ಶಿಕ್ಷಕ ಭೀಮಪ್ಪಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
e-ಸುದ್ದಿ, ಮಸ್ಕಿ
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಭೀಮಪ್ಪ ಅವರಿಗೆ ೨೦೨೨-೨೩ನೇ ಸಾಲಿನ ಶಿಕ್ಷಣ ಇಲಾಖೆಯಿಂದ ಕೊಡಮಾಡುವ ಪ್ರತಿಷ್ಟಿತ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೌಢಶಾಲಾ ವಿಭಾಗದಿಂದ ರಾಜ್ಯದ ೧೧ ಜನ ಶಿಕ್ಷಕರಿಗೆ ಪ್ರತಿವರ್ಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ವರ್ಷ ಮಸ್ಕಿಯ ವಿಜ್ಞಾನ ಶಿಕ್ಷಕರಾದ ಭೀಮಪ್ಪ ಅವರು ಆಯ್ಕೆ ಆಗಿದ್ದಾರೆ. ಸೆ.೫ ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರದಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವಿಕರಿಸಲಿದ್ದಾರೆ.
ಭೀಮಪ್ಪ ಶಿಕ್ಷಕರು ಆಧುನಿಕ ತಂತ್ರಜ್ಞಾನ ಬಳಸಿ ವಿಜ್ಞಾನ ಬೋಧನೆಯಲ್ಲಿ ಸಕ್ರಿಯಾವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ತಮ್ಮದೆ ಆದ ಬ್ಲಾಗ್ ನ ಮೂಲಕ ರಾಜ್ಯದ ಸರ್ಕಾರಿ ಪ್ರೌಡಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಡಿಜಿಟಲ್ ಸಂಪನ್ಮೂಲಗಳನ್ನು ಹಲವಾರು ವರ್ಷಗಳಿಂದ ನೀಡುತ್ತಿದ್ದಾರೆ.
ಭಿಮಪ್ಪ ಅವರ ಬ್ಲಾಗ್‌ನ್ನು ಪ್ರಸಕ್ತವಾಗಿ ಸುಮಾರು ೩೨ ಲಕ್ಷ ವೀಕ್ಷಣೆಗಳನ್ನು ಪಡೆದ ಕರ್ನಾಟಕದ ಏಕೈಕ ವಿಜ್ಞಾನ ಬ್ಲಾಗ್ ಆಗಿರುವುದು ಇವರ ಹೆಗ್ಗಳಿಕೆ. ಇವರು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸ್ಟೇಟ್ ಎಸ್‌ಎಸ್‌ಎಲ್‌ಸಿ ಸ್ಟೂಡೆಂಟ್ ಗ್ರೂಪ್ ಹೆಸರಿನ ಟೆಲಿಗ್ರಾಮ್ ಗುಂಪನ್ನು ಹಲವಾರು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೧೦ ಸಾವಿರಕ್ಕೂ ಅಧಿಕ ವಿದ್ಯರ್ಥಿಗಳಿದ್ದು ಅದರ ಮೂಲಕ ಎಲ್ಲ ವಿಷಯಗಳ ಸಂಪನ್ಮೂಲಗಳನ್ನು ಉಚಿತವಾಗಿ ಹಂಚಿ ರಾಜ್ಯದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕಾರಣಿಕರ್ತರಾಗಿದ್ದಾರೆ.
ಭೀಮಪ್ಪ ಅವರು ವಿಜ್ಞಾನ ವಿಷಯದಲ್ಲಿ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ನನಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಈ ಪ್ರಶಸ್ತಿ ನನ್ನ ಶಾಲೆಯ ಮಕ್ಕಳಿಗೆ ಸಲ್ಲಬೇಕು. ರಾಜ್ಯದ ನಾನ ಕಡೆ ವಿದ್ಯಾರ್ಥಿಗಳು ಮೆಚ್ಚಿದ್ದಾರೆ. ಪರಿಶ್ರಮಕ್ಕೆ ಸಂದ ಪ್ರಶಸ್ತಿ ಯಾಗಿದೆ. ಶಿಕ್ಷಣ ಇಲಾಖೆಯಿಂದ ನೀಡಲ್ಪಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನನ್ನನ್ನು ಇಲಾಖೆ ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಉತ್ತೇಜನ ನೀಡಿದೆ. ಈ ಪ್ರಶಸ್ತಿಯನ್ನು ನನ್ನ ಕುಟುಂಬ, ಸ್ನೇಹಿತರು ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ ಅರ್ಪಿಸುತ್ತೇನೆ.
-ಭೀಮಪ್ಪ ಶಿಕ್ಷಕರು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮಸ್ಕಿ.