ಭಕ್ತ ಕನಕದಾಸ
ಕನಕ ನಿವನು
ಯಾರನು ಕೆನಕಲಿಲ್ಲ
ಸಿಕ್ಕ ಕೊಪ್ಪರಿಗೆ ಹೊನ್ನವನು
ಕೊಟ್ಟು ತಿರುಗಿದನು ದಾಸನಾಗಿ
ಶ್ರೀಕೃಷ್ಣನ ಭಕ್ತನಾಗಿ
ಗುರು ವ್ಯಾಸರಾಯನ ಪ್ರೀತಿಯ ಶಿಷ್ಯನಾಗಿ
ಪರೀಕ್ಷಿಸಿದ ಪರೀಕ್ಷೆಗಳಲ್ಲಿ ಗೆಲುವಿನ ನಗೆ ಬೀರಿ
ಅರಿವಿನ ಕಣ್ ತೆರೆಸಿದ ದಾಸನಾಗಿ
ಬೀರಪ್ಪ ಬಚ್ಚಮ್ಮಳ ಒಡಲಿನ
ಹಸುಕಂದವು
ಬಾಡ ಗ್ರಾಮದ ಬಾಡದ ಕುಸುಮವು
ತಿಮ್ಮಪ್ಪನ ವರಪ್ರಸಾದದ ವರವ ನೀಡಿದ ವೀರಕುಮಾರನು
ಯುದ್ಧ ತ್ಯಜಿಸಿದ ಕಲಿಭೀಮನವನು
ಸಾಹಿತ್ಯ ಸುಧೆಯ ವರಪುತ್ರ
ನಳಚರಿತ್ರೆಯ ನಳಪಾಕ
ಹರಿಭಕ್ತಿಯ ಹರಿಕಾರ
ಮೋಹನ ತರಂಗಿಣಿ
ರಾಮ ಧಾನ್ಯ ಚರಿತ್ರೆಯ ಕೃತಿ ಕರ್ತೃ
ಉಗಾ ಭೋಗ ಸುಳಾದಿ
ಕೀರ್ತನೆಯ ಕುವರ
ಕನ್ನಡಮ್ಮ ನ ವೀರಪುತ್ರ
ಜನಿಸಿದ ಈ ದಿನ
ಶುಭ ತರಲಿ ಎಲ್ಲರಿಗೂ ಅನುದಿನ ಅನುಕ್ಷಣ
–ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ
ಮೂಡಲಗಿ
👌👌👌