ನೆಲದ ಜನಪದ ಸಂಸ್ಕೃತಿಯನ್ನು ಉಳಿಸುವುದು ಅಗತ್ಯ

ನೆಲದ ಜನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ.
– ಕವಿ ,ಶಿಕ್ಷಕ ಈಶ್ವರ ಮಮದಾಪೂರ

e-ಸುದ್ದಿ, ಧೂಪದಾಳ 

ಉಸಿರು ಮತ್ತು ಕಾಯಕದೊಂದಿಗೆ ಕನ್ನಡವನ್ನು ಬೆರೆಸಿ ಮುನ್ನಡೆಯಬೇಕಿದೆ ನೆಲದ ಜನಪದ ಸಂಸ್ಕೃತಿಯನ್ನು ಉಳಿಸಿವುದರೊಂದಿಗೆ ಕನ್ನಡತನವನ್ನು ಗಟ್ಟಿಗೊಳಿಸಬೇಕಿದೆ ಎಂದು ಶಿಕ್ಷಕ , ಕವಿ ಈಶ್ವರ ಮಮದಾಪೂರ ಅಭಿಪ್ರಾಯಪಟ್ಟರು
ಧೂಪದಾಳ ಘಟಪ್ರಭಾದ ಧೂಪದಾಳ ಸಿ.ಆರ್ ಸಿ. ಕೇಂದ್ರದವತಿಯಿಂದ ಶ್ರೀ ಮಹಾವೀರ ಪಾರೆಸಪ್ಪ ಕೇಮಲಾಪುರ ಶಾಲೆಯಲ್ಲಿ ಜರುಗಿದ ಅಮ್ಮನ ಆರೈಕೆಗೆ ಮಕ್ಕಳ ಹಾರೈಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಶುಗೀತೆ , ಜನಪದ ಗೀತೆಗಳು ಮತ್ತು ಕತೆಗಳು , ಚಿಕ್ಕ ಚಿಕ್ಕ ಇತರೆ ಕತೆಗಳನ್ನು ಹೇಳುವುದು ಮತ್ತು ಬರೆಸುವುದನ್ನು ರೂಢಿಸಬೇಕಾಗಿದೆ. ನಮ್ಮ ಸುತ್ತಲಿನ ಮತ್ತು ನಾಡಿನ ಸಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ ಇಂಗ್ಲಿಷ್ ನ್ನು ವ್ಯಾವಹಾರಿಕ ಭಾಷೆಯನ್ನಾಗಿ ಮಾತ್ರ ಇಟ್ಟುಕೊಂಡು ತಾಯಿ ಭಾಷೆಯಾದ ಕನ್ನಡವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.


ಧೂಪದಾಳ ಸಿ.ಆರ್.ಪಿ. ರಮೇಶ ಕೋಲ್ಕಾರ್ ಮಾತನಾಡುತ್ತಾ – ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರ್ಗದರ್ಶನದಲ್ಲಿ “ಅಮ್ಮನ ಆರೈಕೆಗೆ ಮಕ್ಕಳ ಹಾರೈಕೆ ಕಾರ್ಯಕ್ರಮವು ಗೋಕಾಕ ವಲಯದ ಎಲ್ಲ ಶಾಲೆಗಳಲ್ಲಿ ಯಶಸ್ವಿಯಾಗಿ ಜರುಗುತ್ತಿದ್ದು ಇದರಿಂದ ನಮ್ಮ ತಾಲೂಕಿನ ಸಾಹಿತಿಗಳು ಮತ್ತು ಕವಿಗಳನ್ನು ಸಮೀಪದಿಂದ ನೋಡುವಂತಾಗಿದೆ ಹಾಗೂ ಅವರ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸಲು ಅನುಕೂಲವಾಗಿದೆ ” ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಅಭಿನಂದನ ಕೆಮಲಾಪುರೆ ವಹಿಸಿದ್ದರು . ಬಿ.ಕೆ .ಸಪ್ತಸಾಗರ ಸರ್ , ಮುಖ್ಯೋಪಾಧ್ಯಾಯನಿ ಸ್ಮಿತಾ ಶಿರಹಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ಸವಿತಾ ಕಬ್ಬೂರ ಸ್ವಾಗತಿಸಿದರು ಶಿಕ್ಷಕರಾದ ಸಂತೋಷ ಜಾರಕಿಹೊಳಿ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಲ್ ಶಿರಹಟ್ಟಿ ವಂದಿಸಿದರು

Don`t copy text!