ಬಿಳಗಿಯಲ್ಲಿ ಕದಳಿ ಮಹಿಳಾ ವೇದಿಕೆ ಪದಾಧಿಕಾಗಳ ಪದಗ್ರಹಣ ಹಾಗೂ ಕಾರ್ಯ ಚಟುವಟಿಕೆ ಉದ್ಘಾಟನೆ ಸಮಾರಂಭ
e-ಸುದ್ದಿ ಬೀಳಗಿ
ಬಾಗಲಕೋಟೆ ಜಿಲ್ಲೆ ಬಿಳಗಿಯಲ್ಲಿ ಸೋಮವಾರ ದಿನಾಂಕ ೨೧-೧೧-೨೨ ರಂದು ಸಂಜೆ ೫ ಗಂಟೆಗೆ ಬೀಳಗಿಯ ಕಲ್ಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕದಳಿ ಮಹಿಳಾ ವೇದಿಕೆ ಪದಾಧಿಕಾಗಳ ಪದಗ್ರಹಣ ಹಾಗೂ ಕಾರ್ಯ ಚಟುವಟಿಕೆ ಉದ್ಘಾಟನೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಷ.ಭ್ರ.ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಚ್.ಬಿ.ಬನ್ನಟ್ಟಿ ಅಧ್ಯಕ್ಷರು ರಾಣಿ ಚನ್ನಮ್ಮ ಪತ್ತಿನ ಸಹಕಾರ ಸಂಘ ಅವರು ವಹಿಸುವರು. ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಶ್ರೀ ಎಲ್.ಬಿ.ಕುರ್ತಕೋಟಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಬೀಳಗಿಯ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಕಮಲಾಬಾಯಿ ಸೋಂಟದ, ಶ್ರೀ ವೀರಭದ್ರೇಶ್ವರ ಮಹಿಳಾ ಮಂಡಳಿಯ ಅಧ್ಯಕ್ಷೆ ಕಮಲಾಬಾಯಿ ಹಳ್ಳೂರು, ಭಾವಸಾರ ಕ್ಷತ್ರಿಯ ಮಹಿಳಾ ಮಂಡಳದ ಅಧ್ಯಕ್ಷೆ ಕಲಾವತಿ ಕರಣಿ, ರಡ್ಡಿ ಮಹಿಳಾ ಸರ್ವ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಪಾಟೀಲ ಉಪಸ್ಥಿತಿ ಇರುವರು.
ಪದಾಧಿಕಾರಿಗಳು : ಶ್ರೀಮತಿ ದಾನಮ್ಮ ನಾಗರಾಳ, ಗೌರವ ಅಧ್ಯಕ್ಷರು, ಶ್ರೀಮತಿ ವಿಜಯಶ್ರೀ ಇಟ್ಟಣ್ಣನವರ ಗೌರವ ಉಪಾಧ್ಯಕ್ಷರು, ಶ್ರೀಮತಿ ಡಾ.ರಾಜೇಶ್ವರಿ ಶೀಲವಂತ ಅಧ್ಯಕ್ಷರು, ಶ್ರೀಮತಿ ಶಶಿಕಲಾ ಜೋಳದ ಉಪಾಧ್ಯಕ್ಷರು, ಶ್ರೀಮತಿ ಅನುಪಮಾ ಕುಮಟಗಿ ಕೋಶಾಧ್ಯಕ್ಷರು, ಕು.ಅಶ್ವಿನಿ ಹಿರೇಮಠ ಕಾರ್ಯದರ್ಶಿ, ಶ್ರೀಮತಿ ರಾಜೇಶ್ವರಿ ಮಲ್ಲಿಕಾರ್ಜುನಮಠ ಸಹ ಕಾರ್ಯದರ್ಶಿ ಆಗಿ ಆಯ್ಕೆ ಆಗಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮಿ ಕೊಲ್ಹಾರ, ಶ್ರೀಮತಿ ಜಯಶ್ರೀ ಡಬರಿ, ಶ್ರೀಮತಿ ಜ್ಯೋತಿ ಬೆನ್ನಳ್ಳಿ, ಶ್ರೀಮತಿ ಮೇಘಾ ಪತ್ರಿ, ಶ್ರೀಮತಿ ರಶ್ಮಿಬೋರ್ಜಿ, ಶ್ರೀಮತಿ ಅನನ್ಯ ಪಾಟೀಲ, ಪಾಟೀಲ, ಶ್ರೀಮತಿ ಮಂಗಲಾ ಬೇವೂರ, ಕು.ದೀಪಾ ಕೋಳೂರಗಿ
ಸದಸ್ಯರಾಗಿ ಆಯ್ಕೆಯಾಗಿದ್ದಾರೆ.