ವ್ಯಕ್ತಿತ್ವ ವಿಕಸನ ಮಾಲೆ
ನೈಜ ಗೆಳೆಯರಾರು?
ನಾವು ಸದಾ ಒಳ್ಳೆಯ ಸಂಗಾತಿ ಮಾಲಿಕ ,ನೌಕರ , ಮಕ್ಕಳು ಜೊತೆಗಿದ್ದವರೆಲ್ಲ ಒಳ್ಳೆಯರಾಗಿರಬೇಕೆಂಬ , ಹೀಗೆ ಅನೇಕರ ಹುಡುಕಾಟದಲ್ಲಿ ಇರುತ್ತೇವೆ. ಅದಕ್ಕೆ ಮೊದಲು ನಾವು ಒಳ್ಳೆಯರಾಗಿರಬೇಕೆಂಬುದನ್ನು ಮರೆಯುತ್ತೇವೆ.
ಪರಿಪೂರ್ಣ ವ್ಯಕ್ತಿ, ಪರಿಪೂರ್ಣ ನೌಕರಿ, ಪರಿಪೂರ್ಣ ಜೀವನ ಸಂಗಾತಿ , ಪರಿಪೂರ್ಣ ಗೆಳೆತನ, ಈ ಪ್ರಪಂಚದಲ್ಲಿ ಎಷ್ಟೊಂದು ವಿರಳ ಅಲ್ಲವೇ???
ಪರಿಪೂರ್ಣತೆಗಾಗಿ ಹುಡುಕಾಡಿದಂತೆಲ್ಲ ನಾವು ನಿರಾಶರಾಗುತ್ತೇವೆ. ಏಕೆಂದರೆ ಪ್ರತಿಯೊಂದು ರಲ್ಲೂ ಒಂದಲ್ಲ ಒಂದು ಕೊರತೆ ಒಂದು ಸಮಸ್ಯೆ ಇದ್ದೇ ಇರುತ್ತದೆ.
ಕೆಲ ವರ್ಷಗಳಿಂದ ಜೀವನವನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದೇನೆ . ಅಲ್ಲಿ ವಿವಾಹ ವಿಚ್ಛೇದನಗಳು, ಗೆಳೆತನದಲ್ಲಿ ಜಗಳ , ಗಂಡ ಹೆಂಡತಿರಲ್ಲಿ ಜಗಳ, ಅನೇಕ ಸಂಬಂಧಗಳಲ್ಲಿ ಬಿರುಕು, ಹೀಗೆ ಒಂದಲ್ಲ ಒಂದು ಸಮಸ್ಯೆ ಇದೆ.
ನೈಜ ಗೆಳೆತನ ಬಗ್ಗೆ ನೋಡುವುದಾದರೆ *ಗೆಳೆಯರನ್ನು ಹೊಂದುವುದು ಹಾಗೂ ಗೆಳೆಯರಾಗಿರುವುದು* ಎಷ್ಟೊಂದು ದೊಡ್ಡ ಜವಾಬ್ದಾರಿಯುತ ಕೆಲಸ.
ಗೆಳೆತನ ತ್ಯಾಗವನ್ನು ಬಯಸುತ್ತದೆ, ಗೆಳೆತನ ಸಂಬಂಧಗಳನ್ನು ಗಳಿಸಲು ತ್ಯಾಗ, ವಿಧೇಯತೆ , ಮತ್ತು ಪ್ರಬುದ್ಧತೆ, ಅಗತ್ಯವಾಗಿರುತ್ತದೆ.
ಇವು ಇದ್ದಲ್ಲಿ ಸ್ವಾರ್ಥ ಸ್ನೇಹವನ್ನು ನಾಶಪಡಿಸುತ್ತದೆ.
ಮಾಮೂಲಿ ಪರಿಚಯ ಬೆಳೆಸಿಕೊಳ್ಳುವುದು ಅತಿ ಸುಲಭ, ಆದರೆ ನೈಜ ಗೆಳೆತನ ಬೆಳೆಸಲು ಕಾಲಾವಕಾಶ ಬೇಕು. ಗೆಳೆತನಕ್ಕೆ ಪರೀಕ್ಷಕಗಳು ಕೂಡ ಎದುರಾಗುತ್ತವೆ. ಅದೆಲ್ಲ ದಾಟಿ ಮುಂದುವರೆದರೆ ಆ ಗೆಳೆತನ ಗಟ್ಟಿಯಾಗಿ ಬೆಳೆಯುತ್ತದೆ.
