ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ , ಖರ್ಗೆ ಮನೆಗೆ ಧಾವಿಸಿದ ಸೋನಿಯಾ !
e-ಸುದ್ದಿ ದೆಹಲಿ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ನೆಹರೂ ಕುಟುಂಬದ ಸಂಪ್ರದಾಯ ಬದಲಾಗಿದೆ.
ಖರ್ಗೆಯವರು ಗೆದ್ದ ಬಳಿಕ ಸೋನಿಯಾ ಗಾಂಧಿಯವರ ಭೇಟಿಗೆ ಸಮಯ ಕೇಳಿದ್ದರು.ಆದರೆ ಅವರು ಸೋನಿಯಾ ಸಮಯ ನೀಡಲಿಲ್ಲ. ಬದಲಿಗೆ ಸೋನಿಯಾ ಅವರು ಖರ್ಗೆ ನಿವಾಸಕ್ಕೆ ಧಾವಿಸಿ ಬಂದು ಹೂಗುಚ್ಛ ನೀಡಿ ಅಭಿನಂದಿಸಿದರು.
ಈ ಹಿಂದೆ ಸೋನಿಯಾ ಗಾಂಧಿ ಮನಮೋಹನ ಸಿಂಗ್ ಅವರ ಮನೆಗೆ ಹೋಗಿದ್ದು ಬಿಟ್ಟರೆ ಬೇರೆ ಯಾರ ಮನೆಗೂ ಹೋಗಿರಲಿಲ್ಲ. ಸೋನಿಯಾ ಗಾಂಧಿ ಖರ್ಗೆ ಮನೆಗೆ ಹೋಗುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಕಾಂಗ್ರೆಸ್ ಬದಲಾಗುತ್ತಿರುವ ಮುನ್ಸೂಚನೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