ಬೆಂಗಳೂರು ನಗರ ಗುಂಡಿಗಳ ಆಗರ
e-ಸುದ್ದಿ ಮಸ್ಕಿ
ನಮ್ಮ ನಿಮ್ಮೆಲ್ಲರ ಹೆಮ್ಮೆಯ ಬೆಂಗಳೂರು
ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ ಸಿಟಿ ಹೆಸರು ಮಾಡಿದೆ.
ಆದರೆ ನಿರ್ವಹಣೆಯಲ್ಲಿ ದಕ್ಷತೆಯನ್ನು ಕಳೆದುಕೊಂಡಿದೆ.
ಅದಕ್ಕೆ ಸಾಕ್ಷಿಯಾಗಿ, ಬೆಂಗಳೂರಿನ “ಕೆಂಪೇಗೌಡ ಬಸ್ ನಿಲ್ದಾಣ” ದಲ್ಲಿ ನಿರ್ಮಾಣವಾಗಿರುವ ರಸ್ತೆಯ ಗುಂಡಿಗಳಿಗೆ ಪ್ರತಿಭಟನೆಯಾಗಿ ಗುಂಡಿಗಳಿಗೆ ಕೆ.ಆರ್.ಎಸ್ ಪಕ್ಷದ ಮಹಿಳಾ ಘಟಕದಿಂದ ಪೂಜೆ ಆಯೋಜಿಸಲಾಗಿದೆ.
” ಅಂತರರಾಷ್ಟ್ರೀಯ ಮಟ್ಟದಲ್ಲಿ
ಹೆಸರು ಮಾಡಿರುವ ಬೆಂಗಳೂರು ನಗರವನ್ನು
ಗುಂಡಿಗಳ ತಾಣ ಎಂದು ಹೆಸರುವಾಸಿ ಮಾಡಿಸುತ್ತಿದೆ.
BBMP ಮಾಡುತ್ತಿರುವ ಕಳಪೆ ಕಾಮಗಾರಿಯಿಂದ ಮತ್ತು ಭ್ರಷ್ಟಾಚಾರ ವ್ಯವಸ್ಥೆಯಿಂದ. Bbmp ಗೆ ನಾಚಿಕೆ ಮಾನ ಮಾರ್ಯದೆಯನ್ನು ಉಳಿಸಿಕೊಂಡರೆ ಕೆಂಪೇಗೌಡ ಬಸ್ ನಿಲ್ದಾಣ ದಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಿಸಿ ಎಂದು
BBMP ಇಲಾಖೆಗೆ ಅಗ್ರಹ ಬೆಂಗಳೂರು ಮಹಿಳಾ ಉಸ್ತುವಾರಿ ಜನನಿವತ್ಸಲ ಆಗ್ರಹ ಮಾಡಿದ್ದಾರೆ.
ಈ ಗುಂಡಿ ಪೂಜೆ ಅಭಿಯಾನಕ್ಕೆ ಸುಮತಿ ಪುಷ್ಪ ರಾಮುರೆಡ್ಡಿ ಮುರಳಿ ಶ್ರೀಧರ್ ರವರು ಭಾಗವಹಿಸಿದರು.