ಬೆಳಗಾವಿ ಜಿಲ್ಲೆಯ ಪ್ರಥಮ ಕದಳಿ ಮಹಿಳಾ ಸಮಾವೇಶ
e-ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಪ್ರಥಮ ಕದಳಿ ಮಹಿಳಾ ಸಮಾವೇಶಕ್ಕೆ ಜಿಲ್ಲೆಯಾದ್ಯಂತ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ದೌಡಾಯಿಸಿದ ಮಹಿಳೆಯರ ದಂಡು.
ನಿರೀಕ್ಷೆ ಮೀರಿ ಯಶಸ್ವಿಯಾದ ಈ ಬೃಹತ್ ಸಮಾವೇಶದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಚೆನ್ನಮ್ಮ ನಾಡಿನ ಈ ಪ್ರಥಮ ಸಮಾವೇಶ ರಾಜ್ಯಮಟ್ಟದ ಸಮಾವೇಶಕ್ಕೆ ಕಡಿಮೆ ಇಲ್ಲ. ಇದು ಹೆಮ್ಮೆಯ ಸಂಗತಿ ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೊ.ರು. ಚೆನ್ನಬಸಪ್ಪನವರು ಗ್ರಹ ತಪಸ್ವಿನಿಯರು ಅನುಭಾವದ ಕಡೆಗೆ ಮುಖ ಮಾಡಿ ನಾಡು ನುಡಿ ಸಂಸ್ಕೃತಿ ಸಾಹಿತ್ಯ ದೇಶಾಭಿಮಾನವನ್ನು ಬೆಳೆಸಿಕೊಂಡು ಆದರ್ಶ ಮಹಿಳೆಯಾಗಿ ವಿಕಾಸ ಹೊಂದಲು ಕದಳಿ ವೇದಿಕೆ ಒಂದು ವರವಾಗಿದೆ ಎಂದರು.
ಗದಗ್ ತೋಂಟದಾರ್ಯ ಮಠದ ಜಗದ್ಗುರು ಡಾಕ್ಟರ್ ಸಿದ್ದರಾಮ ಸ್ವಾಮಿಗಳು ಶರಣ ಸಂಸ್ಕೃತಿಯ ಪರಂಪರೆ ಜೀವಂತಗೊಳಿಸಲು ದೇಶ ವಿದೇಶ ಜಿಲ್ಲೆಯಾದ್ಯಂತ ಕದಳಿ ಮಹಿಳಾ ವೇದಿಕೆ ತಾಲೂಕ ಘಟಕಗಳು ರಚನೆಗೊಂಡು ಮಹಿಳೆಯರು ಮುಂದಾಗಿರುವುದು ಸಂತಸ ತಂದಿದೆ ಎಂದರು. ಡಾ ಫಕೀರ್ ನಾಯಕ್ ಗಡ್ಡಿಗೌಡ ರಚಿತ ಬಸವ ಗೀತೆ ಲೋಕಾರ್ಪಣೆಗೊಂಡಿತು ಖ್ಯಾತ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರ ಮುಕ್ತಾಂಗನೆ ಮಹಾಕಾವ್ಯ ಲೋಕಾರ್ಪಣೆಗೊಂಡಿತು
ಗೋಕಾಕದ ಖ್ಯಾತ ಗಾಯಕಿ ವಿದ್ಯಾ ಮಗದುಮಗೆ ಕದಳಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಡಾಕ್ಟರ್ ಅಲ್ಲಮಪ್ರಭು ಮಹಾಸ್ವಾಮೀಜಿ ಅಥಣಿಯ ಮೋಟಗಿ ಮಠದ ಪೂಜ್ಯರು ಹೇಗುಣಿಸಿ ಪ್ರಭು ಮಹಾಂತ ಸ್ವಾಮೀಜಿ ಯವರು ನೇತೃತ್ವ ವಹಿಸಿದ್ದರು.
ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್ ಜಿಲ್ಲಾಧ್ಯಕ್ಷ ಶರಣೆ ಪ್ರೇಮಕ್ಕ ಅಂಗಡಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಮಳಗಲಿ ಗೌರವಾಧ್ಯಕ್ಷೆ ರಾಜೇಶ್ವರಿ ಕವಟಗಿಮಠ ಉಪಸ್ಥಿತರಿದ್ದರು.
