ಸಂಶೋಧಕ ಇತಿಹಾಸವನ್ನು ವರ್ತಮಾನದ ಬೆಳಕಿನಲ್ಲಿ ನೋಡುತ್ತಾನೆ
(ಬೆಳಗಾವಿಯ ಡಾ.ನಿರ್ಮಲ ಬಟ್ಟಲ್ ಅವರ ಅಭಿಪ್ರಾಯ)
ಡಾ. ಶಶಿಕಾಂತ ಪಟ್ಟಣ ಸರ್ ಅವರಿಗೆ…..
ಒಂದು ವಾರದಿಂದ e-ಸುದ್ದಿ ವೆಬ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು ಎನ್ನುವ ಲೇಖನ ಸರಣಿಯಲ್ಲಿ , ತಮ್ಮ ಲೇಖನ ಮಾಲಿಕೆ ಇತಿಹಾಸ ಆಸಕ್ತರನ್ನು ಮತ್ತು ಓದುಗರನ್ನು ತಲುಪಿದೆ.
ಈ ಸರಣಿ ಓದಿನ ಕುರಿತು ನನ್ನದೊಂದು ಅಭಿಪ್ರಾಯ.
ರನ್ನನ ಗದಾಯುದ್ಧವು “ಮಹಾಭಾರತದ ಸಿಂಹಾವಲೋಕನ” ಎಂದು ವಿದ್ವಾಂಸರು ಅಭಿಪ್ರಾಯ ಪಡುವಂತೆ, ತಾವು ಕಿತ್ತೂರು ಇತಿಹಾಸ ನನ್ನು ಸಿಂಹಾವಲೋಕನ ಕ್ರಮದಲ್ಲಿ ಪ್ರಮುಖ ಅಂಶಗಳನ್ನು, ಹಿರಿಯ ಸಂಶೋಧಕರ ಅಭಿಪ್ರಾಯಗಳನ್ನು ವಿಶ್ಲೇಷಣೆ ಮಾಡಿ, ಊಹೆಗಳನ್ನು ತಾರ್ಕಿಕವಾಗಿ ಒರೆಗೆ ಹಚ್ಚಿ, ಸಾಧ್ಯತೆಗಳನ್ನು , ತಮ್ಮ ಅಭಿಪ್ರಾಯವನ್ನು ಸಾಧರ ಪಡಿಸುವುದರ ಮೂಲಕ ಹೊಸ ಆಯಾಮವನ್ನು ಕಿತ್ತೂರು ಇತಿಹಾಸಕ್ಕೆ ನೀಡಿದ್ದೀರಿ.
ಸಿನಿಮಾ ನಾಟಕ ಕಾದಂಬರಿಗಳು ಇತಿಹಾಸದ ದಾಖಲೆಗಳ ಆಧಾರದ ಮೇಲೆ ರಚಿತವಾದರೂ, ಅವು ಪೂರ್ಣ ಸತ್ಯ ವಾಗಿರಲಾರವು.ರಂಜನೆಯೆ ಅವುಗಳ ಪ್ರಮುಖ ಆಶಯವಾಗಿರುವುದರಿಂದ ಪಾತ್ರ, ಸನ್ನಿವೇಶ ಸೃಷ್ಟಿಸುವಲ್ಲಿ ಕಲ್ಪನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿರುತ್ತದೆ. ಸಾಮಾನ್ಯರು ಅದೇ ಸತ್ಯ ಘಟನೆ ಎಂದು ಭಾವಿಸುತ್ತಾರೆ.
ಸಂಶೋಧಕ ಮಾತ್ರ ಇತಿಹಾಸವನ್ನು ವರ್ತಮಾನದ ಬೆಳಕಲ್ಲಿ ಹೊಸ ಸಾಧ್ಯತೆಗಳನ್ನು ಊಹಿಸುತ್ತಾನೆ, ಒರೆಗೆ ಹಚ್ಚುತ್ತಾನೆ. ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಎಲ್ಲ ಆಕರಗಳನ್ನು(ಪ್ರಾಥಮಿಕ ಆಕರ, ದ್ವಿತೀಯ ಆಕರ, ಕ್ಷೇತ್ರ ಕಾರ್ಯ) ಅಭ್ಯಸಿಸಿ, ನಿಮ್ಮ ಅಭಿಪ್ರಾಯನ್ನು ಅತ್ಯಂತ ಮೌಲ್ಯ ಯುತವಾಗಿ ಮಂಡಿಸಿದ್ದಿರಿ. ಇನ್ನೊಂದು ಪ್ರಮುಖ ವಿಷಯ ಈ ದೇಶದ , ಈ ನಾಡಿನ ಯಾವುದೇ ಐತಿಹಾಸಿಕ ವ್ಯಕ್ತಿಯನ್ನು,ಅವರ ಕೊಡುಗೆ ಯನ್ನು ಜಾತಿಗೆ ಕಟ್ಟಿಹಾಕಿ ವಿಜೃಂಭಿಸುವುದು ಪ್ರಸ್ತುತ ನಡೆಯೂತ್ತಿರುವ ಖೇದಕರ ಸಂಗತಿ.
ಆ ಕಳಕಳಿಯು ನಿಮ್ಮ ಲೇಖನದಲ್ಲಿ ಮೂಡಿಬಂದಿದೆ.
ನಿಮ್ಮ ಲೇಖನ ಸರಣಿ ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಕೆಲಸ ಮಾಡಿವೆ. ಅಭಿನಂದನೆಗಳು.
ಹಾಗೆಯೆ ಲೇಖನ ಸರಣಿಯನ್ನು ತಮ್ಮe- ಸುದ್ದಿ ವೆಬ್ ಮ್ಯಾಗಜೀನ್ ಮೂಲಕ ಓದುಗರಿಗೆ ತಲುಪಿಸಿದ ಸಂಪಾದಕರಾದ ಶ್ರೀ ವಿರೇಶ ಸೌದ್ರಿ ಅವರಿಗೂ ಧನ್ಯವಾದಗಳು.
-ಡಾ. ನಿರ್ಮಲ ಬಟ್ಟಲ