ಚಿರತೆ ದಾಳಿಗೆ ಆಕಳು ಕರು ಬಲಿ, ಆತಂಕದಲ್ಲಿ ಗ್ರಾಮಸ್ಥರು

ಚಿರತೆ ದಾಳಿಗೆ ಆಕಳು ಕರು ಬಲಿ, ಆತಂಕದಲ್ಲಿ ಗ್ರಾಮಸ್ಥರು

e-ಸುದ್ದಿ ಮಸ್ಕಿ‌

ಚಿರತೆ ದಾಳಿಗೆ ಆಕಳು ಕರು ಬಲಿಯಾಗಿರುವ ಘಟನೆ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಹೊಲವೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ.
ತಾಲೂಕಿನ ಮಾರಲದಿನ್ನಿ ತಾಂಡದ ನಿವಾಸಿ ಧನಂಜಯನಾಯ್ಕ ಅವರು ಗುಡ್ಡದ ಪಕ್ಕದಲ್ಲಿನ ತನ್ನ ಜಮೀನಿನಲ್ಲಿ ವಾಸವಾಗಿದ್ದು, ಹೊಲದಲ್ಲಿ ಕಟ್ಟಿ ಹಾಕಿದ್ದ, ಆಕಳಿನ ಕರುವಿನ ಮೇಲೆ ರಾತ್ರಿ ಚಿರತೆ ದಾಳಿ ಎಸಗಿ ಕರುವಿನ ಅರ್ಧ ಭಾಗ ತಿಂದು ಹಾಕಿದೆ,
ನಾಯಿ ಬೊಗಳಿದ ಶಬ್ದಕ್ಕೆ ಮನೆಯಲ್ಲಿನ ಕುಟುಂಬಸ್ಥರು ಎದ್ದು ಗದ್ದಲ ಮಾಡಿದಕ್ಕೆ ಚಿರತೆ ಪರಾರಿಯಾಗಿದ್ದು, ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬೆನ್ನಲ್ಲೆ ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ ಅದಿಕಾರಿ ಹುಸೇನ ಭಾಷಾ ಅವರು ಗುಡ್ಡದ ಮೇಲೆ ಓಡಾಡಿ ಸ್ಥಳ ಪರಿಶೀಲನೆ ಮಾಡಿದರು.

 


ಆಕಳಿನ ಕರು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಒದಗಿಸುವುದಕ್ಕೆ ಸರ್ಕಾರಕ್ಕೆ‌ ವರದಿ ಕೊಡಲಾಗುತ್ತದೆ, ಅಗತ್ಯ ದಾಖಲೆ‌ ನೀಡಬೇಕೆಂದು ಎಂದು ನೊಂದ ಕುಟುಂಬಕ್ಕೆ ಭರವಸೆ ನೀಡಿದರು.
ಮಸ್ಕಿ ಪಟ್ಟಣದಲ್ಲಿ ಪ್ರತೇಕ್ಷವಾಗಿದ್ದ ಚಿರತೆ, ತಪ್ಪಿಸಿಕೊಂಡು ಮಾರಲದಿನ್ನಿ ತಾಂಡಾದ ಗುಡ್ಡದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ರೈತರು, ಮಹಿಳೆಯರು ಕೃಷಿ ಚಟುವಟಿಕೆ ಕೈಗೊಳ್ಳಲು ಭಯ ಪಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Don`t copy text!