ನಮ್ಮಲ್ಲಿ ನೈತಿಕತೆ ಇದೆಯೇ ?

ವ್ಯಕ್ತಿತ್ವ ವಿಕಸನ‌ ಮಾಲೆ

ನಮ್ಮಲ್ಲಿ ನೈತಿಕತೆ ಇದೆಯೇ ?

ನಮಲ್ಲಿ ಎಷ್ಟು ಜನರಿಗೆ ಈ ನೈತಿಕತೆ ಬಗ್ಗೆ ಗೊತ್ತಿದೆ ?? ಪರಿವರ್ತನೆ ಜಗದ ನಿಯಮ ಎಂದೂ ಹಿರಿಯರು ಹೇಳುತ್ತಾರೆ. ಆದರೇ ನನ್ನ ಪ್ರಕಾರ ಬದಲಾವಣೆ ಅನಿವಾರ್ಯ ಕೂಡ

ನಾವು ಇಷ್ಟ ಪಡಲಿ , ಬಿಡಲಿ ಅದು ಯಾವತ್ತಿಗೂ ಜಾರಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ @ನಾನು, @ನನ್ನಿಂದಲೇ, ಎಂಬ ಅಹಂ ತುಂಬಾ ಅತಿಯಾಗಿದೆ.

ಇಂಥವರು ಸೃಷ್ಟಿಸುವ ಸಂದರ್ಬಿಕ ನೈತಿಕತೆಯಿಂದ ಬಲಿಷ್ಠ ಸಮುದಾಯಗಳು ಬಲಿಷ್ಠ ಜನರು ಅವನತಿ ಹೊಂದುತ್ತಿದ್ದಾರೆ .

ಅದರಲ್ಲಿ ಕೂಡ ಬದಲಾಗುತ್ತಿರುವ ಇಂದಿನ ಮೌಲ್ಯಗಳಲ್ಲಿ ಶಾಲೆಗಳಲ್ಲಿ ಬಗ್ಗೆ ಸಮೀಕ್ಷೆ ನಡೆಸಿದ ಪ್ರಕಾರ ವಿದ್ಯಾರ್ಥಿಗಳಲ್ಲಿ ಕಂಡುಬರುವ ಅತಿ ಮುಖ್ಯ ಸಮಸ್ಯೆ ಎಂದರೆ ಶಿಕ್ಷಕರು ಕೊಟ್ಟಂತಹ ಹೋಂವರ್ಕ್ ಮಾಡದಿರುವುದು ಪುಸ್ತಕ ಪ್ರೇಮಿ ಯಾಗದಿರುವುದು , ತರಗತಿಯಲ್ಲಿ ಶಿಕ್ಷಕರಿಗೂ ಅಂಜದೆ ಕೈಗೆ ಸಿಕ್ಕ ವಸ್ತು ಎಸೆಯುವುದು, ಏನಾದರೂ ನೆಪ ಮಾಡಿ ಕ್ಲಾಸ್ ರೂಮಿಂದ ಓಡಿ ಹೋಗುವುದು , ಹೀಗೆ ತುಂಬಾ ವಿದ್ಯಾರ್ಥಿನಿಯರು ಮಾಡುತ್ತಾರೆ ಅಂತ ಅನೇಕ ಸ್ಕೂಲ್ ಗಳಿಂದ ಕೇಳಿ ಬರುತ್ತದೆ.

ಆದರೆ ಕೆಲ ಶಾಲೆಗಳಲ್ಲಿ ಅಷ್ಟೊಂದು ಏನು ವಿದ್ಯಾರ್ಥಿಗಳು ದಾರಿ ತಪ್ಪಿದವರಲ್ಲ, ಯಾಕೆಂದರೆ ಶಾಲೆಗಳಲ್ಲಿ ಶಿಕ್ಷಕರು ಕೂಡ ಅಷ್ಟೇ ಶಿಸ್ತು ಕ್ರಮ ಕೈಗೊಳ್ಳುತ್ತಿದ್ದಾರೆ.

ಅದಕ್ಕಾಗಿಯೇ ನಮ್ಮ ಹಿರಿಯರು ಹೇಳಿಕೊಟ್ಟಿರುವ ಹಿಂದಿನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾಗಿದೆ.

ಹಳೆಯ ಮೌಲ್ಯಗಳು ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ ಜವಾಬ್ದಾರಿ ,ಬದ್ಧತೆ ಪ್ರಮಾಣಿಕತೆ , ಮತ್ತು ರಾಷ್ಟ್ರಭಕ್ತಿ

ಇವುಗಳು ಎಂದೆಂದಿಗೂ ಕೂಡ ಅತ್ಯಂತ ಚಿರಕಾಲ ಉಳಿಯುವ ಮೌಲ್ಯಗಳಾಗಿವೆ.

