ನನ್ನ ದೇಶ ಭಾರತ
ನನ್ನ ದೇಶ ಭಾರತ
ನನ್ನ ಧರ್ಮ ಭಾರತ
ಇಲ್ಲ ನನಗೆ
ಜಾತಿ ಗೋತ್ರ
ಬೇಡ ಸಮರ ಸಾಧನ
ಭಗತ್ ಆಜಾದ್ ಭೋಸ್
ಬಾಪು ಗ್ರಾಮ ಭಾರತ
ಹಿಂದೂ ಮುಸ್ಲಿಂ ಸಿಖ್
ಕ್ರೈಸ್ತ ಬೌದ್ಧ ಭಾರತ
ಬಸವ ಬೆಳಗಿದ
ನನ್ನ ಭಾರತ
ಏಕೆ ಕೋಮು ಕದನ
ವ್ಯಾಜ್ಯ ಶಾಂತಿ ಭಂಗವು
ಮನುಜ ಪಥ
ವಿಶ್ವ ಪಥ
ಹೆಜ್ಜೆ ಹಾಕುವ ಭಾರತ
ಬೇಡ ಬೇಡ
ರಕ್ತದೋಕುಳಿ
ಸ್ನೇಹ ಪ್ರೀತಿಯ ಭಾರತ
ಕಟ್ಟ ಬನ್ನಿ
ಧರ್ಮ ತೊರೆದು
ಗಟ್ಟಿಗೊಳ್ಳುವ ಭಾರತ
–ಡಾ ಶಶಿಕಾಂತ ಪಟ್ಟಣ ಪುಣೆ