ಸರ್ಕಾರಿ ನೌಕರರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ-ಎಸ್.ಷಡಕ್ಷರಿ
e-ಸುದ್ದಿ ಮಸ್ಕಿ
ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರರ ಕುಟುಂಬಗಳಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವವ ಯೋಜನೆಯ ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು ಈಗಾಘಲೇ ಸರ್ಕಾರಿ ಆದೇಶ ಜಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಎಸ್.ಷಡಕ್ಷರಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ‘ ಯೋಜನೆ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಆ್ಯಪ್ ಸಿದ್ಧವಾಗುತ್ತಿದೆ. ಶೀಘ್ರದಲ್ಲಿ 6 ಲಕ್ಷಕ್ಕೂ ಹೆಚ್ಚು ನೌಕರರು ಮತ್ತು ಕುಟುಂಬದ ಸದಸ್ಯರು ಉಪಯೋಗ ಪಡೆಯಲಿದ್ದಾರೆ.
ಸರ್ಕಾರಿ ನೌಕರರ ಫೇ ಕಮಿಷನ್ ವರದಿ ಜನವರಿಯಲ್ಲಿ ಜಾರಿಗೆ ಬರುತ್ತದೆ. ಶಿಕ್ಷಕರ ಪರಿಸ್ಥಿತಿ ಶೂಚನೆಯಾಗಿದೆ.. ಶಿಕ್ಷಕರು ಸ್ವಾಭಿಮಾನದಿಂದ ಕೆಲಸ ಮಾಡುವಂತಾಗಬೇಕು,.
ವಿವಿಧ ನೌಕರರ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿದರೆ ಸಮಸ್ಯೆಗಳನ್ನು ಪರಿಹರಿಸಬಹುದು ಎಂದರು,
7 ನೇ ವೇತನ ಆಯೋಗ ಜಾರಿಗೆ ಸಿಎಂ ಒಪ್ಪಿದ್ದಾರೆ. 40 ವರ್ಷಗಳಿಂದ ಆಗದ ನೌಕರರ ಕೆಲಸಗಳು ಬಿ.ಎಸ್. ಯಡಿಯೂಪ್ಪ ಸಿಎಂ ಆಗಿದ್ದ ಅವದಿಯಲ್ಲಿ ಆಗಿವೆ ಎಂದರು,
ಪುಣ್ಯಕೋಟಿ ಯೋಜನೆ ಯಶಸ್ವಿಗೆ ನೌಕರರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ‘ ನೌಕರರು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿದಾಗ ಸರ್ಕಾರಗಳಿಗೆ ಉತ್ತಮ ಹೆಸರು ಬರುತ್ತದೆ ಎಂದರು.
ತಹಶೀಲ್ದಾರ್ ಕವಿತಾ ಆರ್. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ್ , ಪದಾಧಿಕಾರಿಗಳು ಇದ್ದರು.
ಮೆರವಣಿಗೆ : ಸರ್ಕಾರಿ ನೌಕರರ ತಾಲ್ಲೂಕು ಪ್ರಥಮ ಸಮಾವೇಶ ಹಿನ್ನೆಲೆಯಲ್ಲಿ ಗಾಂಧಿ ನಗರದಿಂದ ಆರಂಭವಾದ ಮೆರವಣಿಗೆಗೆ ಶಾಸಕ ಆರ್. ಬಸನಗೌಡ ಚಾಲನೆ ನೀಡಿದರು.
ತೆರೆದ ವಾಹನದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್. ಷಡಕ್ಷರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ತಾಸೀಯಾ, ಹಗಲು ವೇಷಗಾರರ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.