ಯಾವುದೇ ಸಮಾಜದಲ್ಲಾದರೂ ಅಷ್ಟೇ ಅನೈತಿಕತೆ ಮತ್ತು ಅನ್ಯಾಯ ಅಸಮಾಧಾನಕ್ಕೆ ಕಾರಣವಾಗುತ್ತದೆ, ಅತಿಯಾಸೆ ಉಳ್ಳವರು ಅನೈತಿಕ ಸುಖ ಅನುಭವಿಸುವುದನ್ನು ತಡೆಯಬೇಕು, ಮೌಲ್ಯಗಳಿಗೆ ಬದ್ಧರಾದವರು ಈ ಕೆಲಸ ಮಾಡಬೇಕು. ಆಗ ಮಾತ್ರ ನೈತಿಕತೆಗೆ ಒಂದು ಬೆಲೆ ಬರುತ್ತದೆ. ಈ ಬದಲಾವಣೆಯ ದಾರಿಯಲ್ಲಿ ನಾವು ದಿಕ್ಕು ತಪ್ಪುತ್ತಿದೆವೆನೋ ಅಂತ ಅನಿಸುತ್ತಿದೆ.

ನೈತಿಕ ಹಿಡಿತ ಕಳೆದುಕೊಂಡ ಸಮಾಜ ಅವನತಿ ಹಾದಿ ಹಿಡಿಯುತ್ತಿದೆಯೇ ಈಗೀನ ದಿನಮಾನಗಳಲ್ಲಿ ಇದೇ ಹೆಚ್ಚಾಗಿ ಕಾಣುತ್ತೇವೆ.

ಜನರನ್ನು ನೀವು ನೈತಿಕತೆ ಇದ್ದವರಾ? ಒಳ್ಳೆಯವರಾ ಎಂದು ಕೇಳಿದಾಗ ಹೌದು!! ನಮ್ಮಲ್ಲಿ ನೈತಿಕತೆ ಒಳ್ಳೆತನ ತುಂಬಾ ಇದೆ ಎಂದು ಉತ್ತರಿಸುತ್ತಾರೆ.

ಹಾಗಾದ್ರೆ ನೀವು ಒಳ್ಳೆಯವರಾಗಿರಲು ಕಾರಣವೇನು? ಎಂದು ಕೇಳಿದರೆ ನಾನು ಮೋಸ ಮಾಡುವುದಿಲ್ಲ, ನಾನು ಸುಳ್ಳು ಹೇಳುವುದಿಲ್ಲ, ನಾನು ಕಳ್ಳತನ ಮಾಡುವುದಿಲ್ಲ, ಅದಕ್ಕೆ ನಾನು ತುಂಬಾ ಒಳ್ಳೆಯವನು ಎಂದು ಹೇಳುತ್ತಾರೆ.

ಹಾಗಾದ್ರೆ ನಿಜದಲ್ಲಿ ನಮ್ಮ ನೈತಿಕ ಗುಣಮಟ್ಟ ಅಷ್ಟು ಎತ್ತರವಾಗಿದೆಯೇ??

ನಿಮಗೆ ಗೊತ್ತಾ??

ನಮ್ಮ ನೈತಿಕತೆ ಮೇಲೆ ಪರಿಣಾಮ ಬೀರುವ ಸಂಗತಿಗಳು ಯಾವವು? ದುರಾಸೆ ,ಭಯ , ಒತ್ತಡ

ಅದರಲ್ಲು ವ್ಯವಹಾರದಲ್ಲಿ ನೈತಿಕತೆ ನೋಡಿದರೆ. ನೈತಿಕತೆ ಅಥವಾ ಅನೈತಿಕ ಕೊರತೆ ಇಂದಿನ ಕಾಲಕ್ಕೆ ಪ್ರತಿಯೊಂದು ವ್ಯಕ್ತಿಯಲ್ಲೂ ಕಾಣಬಹುದು, ದುರಾಸೆಯ ವೈದ್ಯರು, ಅನಗತ್ಯ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಅನಗ್ಯತಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾರೆ , ಅದೇ ರೀತಿ ವಕೀಲರು ಸತ್ಯವನ್ನೇ ತಿರುಚುತ್ತಾರೆ, ದೊಡ್ಡವರು ಚಿಕ್ಕವರು ಯಾವುದೇ ಭೇದ ಭಾವವಿಲ್ಲದೆ ಹಸಿ ಸುಳ್ಳು ಹೇಳುತ್ತಾರೆ , ಲೆಕ್ಕ ಬರೆಯುವರು ಕಾರ್ಯದರ್ಶಿಗಳು ಸದಾ ಸುಳ್ಳು ಹೇಳಲು ಶುರು ಮಾಡುತ್ತಾರೆ. ಹೀಗೇ ಇದ್ದಾಗ ಎಲ್ಲಿಂದ ನೈತಿಕತೆಯ ಬರಬೇಕು??

ನಮ್ಮ ಜೊತೆಗಿರುವರನ್ನು ನಾವು ವಂಚಿಸಿದರೆ ನಮ್ಮನ್ನು ನಾವು ವಂಚಿಸಿಕೊಂಡಂತಲ್ಲವೇ??