ವಿವಿಧ ಜಿಲ್ಲೆ ತಾಲೂಕಿನ ಕದಳಿ ಮಹಿಳಾ ವೇದಿಕೆಯ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇದ್ದರು ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಿಗಿಮಠ ಬೈಲಹೊಂಗಲದ ಶ್ರೀಶೈಲ್ ಶರಣಪ್ಪನವರ್ ಮಹೇಶ್ ಕೋಟಗಿ ಮಹಾಂತೇಶ್ ಶೆಟ್ಟರ್ ಗೋಕಾಕದ ಮಹಾಂತೇಶ್ ತಾಂವಶಿ ಡಾಕ್ಟರ್ ಸಿ ಕೆ ನಾವಲಗಿ ಬೆಳಗಾವಿ ಯರಗಟ್ಟಿಯ ಅಶೋಕ ಹಾದಿಮನಿ ಜಿಲ್ಲೆಯ ಹಾಗೂ ಮಹಾನಗರದ ಗಣ್ಯ ಮಾನ್ಯರು ಅನೇಕ ಸಾಹಿತ್ಯ ದಿಗ್ಗಜರು ವಿವಿಧ ಮಹಿಳಾ ಸಂಘಟನೆಗಳು ಸಹಸ್ರ ಮಹಿಳೆಯರು ಹಾಜರಿದ್ದರು ಪ್ರಥಮ ಚಿಂತನಾಗೋಷ್ಠಿಯ ಅಧ್ಯಕ್ಷತೆಯನ್ನು ಬೆಳಗಾವಿಯ ಸಂಸದೆ ಮಂಗಳ ಸುರೇಶ್ ಅಂಗಡಿ ವಯಸಿದ್ದರು.
ಡಾಕ್ಟರ್ ವೀಣಾ ಹೂಗಾರ್ ಅಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು ಎರಡನೇ ಚಿಂತನಾಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಗಳ ಮೆಟ್ಗುಡ್ಡ ವಹಿಸಿದ್ದರು ಡಾಕ್ಟರ್ ನಾಗರತ್ನ ಪರಾಂಡಿ ವರ್ತಮಾನ ಕಾಲದ ಸಮಸ್ಯೆಗಳಿಗೆ ಶರಣೀಯರ ಸಂದೇಶಗಳು ಕುರಿತು ಉಪನ್ಯಾಸ ಮಾಡಿದರು.
ಸಮಾರೋಪದ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಡಾಕ್ಟರ್ ಅಲ್ಲಮ ಪ್ರಭು ಸ್ವಾಮೀಜಿಯವರು ವಹಿಸಿದ್ದರು. ಅಧ್ಯಕ್ಷತೆ ವಹಿಸಿದ ಬೆಳಗಾವಿ ಗ್ರಾಮೀಣ ಭಾಗದ ಜನಪ್ರಿಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಮುಖ್ಯ ಅತಿಥಿ ಸ್ಥಾನ ವಹಿಸಿದ ಜಿಲ್ಲಾ ಐಪಿಎಸ್ ಲೋಕಾಯುಕ್ತ ಅಧಿಕಾರಿ ಯಶೋಧಾ ಒಂಟಗೋಡಿ ಅವರ ಭಾಷಣ ಮಹಿಳೆಯರಲ್ಲಿ ಸ್ಪೂರ್ತಿಗೊಂಡು ಜನಮನ ಸೂರೆಗೊಂಡವು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದ ಅನೇಕ ಮಹನೀಯರನ್ನು ಸತ್ಕರಿಸಲಾಯಿತು ಜಿಲ್ಲಾಧ್ಯಕ್ಷ ಪ್ರೇಮಕ್ಕ ಅಂಗಡಿ ಸ್ವಾಗತಿಸಿದರು ವಿದ್ಯಾ ನೀಲಪ್ಪನವರ್ ವಂದಿಸಿದರು ಗೌರಮ್ಮ ಕರ್ಕಿ ನಿರೂಪಿಸಿದರು