ಶ್ರೀ ಗುರುಭ್ಯೋನ್ನಮಹ:
ವಂದೇ ಗುರೂO,
ಇವೊತ್ತು ಶಿಕ್ಷಕರ ದಿನಾಚರಣೆ. ಗುರುವಿನ ಮಹತ್ವವನ್ನು ತಿಳಿಸುವ ದಿನ .
“ಗುರು” ಎಂದರೆ ಯಾರು ? ತನ್ನ ಶಿಷ್ಯನನ್ನು ಸರಿಯಾದ ಮಾರ್ಗ ತೋರಿ ಜೀವನದ “ಗುರಿ”ಯೆಡೆಗೆ ಕರೆದೊಯ್ಯುವವನೇ ನಿಜವಾದ ಗುರು ..
ಆಧ್ಯಾತ್ಮದ ದಾರಿಯನ್ನು ಅರಿಸಿಕೋಂಡ ಶಿಷ್ಯನಿರಲಿ, ಪಾರಮಾರ್ಥೀಕ ದಾರಿಯನ್ನು ಆರಿಸಿಕೋಂಡ ಶಿಷ್ಯನಿರಲಿ, ಸರಿಯಾದ ಮಾರ್ಗ ತೋರಿ ಜೀವನದ ಸಾರ್ಥಕತೆಯನ್ನು ಅರಿವಿಗೆ ತೋರುವವ ನಿಜವಾಗಿಯೂ “ಗುರು ” ಎನಿಸಿಕೊಳ್ಳುತ್ತಾನೆ .
ನಮ್ಮ ದೇಶದಲ್ಲಿ ಗುರು ಶಿಷ್ಯರ ಬಾಂಧವ್ಯ ಅನುಪಮವಾಗಿತ್ತು .ಮೊದಲು ಇದ್ದ ಗುರುಕುಲದ ಪದ್ಧತಿ ಶಿಷ್ಯನ ನಿಜವಾದ ಏಳಿಗೆಗೆ ಕೋಂಡೊಯ್ಯುತ್ತಿತ್ತು ..ನಮ್ಮ ದೇಶದ ಅಗಾಧ ಜ್ಞಾನ ಸಂಪತ್ತು ಮತ್ತು ಐಶ್ವರ್ಯ ಯಾವಾಗ ಜಗತ್ತಿಗೆ ತಿಳಿಯಿತೋ, ಆವಾಗ ನಮ್ಮ ಐಶ್ವರ್ಯದ ಜೊತೆಗೆ ಜ್ಞಾನಸಂಪತ್ತಿಗೂ ಕುಂದುಂಟಾಗಲು ಪ್ರಾರಂಭಿಸಿತು ..ನಮ್ಮ ಶಿಕ್ಷಣ ಪದ್ಧತಿಯನ್ನೇ ಕಿತ್ತೆಸೆದು, ಬ್ರಿಟಿಶರು, ತಮ್ಮ ಅನುಷ್ಠಾನವನ್ನು ತಂದು,”english “ಅಂದ್ರೆ ಸರ್ವಶ್ರೇಷ್ಠ ಎಂಬಂತೆ ಬಿಂಬಿಸಿ “ಸಂಸ್ಕ್ರತ ” ಭಾಷೆಯ ಶ್ರೇಷ್ಟತೆಯನ್ನೂ ನಮ್ಮ “ಸಂಸ್ಕೃತಿ” ಯನ್ನೂ ಮೂಲೆಗುಂಪು ಮಾಡಿದರು ..
ಶಿಕ್ಷಕರೇಂದರೇ ಗೌರವ ಕೊಡುವ ದಿನಗಳು ಮರೇಯಾಗುತ್ತಿವೆ ..ನಮ್ಮ ಸಂಸ್ಕ್ರತಿಯನ್ನೂ ನಾವು ಮರೆಯುವುದು ಬೇಡ ..
“ಗುರು ಸಾಕ್ಷಾತ್ ಪರಬೃಹ್ಮ “ಎಂಬುದನ್ನು ಎಂದಿಗೂ ನೆನಪಲ್ಲಿಟ್ಟು,ಗುರುಗಳಿಗೆ ಸಾವಿರ ಸಾವಿರ ಪ್ರಣಾಮಗಳನ್ನು ತಿಳಿಸೋಣ .
ತಾಯಿಯೂ ಕೂಡ ಮೊದಲ ಗುರು, ಪುಟ್ಟ ಹೆಜ್ಜೆಇಡಲು ಕಲಿಸಿ, ಬಾಳ ದೋಣಿಯನ್ನು ಹೇಗೆ ನಡೆಸಬೇಕೇಂಬುದನ್ನು ಹೇಳಿಕೊಟ್ಟ ಮಹಾಗುರು ..ಇಲ್ಲಿ ಶಿವಾಜಿಯ ತಾಯಿ “ಜೀಜಾಬಾಯೀಯನ್ನು ನೆನೆಸಿ ಕೊಳ್ಳಲೇಬೇಕು, ಮಗನಿಗೆ ಧೀರತೆಯನ್ನು ಹೇಳಿಕೊಟ್ಟು, “ಹಿಂದೂ “ರಾಜ್ಯವನ್ನು ಕಟ್ಟಲು ಹುರಿದುಂಬಿಸಿದ ಮಹಾಮಾತೆ ..
ಅರ್ಜುನನ ಜೀವನರಥ ಹೊಯ್ದಾಟದಲ್ಲಿದ್ದಾಗ, ಅವನ ರಥವನ್ನೂ ಮುನ್ನಡೆಸಿ, ಅವನನ್ನು ಸರಿಯಾದ “ಗುರಿ ” ಯೆಡೆಗೆ ಕರೆದೊಯ್ದ
“ಶ್ರೀಕೃಷ್ಣ ” ಗೀತೆ ಬೋಧಿಸಿ ಜಗದ್ಗುರುವಾದ .
ಹೀಗೆ ನಮ್ಮ ಬಾಳಲ್ಲೂ ನಮಗೆ ವಿದ್ಯೆ ಕಳಿಸಿದ ಗುರುಗಳಿದ್ದಾರೆ .ನನ್ನ ತಂದೆ ಯೂ ಕೂಡ ನಿಜಾರ್ಥದಲ್ಲಿ ನನಗೆ ಗುರುವಾಗಿದ್ದರು.
1 ನೇ ವರ್ಗದಿಂದ college ನಲ್ಲಿ ಕಲಿಸಿ ನನ್ನನ್ನು ತಿದ್ದಿ ತೀಡಿದ ಎಲ್ಲ ಗುರುಗಳಿಗೆ ಮನ ಪೂರ್ವಕ ನಮಸ್ಕಾರಗಳು ..
ಆಗ college ಕಲಿತ ವಿಷಯಗಳು ಇನ್ನೂ ನಮಗೆ ನೆನಪಿಗೆ ಬರುತ್ತವೆ ಎಂದರೆ ಅವರು ಕಲಿಸುವ ರೀತಿ ಹೇಗಿತ್ತು ಎಂದು ಊಹಿಸಬಹುದು.
ಈಗಿನ ಕಾಲದ ಮಕ್ಕಳು ಗುರುಗಳಿಗೆ ಗೌರವ ಕೊಡಿ, ಅವರ ಮಾತಿಗೆ ಬೆಲೆ ಕೊಡಿ ಅಂತ ವಿನಂತಿಸುತ್ತೇನೆ ..
✍ರೇಖಾ ..