ಖಾಸಗಿ ಶಾಲೆಗೆ ಸೆಡ್ಡು ಹೊಡೆದ ದಿಗ್ಗನಾಯಕನಬಾವಿ ಸರ್ಕಾರಿ ಶಾಲೆ
ಶಿಕ್ಷಕರಿಗೆ ಶಾಲೆಯೇ ಮನೆ, ವಿದ್ಯಾರ್ಥಿಗಳಿಗೆ ಪ್ರವಾಸಿತಾಣವಾದ ಶಾಲೆ
e-ಸುದ್ದಿ ಮಸ್ಕಿ
ಪಾಲಕರು ಖಾಸಗಿ ಶಾಲೆಗಳ ಮೇಲೆ ತೋರಿಸುವ ಪ್ರೀತಿಯನ್ನು ಸರ್ಕಾರಿ ಶಾಲೆಗಳ ಮೇಲೆ ತೋರಿಸುತ್ತಿಲ್ಲ. ಖಾಸಗಿ ಶಾಲೆಗÀಳೆಂದರೆ ಮುಗು ಮುರಿಯುವರೇ ಹೆಚ್ಚು. ಆದರೆ ಮಸ್ಕಿ ತಾಲ್ಲೂಕಿನ ದಿಗ್ಗನಾಯಕನಬಾವಿ ಶಾಲೆ, ಖಾಸಗಿ ಶಾಲೆಯನ್ನು ಮೀರಿಸಿ ಯಾವುದಕ್ಕ ಕಮ್ಮಿ ಇಲ್ಲದಂತೆ ಉತ್ತಮ ಶಾಲೆಯನ್ನಾಗಿ ರೂಪಿಸಿದ ಕೀರ್ತಿ ಇಲ್ಲಿನ ಶಿಕ್ಷಕರಿಗೆ ಸಲ್ಲುತ್ತದೆ.
೧ನೇ ತರಗತಿಯಿಂದ ೫ ನೇ ತರಗತಿ ವರೆಗೆ ಶಾಲೆ ಇದೆ. ಮಕ್ಕಳ ಸಂಖ್ಯೆ ೯೨, ಅದರಲ್ಲಿ ಗಂಡು ಹುಡುಗರು ೪೬ ಮತ್ತು ಹೆಣ್ಣು ಹುಡಗಿಯರು ೪೬ ಸಮ ಸಮವಾಗಿ ಇದ್ದಾರೆ.
ಒಂದು ಶಾಲೆಯಂದರೆ ಸುಸಜ್ಜಿತ ಕಟ್ಟಡ, ಶೌಚಾಲಯ ವ್ಯವಸ್ಥೆ, ಕುಡಿಯಲು ಶುದ್ಧ ನೀರು, ಆಟದ ಮೈದಾನ, ಮಕ್ಕಳಿಗೆ ಕೂಡಲು ಬೆಂಚು ಇವುಗಳನ್ನು ಮೂಲಬೂತವಾಗಿ ಸೌಕರ್ಯ ಒದಗಿಸಬೇಕು.
ಮೇಲಿನ ಎಲ್ಲಾ ಸೌಕರ್ಯಗಳನ್ನು ಇಲ್ಲಿನ ಶಾಲೆ ಪಡೆದುಕೊಂಡಿದೆ. ಇವು ಇಷ್ಟೇ ಇದ್ದರೆ ಸುದ್ದಿಯಾಗುವ ಪ್ರಮೇಯ ಬರುತ್ತಿರಲಿಲ್ಲ. ಇವುಗಳನ್ನು ಮೀರಿ ಮಕ್ಕಳ ಕಲಿಕೆಗೆ ಬೇಕಾಗುವ ಅತ್ಯೂತ್ತಮ ಸೌಕರ್ಯ ಕಲ್ಪಿಸಿದ್ದು ಈ ಶಾಲೆಯ ವೈಶಿಷ್ಟೆ.
ಕಲಿನಲಿ ತರಗತಿಯ ಮಕ್ಕಳಿಗಾಗಿ ಆಕರ್ಷಕ ದುಂಡು ಮೇಜುಗಳು, ನಲಿಕಲಿ ತಟ್ಟೆಗಳು, ಮಕ್ಕಳು ಸುಖವಾಗಿ ಕೂಳಿತುಕೊಳ್ಳಲು ಬಣ್ಣ ಬಣ್ಣದ ಕುರ್ಚಿಗಳನ್ನು ಜೋಡಿಸಿದ್ದಾರೆ. ಶಾಲೆಯಲ್ಲಿ ಯಥೇಚ್ಚವಾಗಿ ಬೆಳಕು ಮತ್ತು ಗಾಳಿ ಬರುವ ರೀತಿಯಲ್ಲಿ ಸುವೆವ್ಯಸ್ಥೆ ಮಾಡಿದ್ದಾರೆ. ಕಲಿನಲಿ ಕಾರ್ಡಗಳನ್ನು ಜೋಡಿಸಲು ಮತ್ತು ಮಕ್ಕಳಿಗೆ ಸುಲಭವಾಗಿ ಸಿಗುವಂತೆ ಕಪಾಟುಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ.