ನಿಜವಾದ ಗೆಳೆತನ ತಾನು ಪಡೆದಿದ್ದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ನಮ್ಮ ಕಷ್ಟ ಕಾಲದಲ್ಲೂ ಕೂಡ ಜೊತೆಗಿರುತ್ತದೆ.
ಹಾಗಾದ್ರೆ ಈ ಸುಭಿಕ್ಷದ ಗೆಳೆಯರಾರು?
ಇವರು ಹೇಗೆಂದರೆ ಮಳೆ ಇಲ್ಲದೆ ಸೂರ್ಯನಗುತ್ತಿರುವಾಗ ಛತ್ರಿ ನೀಡುತ್ತಾರೆ. ಮಳೆ ಬಂದಾಗ ಅದನ್ನು ಹಿಂದಕ್ಕೆ ಪಡೆಯುತ್ತಾರೆ
ಜನರು ಬೇರೆ ಬೇರೆ ಉದ್ದೇಶಕ್ಕಾಗಿ ಗೆಳೆತನ ಬೆಳೆಸುತ್ತಾರೆ ಇದು ತುಂಬಾ ವಿರಳ, ನಾವು ನೀವು ನೋಡುವಂತದ್ದು.
ಸಂತೃಪ್ತಿಗಾಗಿ ಗೆಳೆತನ ತನ್ನ ಅನುಕೂಲಕ್ಕಾಗಿ ಗೆಳೆತನ ಹೀಗೆಅನೇಕ ವಿಷಯಗಳಿವೆ.
@ಗೆಳೆತನದಿಂದ ಖುಷಿ ಸಂತಸ ದೊರೆಯುತ್ತಿರುವಷ್ಟು ದಿನ ನೀವು ಗೆಳೆಯರಾಗುತ್ತಿರಿ ಅಂಥವರೇ ಸುಭಿಕ್ಷದ ಗೆಳೆಯರು.
ಅನುಕೂಲತೆಗಳನ್ನ ಪಡೆಯಲಂದೆ ಬೆಳೆಸಿಕೊಳ್ಳುವ ಗೆಳೆತನ, ಗೆಳೆಯನ ಉಪಯುಕ್ತ ಪ್ರಯೋಜನ ಮುಗಿಯುವ ತನಕ ಅಷ್ಟೇ. ಅಲ್ಲಿಯವರೆಗೆ ಮಾತ್ರ ಈ ಗೆಳೆತನ ಜೀವಂತವಾಗಿರುತ್ತದೆ. ಇದು ಶಾಶ್ವತವಲ್ಲ.
ನನಗೆ ಅಕ್ಕ ಪಕ್ಕದಲ್ಲಿ ಜನರಿದ್ದಾರೆ ಹಾಗಂತ ನಾವು ಹೊಂದಿಕೊಂಡಿರುತ್ತೇವೆ. ಜೊತೆಗೂಡಿ ನಡೆಯುತ್ತೇವೆ. ಹಾಸ್ಯವನ್ನು ಹಂಚಿಕೊಳ್ಳುತ್ತೇವೆ. ತುರ್ತು ಪರಿಸ್ಥಿತಿಯಲ್ಲಿ ಅವರು ನಮಗೆ ಸಹಾಯವಾಗಬಹುದು ಎಂದು ಸ್ನೇಹ ಬೆಳೆಸುತ್ತೇವೆ ಅಷ್ಟೇ.
ಅದೇ ಉಪಯೋಗದ ಗೆಳೆತನಕ್ಕೆ ಬಹಳ ಹತ್ತಿರವಿರುವದರಿಂದ ಮನೆಯವರಂತೆ ಅವರು ತುಂಬಾ ಸಹಕಾರ ಆಗಿದ್ದರಿಂದ ಅವರ ಅನುಕೂಲತೆಗಾಗಿ ವೈದ್ಯರು, ವಕೀಲರು ಆಗಿರಬಹುದು, ಹೀಗೆ ಅವರಿಂದ ನಮಗೆ ಹೆಚ್ಚು ಉಪಯೋಗವಾಗಬಹುದು ಎಂದು ಕೂಡ ಅವರನ್ನ ಸ್ನೇಹ ