ಆಶಾ ಭಾವನೆ

ಆಶಾ ಭಾವನೆ

ಬೇಸರಿಸದಿರು, ಕಾತರಿಸದಿರು
ಈ ಬಂಧನಗಳ ಎದುರು,
ಮಧುರ ಸಂಬಂಧಗಳ ಉಳಿಸಿ
ಬೆಳೆಸು.

ಒಡನಾಟ ಎಲ್ಲರೊಳು ಶುದ್ಧವಾ
ಗಿರಲಿ,
ಆಡುವ ನುಡಿಗಳು ಬದ್ಧತೆಯಲಿ
ಇರಲಿ,
ಒಲವಿನ ಸೊಗಡಿನಲಿ ಮೆರೆ
ಯುತ ಇರಲಿ.

ಈ ಸೊಬಗಿನ ಸುಂದರ ಜೀವನ
ದಲಿ
ಸುಖ ದುಃಖಗಳ ಸಮ ಮಿಳಿ
ತದಲಿ
ನಗು ನಗುತ ಸಾಗು ಈ ಉಯ್ಯಾಲೆಯಲಿ

ಕೃಷ್ಣ ಬೀಡಕರ. ವಿಜಯಪುರ

Don`t copy text!