೪ ಮತ್ತು ೫ನೇ ತರಗತಿ ಮಕ್ಕಳ ಎತ್ತರಕ್ಕೆ ತಕ್ಕಂತೆ ಡೆಸ್ಕ್ ಮತ್ತು ಕುರ್ಚಿಗಳನ್ನು ಲೈನ್ ಪ್ರಕಾರ ಜೋಡಣೆ, ಕಲಿಕೋಪಕರಣಗಳ ಚಾರ್ಟ ವ್ಯವಸ್ಥೆ, ಗಣಿತ ಕಿಟ್‌ಗಳ ಮೂಲಕ ಬೋಧನೆ ಮಾಡಲಾಗುತ್ತದೆ. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ ಆಸಕ್ತರಿಂದ ೧ ಲಕ್ಷ ರೂ. ಮೌಲ್ಯದ ಪುಸ್ತಗಳನ್ನು ಉಡುಗೊರೆಯಾಗಿ ಸಂಗ್ರಹಿಸಿಕೊಂಡು ಉತ್ತಮ ಗ್ರಂಥಾಲಯ ಮಾಡಿದ್ದು ವಿಶೇಷವಾಗಿದೆ. ಮತ್ತೊಂದು ವಿಶೇಷವೆಂದರೆ ಮಕ್ಕಳಿಗೆ ತಂತ್ರಜ್ಞಾನ ಕಲಿಕೆಗೆ ಅನುಕೂಲವಾಗುವಂತೆ ಖಾಸಗಿ ಕಾರ್ಪೋರೇಟ್ ಕಂಪನಿಗಳ ಸಹಾಯದಿಂದ ಕಂಪ್ಯೂಟರ್ ದಾನ ಪಡೆದುಕೊಂಡು ಕಂಪ್ಯೂಟರ್ ಕಲಿಸುತ್ತಿರುವುದು ಇಲ್ಲಿನ ಶಿಕ್ಷಕರ ಹೆಗ್ಗಳಿಕೆಯಾಗಿದೆ. ಅಷ್ಟೇ ಅಲ್ಲ. ಸ್ಮಾರ್ಟ ಟಿ.ವಿ ಸಹಾಯದಿಂದ ಅನೇಕ ವಿಡಿಯೋಗಳನ್ನು ತೋರಿಸಿ ಪಾಠ ಮಾಡುತ್ತಿದ್ದಾರೆ. ಹೈಟೆಕ್ ಆಲ್ ಇನ್ ಒನ್ ಪ್ರಿಂಟರ್ ಮೂಲಕ ಮಕ್ಕಳಿಗೆ ಅನುಕೂಲವಾಗುವ ಚಟುವಟಿಕಾ ಹಾಳೆಗಳನ್ನು ಮುದ್ರಿಸಿ ಮಕ್ಕಳಿಗೆ ನೀಡುತ್ತಾರೆ.
ಪಠ್ಯತೇರ ಚಟುವಾಟಿಕೆಯ ಭಾಗವಾಗಿ ಶಾಲೆಯ ಆವರಣದಲ್ಲಿ ನೂರಕ್ಕು ಹೆಚ್ಚು ವಿವಿಧ ರೀತಿಯ ಮರಗಳಿದ್ದು ಶಾಲೆ ನಂದನ ವನದಂತಿದೆ. ಅಂದ ಚಂದ ಹೆಚ್ಚಿಸಲು ಸಾಕಷ್ಟು ಶೋ ಗಿಡಗಳನ್ನು ಪಾಟ್‌ಗಳಲ್ಲಿ ನೆಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲು ಶಾಲಾ ಆವರಣದಲ್ಲಿ ದೊಡ್ಡ ಕಟ್ಟೆ ಕಟ್ಟಿಕೊಂಡಿದ್ದಾರೆ.
ಮಕ್ಕಳು ಬಿಸಿಯೂಟ ಮಾಡಲು ಮನೆಯಿಂದ ಪಾತ್ರೆ ತರಬಾರದು ಎಂದು ಶಿಕ್ಷಕರೇ ಪಾಲಕರ ಮನ ಒಲಿಸಿಕೊಂಡು ತಟ್ಟೆ, ನೀರಿನ ಗ್ಲಾಸ್ ಸಂಗ್ರಹಿಸಿದ್ದಾರೆ. ತಟ್ಟೆಗಳನ್ನು ನೀಟ್ ಆಗಿ ಜೋಡಿಸಲು ಸಾöö್ಯಂಡ್ ತಾಯಾರಿಸಿಕೊಂಡಿದ್ದಲ್ಲದೆ ಮಕ್ಕಳಿಗಾಗಿ ಇಡ್ಲಿ ಮಾಡಲು ಇಡ್ಲಿ ಪಾತ್ರೆ, ಇತರೆ ಅಡುಗೆ ಸಮಾನುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ.
ಉತ್ತಮ ಗುಣಮಟ್ಟದ ಬೋಧನೆ ಈ ಶಾಲೆಯಲ್ಲಿ ಸಿಗುತ್ತಿದ್ದು ಪ್ರತಿವರ್ಷ ಈ ಶಾಲೆಯಿಂದ ೫-೮ ಮಕ್ಕಳು ಸ್ಪಧಾತ್ಮಕ ಪರೀಕ್ಷೆ ಬರೆದು ನವೋದಯ, ಮೊರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ.
೧ ರಿಂದ ೫ನೇ ತರಗತಿ ಶಾಲಾ ಮಕ್ಕಳನ್ನು ಇಬ್ಬರೇ ಇಬ್ಬರು ಶಿಕ್ಷಕರು ನೋಡಿಕೊಳ್ಳುತ್ತಿದ್ದು ವರದೇಂದ್ರ ಶಿಕ್ಷಕರು ಕಳೆದ ೧೪ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ ಪ್ರಭಾರಿ ಮುಖ್ಯೋಪಾಧ್ಯಯರಾಗಿದ್ದರೆ. ಇವರ ಜೊತೆಗೆ ಪರಮಾನಂದ ಶಿಕ್ಷಕರು ಕಳೆದ ೧೨ ವರ್ಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಈ ಇಬ್ಬರು ಶಿಕ್ಷಕರು ಶಾಲೆಯನ್ನು ತಮ್ಮ ಮನೆಯಂತೆ ನೊಡಿಕೊಳ್ಳುತ್ತಿದ್ದಾರೆ. ಮಕ್ಕಳು ಶಾಲೆಗೆ ಪ್ರವಾಸಿ ತಾಣಕ್ಕೆ ಬರುವಂತೆ ಖುಷಿ ಖುಷಿಯಾಗಿ ಬರುತ್ತಾರೆ.
—————————————–
ಸರ್ಕಾರ ನಮಗೆ ವೇತನ ಕೊಡುತ್ತದೆ ಎಂದು ನೌಕರಿ ಮಾಡುವುದಲ್ಲ. ಶಿಕ್ಷಕರ ಮೇಲೆ ವಿಶೇಷವಾದ ಜವಬ್ದಾರಿ ಇದೆ. ಮಕ್ಕಳನ್ನು ಮುಂದಿನ ಸತ್ಪçಜೆಗಳನ್ನಾಗಿ ರುಪಿಸುವ ಹೊಣೆಗಾರಿಕೆ ಇದೆ. ಹಾಗಾಗಿ ನಮ್ಮ ಕೆಲಸ ನಮಗೆ ತೃಪ್ತಿ ತರುವಂತೆ ಮಾಡಬೇಕು. ಆ ರೀತಿಯಾಗಿ ಮಾಡಿದ ತೃಪ್ತಿ ನನಗೆ ಇದೆ. ಪಾಲಕರ ಸಹಕಾರವು ಮುಖ್ಯವಾಗಿದೆ.
-ವರದೇಂದ್ರ ಮುಖ್ಯ ಗುರು ದಿಗ್ಗನಾಯಕನಬಾವಿ ಕಿರಿಯ ಪ್ರಾಥಮಿಕ ಶಾಲೆ
————————————————————————–
ಮಕ್ಕಳು ಶಾಲೆಗೆ ನಗು ನಗುತ ಬರುವಂತಾಗಬೇಕು. ಶಾಲೆಯಂದರೆ ಮಕ್ಕಳ ಪಾಲಿಗೆ ಜೈಲು ಆಗಬಾರದು. ಅದೊಂದು ಕಲಿಕೆಯ ಮಂದಿರವಾಗಬೇಕು. ಮಕ್ಕಳೊಂದಿಗೆ ನಾವು ಮಕ್ಕಳಾದಾಗ ಮಾತ್ರ ಉತ್ತಮವಾಗಿ ಕಲಿಸಲು ಸಾಧ್ಯವಾಗುತ್ತದೆ. ಹೊಸದನ್ನು ಕಲಿಯಲು ಮಕ್ಕಳು ಸಿದ್ದರಿರುತ್ತಾರೆ. ಕಲಿಸಲು ನಾವು ಸಿದ್ದರಿರಬೇಕು.
-ಪರಮಾನಂದ ಶಿಕ್ಷಕರು ದಿಗ್ಗನಾಯಕನಬಾವಿ ಕಿರಿಯ ಪ್ರಾಥಮಿಕ ಶಾಲೆ