ಎಲ್ಲಿ ಮರೆಯಾದೆ

ಎಲ್ಲಿ ಮರೆಯಾದೆ ಹೇ
ದೇವ ನೀನು?
ಎಲ್ಲಿ ಅರಸಲಿ ನಾ
ಹೇಳು ನಿನ್ನಾ!!ಪ!!

ಗಗನದೆತ್ತರದ ಗೋ
ಪುರದ ಗುಡಿಯಲೀ
ನಗುತಲೀ ಶಿಲೆಯಾ
ಗಿ ನಿಂತೆಯೇನೋ!!
ಬಗೆಬಗೆ ಪೂಜೆ ನೈ
ವೇದ್ಯ ಸ್ವೀಕರಿಸುತಾ
ಲೋಕದಾ ಚಿಂತೆ ಮ
ರೆತು ಮಲಗಿದೆಯಾ||

ಬೆಳಕನ್ನು ಹರಿಸಿ ತರು
ಲತೆಯ ನಲಿಸೀ,
ಚಲನ ಮೂಡಿಸುವ
ರವಿಕಿರಣ ನೀನೋ?
ಇಳೆಯನ್ನು ತಣಿಸೀ
ಹಸಿರನ್ನು ಬೆಳಸೋ
ಸಾಲು ಮೋಡಗಳ
ಒಡಲು ನೀನೋ?!!

ತಂಗಾಳಿಯಾಗಿ ವಿರ
ಹ ತಾಪವಾ ಕಳೆವ
ತಿಂಗಳಾ ಚಂದ್ರಮನ
ಕಾಂತಿಯು ನೀನೊ!!
ಅಂಗಳದೊಳು ಅರಳಿ
ಮನವ ಮೋಹಿಸುವ
ಚೆಂಗುಲಾಬಿಯ ಪರಿ
ಮಳವೆ ನೀನೋ?!!

ಎಲ್ಲಿ ನೋಡಿದರಲ್ಲಿ
ಬಲು ಸೋಜಿಗವೆ ಇಹುದು,
ಎಲ್ಲೆಲ್ಲು ಸೃಷ್ಠಿಯಾ
ಸೊಬಗೆ ಕಾಣುವುದು!
ಎಲ್ಲ ಹೃದಯಗಳಲ್ಲು
ನೀನೆ ನೆಲಸಿರಲು,
ಎಲ್ಲೇಕೆ ಹುಡುಕಲೀ
ಮಾಧವನೆ ನೀ ಎನ್ನೊ
ಳಿರಲು!!

 

ವಸುಧಾ

Don`t copy text!