ಮನುಷ್ಯನ ಸಮೃದ್ಧತೆ ಜವಾಬ್ದಾರಿಯನ್ನು ತರುತ್ತದೆ, ಎಂಬ ಮಾತಿದೆ ,

ನೈತಿಕ ಮತ್ತು ಸಮಾಜದ ಹಂದರವನ್ನ ಹಾಳು ಗೆಡವಿ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದು ಎಂದಿಗೂ ಸಾಧ್ಯವಿಲ್ಲ. ಇದು ನಾವೆಲ್ಲಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ನೈತಿಕತೆ ಅನುಸರಿಸದೆ ಇರುವದು ಕಾನೂನು ಭಂಗ ಮಾಡುವುದರ ಪರಿಣಾಮಕ್ಕೆ ಸಮವಾಗುತ್ತದೆ, ಕೆಲವರಂತು ಎಂದಿಗೂ ನೈತಿಕವಾಗಿ ವರ್ತಿಸುವುದಿಲ್ಲ . ನಾನು ಸರಳ ಮಾರ್ಗದಲ್ಲಿ ಹೋಗುತ್ತಿದ್ದೇನೆ ಎಂದು ಅವರೆಂದುಕೊಳ್ಳುತ್ತಾರೆ ಆದರೆ ನಿಜ ಹೇಳಬೇಕೆಂದರೆ ಅದೇ ಕಠಿಣ ಮಾರ್ಗವಾಗಿರುತ್ತದೆ.

ಯಾರಾದರೂ ತಮ್ಮ ಮಕ್ಕಳನ್ನು ವಂಚಿಸಿ ಹೆಮ್ಮೆ ಪಡುತ್ತಾರ?? ಅಥವಾ ತಮ್ಮ ತಂದೆ ತಾಯಿಗೆ ಸುಳ್ಳು ಹೇಳಿ ಅವರಿಗೆ ಮೋಸ ಮಾಡಿ ಸುಖಿಯಾಗಿರುತ್ತಾರ?

ನಮ್ಮ ಸ್ವಾಭಿಮಾನವೆ ನಮ್ಮನ್ನು ಜಯದ ಹಾದಿಯಲ್ಲಿ ಮುನ್ನಡೆಸುತ್ತದೆ.

ಈ ಜನರು ಯಾಕೆ ಪ್ರಾವಿಣ್ಯ ಸಾಧಿಸುವುದಿಲ್ಲ? ಯಾಕೆ ಒಳ್ಳೆಯ ದಾರಿ ಹಿಡಿದುಕೊಂಡು ನೈತಿಕತೆಯ ಮೇಲೆ ತಮ್ಮ ಜೀವನವನ್ನು ಸೃಷ್ಟಿ ಮಾಡಿಸಿಕೊಳ್ಳುವುದಿಲ್ಲ?

ಇದಕ್ಕೆ ಕಾರಣ ಸೂಕ್ತ ನೋಟದ ಕೊರತೆ , ಸೀಮಿತ ನೋಟ ಸಾಧ್ಯತೆಗಳನ್ನು ಮೀರಿದ ಕನಸು ಕಾಣಬೇಕು , ಆಗ ಮಾತ್ರ ನಮ್ಮ ಕನಸು ನನಸಾಗುತ್ತದೆ. ಆಗ
ನಮಗೊಂದು ಕನಸಿದೆ ಎಂದು ಗೊತ್ತಾಗುತ್ತದೆ .

ಹಾಗಾದರೆ ಅದು ಏನು ಎಂದು ಯೋಚನೆ ಮಾಡಿದಾಗ ಮಾತ್ರ ಸಾಧನೆಯ ಪಥದಲ್ಲಿ ನಾವು ಸಾಗಬಹುದು.

ಹಿರಿಯರು ಹೇಳಿದ ಮಾತಿನ ಪ್ರಕಾರ ಎಲ್ಲಿ ನೋಟ ಒಂದು ವರ್ಷದ ಒಳಗಿನದು ಇರುತ್ತದೆಯೋ ಅಲ್ಲಿ ಹೂವನ್ನು ಬೆಳೆಯೋಣ, ಎಲ್ಲಿ ನಮ್ಮ ನೋಟ ಹತ್ತು ವರ್ಷದ ಒಳಗಿನದು ಇರುತ್ತದೆಯೋ ಅಲ್ಲಿ ಮರಗಳನ್ನು ಬೆಳೆಸೋಣ, ಎಲ್ಲಿ ನೋಟ ಅನಂತವಾಗಿದೆ ಅಲ್ಲಿ ಮನುಷ್ಯರನ್ನು ಬೆಳೆಸೋಣ ಅಂತ. ಎಷ್ಟೊಂದು ಸತ್ಯ ಅಲ್ಲವೇ???

ಮುಂದುವರೆಯುವುದು….

_ ಮೇನಕಾ ಪಾಟೀಲ್

Don`t copy text!