ಬಿನ್ನಹ
ಮಬ್ಬು ಮುಸುಕಿದೆ ಮನಕೆ
ಇಬ್ಬಗೆಯ ದಾರಿಯ ನಡೆಗೆ
ತಬ್ಬಿಬ್ಬುಗೊಳುತಲಿ ಸಾಗಿಹೆ.
ಮಂದಮತಿಯಾಗಿ ನಿಂದಿಹೆನು
ಇಂದು
ಸಂದು ಗೊಂದಿನಲಿ ಸಾಗುತಿಹೆ
ಇಂದು
ಸಂದದ ದಾರಿಯಲಿ ಇರುತಿಹೆ
ಇಂದು
ಅಂದ ಚೆಂದದ ದಾರಿ ತೋರುತ ನೀನು
ನನ್ನ ಅಂತರಂಗದ ಕದವ ತೆರೆ
ಯುತ ನೀನು
ನಿನ್ನ ಅನನ್ಯ ಭಕುತಿಯಲಿ ಇರಿಸುತ ನೀನು.
–ಕೃಷ್ಣ ಬೀಡಕರ.