ಅಣ್ಣನ ಮನೆಗೆ
ಅಣ್ಣನ ಮನೆಗೆ
ತಂಗಿಯ ಆಗಮನ
ಅಣ್ಣನ ಮನದಲಿ
ಆನಂದದ ಸಿಂಚನ
ಅಮ್ಮನ ಮನಸು
ಅರಳಿ ಹೂವಾಯ್ತು
ತಂಗಿಯ ಮನವು
ಹರುಷದಿ ಕುಣಿದಾಡಿತು
ಅಪ್ಪನ ಆನಂದಕೆ
ಪಾರವೇ ಇಲ್ಲ
ಮನೆಯಲ್ಲಿ ಮನದಲ್ಲಿ
ಹರುಷವೇ ಎಲ್ಲ
ನಾಗಪ್ಪನಿಗೆ ಹಾಲೇರೆದು
ಹಾಲುಂಡ ತವರೂರು
ಸದಾ ಹಾಲು ಜೇನಿನ
ಹೊಳೆ ಹರಿಯಲೆಂದು
ಹರಸುವಳು ತಂಗಿ
ತವರಿಗೆ ಬಂದೀಗ
ಅಮ್ಮನ ಮಾಡಿದ
ಬೆಲ್ಲದ ತಂಬಿಟ್ಟು
ಜೋಕಾಲಿ ಜೀಕುತ
ಸಿಹಿತಿನಿಸುಗಳ ತಿನ್ನುತ
ನಲಿದು ಗೆಳತಿಯರೊಡನೆ
ನಕ್ಕು ಹರಟೆಯ ಹೊಡೆದು
ತಿಂದು ಉಂಡು
ನಲಿಯುತಾ ಅವಳು
ನಾಲ್ಕು ದಿನವಿದ್ದು
ಮತ್ತೆ ಹೊರಡುವಳು
ಪತಿ ಬರಲು ಕರೆಯಲು
ಸಡಗರದಿಂದ ಹೊರಡುವಳು
ಸುಂದರ ನೆನಪುಗಳು ಬಿಟ್ಟು
ಮತ್ತೆ ಗಂಡನ ಮನೆಗೆ ಹೋದಳು
✍️ರೇಖಾ. ಮುತಾಲಿಕ್
ಬಾಗಲಕೋಟ