e-ಸುದ್ದಿ ಮಸ್ಕಿ
ತಾಲೂಕಿನ ಹಾಲಾಪುರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತೊರಣದಿನ್ನಿ ಇವರ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಮಿಕ ರೋಗಗಳ ವಿಭಾಗದಿಂದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಆಚರಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ಮಾತನಾಡಿ ಮಧುಮೇಹ ಇತ್ತಿಚೀಗೆ ಎಲ್ಲಾ ಕಡೆ ಹರಡುತ್ತಿದೆ. ನಮ್ಮ ಜೀವನ ಶೈಲಿ, ಆಹಾರ ಪದ್ದತಿ ನಿಸರ್ಗದ ವಿರುದ್ಧವಾಗಿ ಅಳವಡಿಸಿಕೊಂಡಿರುವದು ಕಾರಣವಾಗಿದ್ದು ಜೀವನ ಶೈಲಿಯನ್ನು ಬದಲಿಸಬೇಕಾಗಿದೆ. ಮಧುಮೇಹ ಬರಲು ಹಲವಾರು ಕಾರಣಗಳಿವೆ. ಅದನ್ನು ತಡೆಗಟ್ಟಬೇಕಾದರೆ ಮಾನಸಿಕ ಒತ್ತಡ ರಹಿತ ಜೀವನ ನಡೆಸುವದು, ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕೆಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಶಿವಕುಮಾರ ಮಾತನಾಡಿ ಮಧುಮೇಹಿಗಳು ಶಿಸ್ತುಬದ್ಧ ಜೀವನ ನಿರ್ವಹಿಸಬೇಕು. ವಾಯುವಿಹಾರ, ನಿಯಮಿತ ಮಾತ್ರೆ ಸೇವನೆ ಮತ್ತು ತಪಾಸಣೆ ಮಾಡಿಸಿಕೊಳ್ಳಬೇಕ ಎಂದು ತಿಳಿಸಿದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಗೌರಮ್ಮ, ಆಶಾ ಕಾಂiÀರ್iಕರ್ತೆಯರಾದ ಮೋನಮ್ಮ, ಸುಜಾತ, ಸರಸ್ವತಿ,ದೇವಮ್ಮ, ವಿಜಯಲಕ್ಷ್ಮೀ ಹಾಗೂ ಇತರರು ಭಾಗವಹಿಸಿದ್ದರು.