ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಗಜ಼ಲ್🇮

🇮🇳 *ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಗಜ಼ಲ್

🇮

*ಸ್ವತಂತ್ರ ದೇಶದ ಅಮೃತ ಮಹೋತ್ಸವ* ಸಂಭ್ರಮಿಸಿದೆ ನೋಡು ಸಖಿ
ತ್ರಿವರ್ಣ ಧ್ವಜದಲಿ ಅಶೋಕ ಚಕ್ರವು ಕಂಗೊಳಿಸಿದೆ ನೋಡು ಸಖಿ

ಹರುಷ ಉಲ್ಲಾಸ ಸಂತಸ ಮನದಲಿ ಹೊನಲಾಗಿ ಹರಿಯುತಿದೆ ಸುತ್ತ
ಕಳೆದ ಕಾಲದ ಕರಾಳ ದಿನಗಳ ಮರೆಯಿಸಿದೆ ನೋಡು ಸಖಿ

ಜಾತಿ ಮತ ಪಂಥಗಳ ಸಂಕೋಲೆಯು ಕಳಚಿ ಬೀಳುತಿದೆ ಇಲ್ಲಿ
ಬಡವ ಬಲ್ಲಿದ ಭೇದವ ತೊರೆದು ಒಂದಾಗಿಸಿದೆ ನೋಡು ಸಖಿ

ಗುಲಾಮ ದಾಸ್ಯದ ಬಂಧನ ಹರಿದ ಮಹಾತ್ಮರ ಸ್ಮರಿಸಬೇಕು ಎಂದೂ
ಸ್ವಾತಂತ್ರ್ಯದ ಗೆಲುವಿನ ಧೀರ ಹುತಾತ್ಮರ ನೆನಪಿಸಿದೆ ನೋಡು ಸಖಿ

ಸಮೃದ್ಧಿಯ ಹಸಿರು ತ್ಯಾಗದ ಕೇಸರಿ ಶಾಂತಿಯ ಬಿಳಿಯು ಬೇಗಂ
ದೇಶದ ಪ್ರಜೆಗಳ ಪ್ರಗತಿಯ ನಡೆಗೆ ಸೊಗಯಿಸಿದೆ ನೋಡು ಸಖಿ.

🇮🇳 ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!