ಶರಣರ ವಚನಗಳಲ್ಲಿ ಮಾನಸಿಕ ಸ್ವಾಸ್ಥತೆ
e-ಸುದ್ದಿ ಪುಣೆ
ವಚನ ಅಧ್ಯಯನ ವೇದಿಕೆಯಿಂದ ಅಂತರ್ಜಾಲ ಕಾರ್ಯಕ್ರಮದಲ್ಲಿ ಶರಣರ ಪರಿಚಯ ಕಾರ್ಯಕ್ರಮ ನಡೆಯಲಿದೆ.
ದಿನಾಂಕ –22 ಅಕ್ಟೋಬರ್ 2022, ಸಂಜೆ- 5 .00 ರಿಂದ 6.30, ರವರೆಗೆ ಗೂಗಲ್ ಮಿಟ್ ನಲ್ಲಿ ನಡೆಯಲಿದೆ.
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಆಯೋಜಿಸಿದೆ.
ವಿಶೇಷ ಉಪನ್ಯಾಸವನ್ನು – ಶರಣರ ವಚನಗಳಲ್ಲಿ ಮಾನಸಿಕ ಸ್ವಾಸ್ಥತೆ ಕುರಿತು ಶರಣೆ ಡಾ ನಿರ್ಮಲಾ ಬಟ್ಟಲ ಮಾತನಾಡಲಿದ್ದಾರೆ.
ವಚನ ಪ್ರಾರ್ಥನೆಯನ್ನು- ಶರಣೆ ವಿದ್ಯಾ ಮಗದುಮ ಮಾಡುವರು. ಸ್ವಾಗತ ಹಾಗೂ ಪ್ರಾಸ್ತಾವಿಕ ಹಾಗೂ ಪರಿಚಯವನ್ನು ಶರಣೆ ಸುಜಾತಾ ಪಾಟೀಲ ನೆರವೇರಿಸುವರು.
ಸಂಘಟಕ ಶಶಿಕಾಂತ ಪಟ್ಟಣ ಮಾರ್ಗದರ್ಶನ ಮಾಡಲಿದ್ದಾರೆ. ಶರಣೆ ರಾಜಶ್ರೀ ಥಳಂಗೆ ಅನುಭಾವ ಮಾಡಲಿದ್ದಾರೆ. ಶರಣು ಸಮರ್ಪಣೆಯನ್ನು ಶರಣೆ ಡಾ ದಾನಮ್ಮ ಝಳಕಿ ನಿರ್ವಹಿಸಲಿದ್ದಾರೆ. ವಚನ ಮಂಗಳ ವನ್ನು- ಶರಣೆ ಪ್ರೇಮಕ್ಕ ಹೊರಟ್ಟಿ ನಡೆಸಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಶರಣೆ ವಿದ್ಯಾ ಹುಂಡೇಕಾರ ನಡೆಸುವರು.