ಹೆಜ್ಜೆ

ಹೆಜ್ಜೆ

ಬದುಕೆ ಮರಳ
ಮೇಲಿನ ಹೆಜ್ಜೆ
ಯಾವಾಗ ವಿಧಿ
ಎಂಬ ತೆರೆ ಬಂದು
ಅಳಿಸಿಹಾಕುವುದೋ ಗೊತ್ತಿಲ್ಲ
ಕ್ಷಣದೊಳಗೆ ಸಂಭ್ರಮಿಸು
ಬದುಕ ಸಾರ್ಥಕವಾಗುದು
ಪ್ರೀತಿಗೆ ಋಣಿಯಾಗು
ಮಮತೆಯ ತೋರಣವಾಗು
ಎಲ್ಲರೊಳಗಡಗಿದ
ದೈವತ್ವಕ್ಕೆ ಶರಣಾಗು
ನಿನ್ನ ಹೆಜ್ಜೆಯ ಗುರುತಿಗೆ
ಇರಲಿ ಪ್ರೀತಿ ಜಾಗ
ಎಲ್ಲರೆದೆಯೊಳಗೆ
ಶಾಶ್ವತವಾಗಿ
ಮರಳ ಹೆಜ್ಜೆಯಳಿದರು
ಮನದ ಹೆಜ್ಜೆ ಸುಂದರ
ನೆನಪಾಗಿರಲಿ

ಡಾ. ನಿರ್ಮಲ ಬಟ್ಟಲ

One thought on “ಹೆಜ್ಜೆ

Comments are closed.

Don`t copy text!