ಗಜಲ್

ಗಜಲ್

ಹುತ್ತದಲ್ಲಿ ಇಲ್ಲದ ಹಾವಿಗೆ ಹಾಲೆರುವರು ನೋಡಯ್ಯ
ಹೊರಬಂದು ಬುಸ್ ಎನ್ನುವಲ್ಲಿ ಓಡುವರು ನೋಡಯ್ಯ

ಪಂಚಮಿ ಹಬ್ಬಕ್ಕೊಮ್ಮೆ ಭಕ್ತಿ ಬರುವುದು ಎಲ್ಲರಲ್ಲಿ
ಮನೆಯೊಳಗೆ ಬಂದರೆ ಕೊಲ್ಲುವರು ನೋಡಯ್ಯ

ರೈತರಿಗೆ ಉಪಕಾರಿ ಉರಗ ಬಳಗ ಗೊತ್ತಿಲ್ಲವೆ ?
ಕಂಡೊಡನೆ ಹೊಡಿ ಬಡಿ ಎನ್ನುವರು ನೋಡಯ್ಯಾ

ಸರಿಸೃಪವಿದಕ್ಕೆ ಹಲ್ಲಿನಲ್ಲಿ ಮಾತ್ರ ವಿಷವಿಹುದಯ್ಯ
ಇಲ್ಲಿ ದೇಹವೆಲ್ಲಾ ನಂಜಿನ ಮನುಷ್ಯರು ನೋಡಯ್ಯಾ

ಕಲ್ಲು ನಾಗರ ಮೇಲಿದ್ದ ಪ್ರೀತಿ ವಾಸ್ತವದಲ್ಲಿ ಕಾಣದು
ಅರಿವಿದ್ದೂ ಶಿಲೆಗೆ ಹಾಲು ಎರೆಯುವರು ನೋಡಯ್ಯಾ

ಹಸಿದ ಹೊಟ್ಟೆಗಳು ನೂರಾರು ಸುತ್ತ ಮುತ್ತಲು
ಹಾಲು ಬಿಸ್ಕಿಟ್ ಗೂ ಬರವಿದ್ದ ಜನರು ನೋಡಯ್ಯಾ

ದಯೆಯಲ್ಲಿಯೇ ದೇವ ಧರ್ಮವುಂಟು ಕವೀಶ್ವರ
ಸ್ಥಾವರಕ್ಕಿಂತಲೂ ಜಂಗಮವೇ ದೇವರು ನೋಡಯ್ಯಾ

ಈಶ್ವರ ಮಮದಾಪೂರ
೨೪/೦೭/೨೦೨೦
ಮೊಬೈಲ್ ಸಂಖ್ಯೆ – ೯೫೩೫೭೨೬೩೦೬

Don`t copy text!