಿ ಉದಾತ್ತಿಕರಣದ ನೆಲೆಯಲ್ಲಿ ಕಂಡು ಬರುತ್ತದೆ . ಬೆಡಗಿನಲ್ಲಿ ವಚನಗಳ ಸಮೃದ್ಧ ಮತ್ತು ಅಲಂಕಾರಗೊಳಿಸುವ ಯತ್ನ ಅಲ್ಲಮರದ್ದು.
ತಾಮಸ ಗುಣ ಕಳೆದು ಸಾತ್ವಿಕ ಸ್ವಭಾವದ ತ್ಯಾಗಮಯ ಸಮರ್ಪಣೆ ಸಂಕೇತ ಅಲ್ಲಮ . ಅವರ ವಚನಗಳಲ್ಲಿ ನಿರಾಳ ನಿರ್ವಲಯ ನಿರಾಕಾರ ನಿರ್ಗುಣ ಜೊತೆಗೆ ಪರಿಸರದ ಕಾಲಜ್ಞಾನ ಗುಪ್ರ ವೈಜ್ಞಾನಿಕ ತಳಹದಿಯ ಅರಿಹು ಮೂಡಿಸುವ ಅಮೋಘ ಕಾರ್ಯವನ್ನು ಅಲ್ಲಮರು ಮಾಡಿದ್ದಾರೆ.
ಅಂತಹ ಒಂದು ಪ್ರಯತ್ನ ಕೆಳಗಿನ ವಚನಗಳಲ್ಲಿ ಆಳವಾದ ಅಧ್ಯಯನ ಮತ್ತು ವೈಜ್ಞಾನಿಕ ಸತ್ಯ ಕಾಣ ಬಹುದು.

ಜಲದೊಳಗಿರ್ದ ಕಿಚ್ಚು ಜಲವ ಸುಡದೆ,
ಜಲವು ತಾನಾಗಿಯೆ ಇದ್ದಿತ್ತು ನೋಡಾ,

ನೀರಿನಲ್ಲಿ ಬೆಂಕಿ ಇದೆ. ಜಲ ವಿದ್ಯುತ್ ತಯಾರಿಸುತ್ತದೆ . ಜಲದಲ್ಲಿ ಕಿಚ್ಚು ಹುಟ್ಟುತ್ತದೆ ಎಂಬ ಅನೇಕ ವಚನಗಳಲ್ಲಿ ಅಲ್ಲಮರ ಪ್ರತಿಪಾದನೆ ಮಾಡಿ ಅವುಗಳ ಅನಾವರಣ ಅಲ್ಲಮ ಮಾಡಿದ್ದಾರೆ.
H2O ಅಂದ್ರೆ ಒಂದು ಅಣು ಜಮ್ಲಜನಕ ಎರಡು ಅಣು ಜಲಜನಕ ಇವುಗಳ ಸಂಯೋಜನೆ ನೀರು . ನೀರನ್ನು ಶಕ್ತಿಯ ಮೂಲಕ ವಿದ್ಯುತ್ ತಯಾರಿಸ ಬಹುದು .ಅಲ್ಲಮರು ಇನ್ನೊಂದು ವಚನದಲ್ಲಿ ಉದಕದಲ್ಲಿ ಕಿಚ್ಚು ಹುಟ್ಟಿ ಸುಡುತಿಹುದು ಕಂಡೆ ಎಂದಿದ್ದಾರೆ. ಕಾಲಜ್ಞಾನಿ ಅಲ್ಲಮ ನಿಸರ್ಗದ ಮಡಿಲಲ್ಲಿ ಹುದುಗಿದ ಅಗಾಧ ಪ್ರಮಾಣದ ಶಕ್ತಿ ಹೊರ ಹಾಕಿದ್ದಾರೆ.. ನೀರಿನ ಆಳದಲ್ಲಿ ಲಾವಾ ಇದೆ ಬೆಂಕಿಯಂತ ರಸ ಭೂಮಿಯಲ್ಲಿದೆ . ನೀರಿನಲ್ಲಿ ಬೆಂಕಿ ಇದೆ ಆದರೆ ಭೂಮಿ ಮೇಲಿನ ನೀರನ್ನು ಅದು ಸುಡದು. ಅಂತಹ ಕಿಚ್ಚನ್ನು ಹೊಂದಿದ ನೀರು ನೀರನ್ನು ಸುಡದೆ ನೀರು ನೀರಾಗಿ ಇರಿವುದನ್ನು ದಾಖಲಿಸಿದ್ದಾರೆ.

ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗಟ್ಟುನಿಂದುದನಾರು ಬಲ್ಲರೊ?
ಕೆಳ ಕುಲದಲ್ಲಿದ್ದು ಅಂತಹ ಕುಲವನ್ನು ಅರಸದೆ ತಾತ್ವಿಕ ಸ್ವರೂಪ ತತ್ವ ನಿಷ್ಠೆ ನೆಲೆಗಟ್ಟಿನಲ್ಲಿ ಇರುವುದನ್ನು ಯಾರು ತಿಳಿದಿಲ್ಲ .ಜಾತಿ ವ್ಯವಸ್ಥೆ ಸಮಾಜದ ನೀರಿನಲಿದ್ದ ಬೆಂಕಿ ಇದ್ದ ಹಾಗೆ ಜಲಜನಕ ಮತ್ತು ಆಮ್ಲಜನಕ ಎರಡು ಭಿನ್ನ ಭಿನ್ನವಾಗಿ ಪ್ರತ್ಯೇಕಿಸುವ ಕೆಲಸ ನಡೆದಾಗ ಬೇರೆ ಬೇರೆ ಎನಿಸಿದ ವಾಯು ಬೆಂಕಿಯನ್ನು ಉಲ್ಬಣಿಸುತ್ತವೆ .ಆದರೆ ಅವುಗಳ ಸಮ ಪ್ರಮಾಣದ ಸಂಯೋಜನೆ ನೀರು ನೀರಾಗಿ ಉಳಿಯುವುದಲ್ಲದೆ ಅದು ಬೆಂಕಿಯನ್ನು ನಂದಿಸುತ್ತವೆ. ಹಾಗೆ ಸಮಾಜದಲ್ಲಿನ ಕುಲ ಜಾತಿ ವ್ಯವಸ್ಥೆ ಭಿನ್ನ ಕೋಮಿನ ಗುರುತು ಪಡಿಸುವದರಿಂದ ಅವು ಜಾತಿ ಕಿಚ್ಚಿಗೆ ಪೂರಕವಾಗಿರುತ್ತವೆ ಕುಲದ ನೆಲೆ ಕಾಯಕಕ್ಕೆ ಸೀಮಿತವಾಗಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂತ ಸುಂದರ ಪ್ರತಿಮೆ ಅಲ್ಲಮ ಬಳಸಿದ್ದಾರೆ. ಕುಲವು ಕಾಯಕದಿಂದ ಬಂದ ಹಣೆ ಪಟ್ಟಿ ಹೊರತು ಹುಟ್ಟಿನಿಂದಲ್ಲ. ಇದನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿಚಾರಿಸಿ ಬದುಕ ಬೇಕು ಅಂತಹ ವ್ಯಕ್ತಿಗಳನ್ನು ನಾನು ಕಂಡಿಲ್ಲ . ಜಾತಿ ವ್ಯವಸ್ಥೆ ಬಿಟ್ಟು ನೀತಿ ತತ್ವ ಸತ್ಯದ ಪಥವನ್ನು ಅರಿತವರು ಯಾರು ಎಂದು ಪ್ರಶ್ನಿಸಿದ್ದಾರೆ ಅಲ್ಲಮರು.

ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ ನಿಲವು ನೋಡಾ.

ಬಾಹ್ಯ ಜಗತ್ತಿನಲ್ಲಿ ಭಕ್ತ ಏನೇ ಆಗಿದ್ದರೂ ಸಹಿತ ಅಂತರಂಗದಲ್ಲಿ ಜಾತಿ ವಿರಹಿತನಾಗಿರಬೇಕು. ಹೊರಗೆ ಯಾವುದೇ ಕಾಯಕ ಕಸಬು ಮಾಡಿದರೂ ಸರಿ ಅದು ಸಮಾಜದ ಹಿತ ಕಾಯುವ ಕೆಲಸ ಎಂದು ಭಾವಿಸಬೇಕು. ಆದರೆ ಹೊರಗೆ ಇರುವ ರೂಪದಂತೆ ಒಳಗೆ ತೋರದೆ ಇರುವುದೇ ದೈವತ್ವದ ನಿಲುವು.
ತಮ್ಮ ಭೌತಿಕ ಅಸ್ತಿತ್ವಕ್ಕೆ ಮಹತ್ವ ಕೊಟ್ಟು ಅಂತರಂಗದಲ್ಲಿ ತನ್ನ ತಾನು ಹುಡುಕಾಡುವ ಕಷ್ಟದ ಕೆಲಸವಾಗಿ ಪರಿಣಮಿಸಿದೆ ನೀರಿನಲ್ಲಿರುವ ಆಮ್ಲ ಜನಕ ಮತ್ತು ಜಲ ಜನಕ ಬೇರೆ ಬೇರೆಯಾಗಿದ್ದು ಜೈವಿಕ ವಿಕಾಸಕ್ಕೆ ಪೂರಕವಾಗುವ ಹಾಗೆ ನೀರಿನಲ್ಲಿ ಅವೆರಡೂ ಒಂದಾಗಿ ಬೆರೆತು ನೀರಿನಲ್ಲಿ ಇರುವ ಅಸಮತೆಯ ಕಿಚ್ಚನ್ನು ಸುಡದೇ ನಂದಿಸುವ ಮಹತ್ತರ ಜವಾಬ್ದಾರಿಯಂತೆ ದೇವರ ನಿಲುವು ಗುಹೇಶ್ವಲಿಂಗದಲ್ಲಿ ಕಾಣಬಹುದು ಎಂದಿದ್ದಾರೆ.
ಜಾಲದ ಕಿಚ್ಚು ಜಲವ ಸುಡದೆ ತಂಪು ನೀರು ಜೀವ ಜಾಲದ ವರವಾಗಿ ಪರಿಣಮಿಸುವುದು ಇದು ನಿಜದ ನಿಲುವು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

Don`t copy text!