ಬಂಧನಗಳು ಸುಂದರ..
ಸುಂದರ ಬಂಧನಗಳು ಚೆಂದಾಗಿ
ಇರುತಿರಲಿ
ಚೆಂದದ ಸಂಬಂಧಗಳು ಒಂದಾಗಿ, ಬೆಳೆಯಲಿ.
ಬಂಧನದ ಸಂಬಂಧಗಳು
ಉಸಿರಾಗಿ ಬೆರೆಯಲಿ,
ಅಂದ ಚೆಂದದ ಜೀವನವು ಹಸಿರಾಗಿ ಮೆರೆಯಲಿ.
ಹಸಿರು ಉಸಿರಲಿ ಬೆರೆತು ಹುಲುಸಾಗಿ ಚಿಗುರಲಿ
ಚಿಗುರಿ ಚಿಗುರಿ ಪರಿಸರವು
ರಮ್ಯವಾಗಿ ನಲಿಯಲಿ.
ಧರೆಯು ಹಸಿರುನುಟ್ಟು ಮುದ
ವಾಗಿ ಕಾಣಲಿ
ಗಗನವು ಧರೆಗೆ ಮುಖ ಕೊಟ್ಟು
ಸುಂದರವಾಗಿ ಮಿಂಚಲಿ.
ಹುಸಿ ಮುನಿಸಲಿ ಬಂಧನಗಳು
ಬಿಗಿಯಾಗಿ ಉಳಿಯಲಿ
ಉಳಿದು ಉಳಿದು ಸಂಬಂಧಗಳು, ಗಟ್ಟಿಯಾಗಿ ಬಿಗಿಯಲಿ.
–ಕೃಷ್ಣ ಬಬೀಡಕರ ವಿಜಯಪುರ