ವಚನ ದೀವಿಗೆ
ಇದೇಕಯ್ಯ ಈ ನೋವ ಬೆಸೆದೆ
ಹಾರುವ ಹಕ್ಕಿಗೆ ಪಂಜರದ
ಬೆಸುಗೆ ಬೆಸೆದೇಯೋ ತಂದೆ
ಹರಿವ ಹಾವ ಬಾಯೊಳಗೆ ಕಪ್ಪೆಯನಿರಿಸಿದೆ ಏಕೈ ತಂದೆ
ಬಿಲದ ಇಲಿಯ ಬದುಕಿಗೆ ಬೆಕ್ಕ ಬಿಟ್ಟೆ ಅದೇಕೋ ದೊರೆಯೆ
ಜಿಂಕೆ ಮೊಲ ಗೋವುಗಳ ಬೆನ್ನಿಗೆ
ಹುಲಿ ಸಿಂಹಗಳ ಬಿಟ್ಟು ನೋಡುವುದದೇಕೈ ತಂದೆ
ಬಸವ ಸಿಂಹ ಒಡಗೂಡಿ ಬದುಕಲು ನಾವು ಶಿವ-ಪಾರ್ವತಿಯರಲ್ಲ
ಹಾವು ಇಲಿಯ ಸಂಘವಿರಲು
ನಾವು ಗಣಪ ಕಾರ್ತಿಕರಲ್ಲವೈ
ಹೇ ತಂದೆ ವಿಪರ್ಯಾಸದಿಂ ನಮ್ಮ ಬಿಡಿಸಿ ಬಾಳಲನುವು ಮಾಡಿಕೊಡು ಹೇ ಶ್ರೀ ರಾಮಲಿಂಗೇಶ್ವರ ಪ್ರಭುವೇ
–ಸುಶೀಲಾ ಸೋಮಶೇಖರ್ ಹಾಸನ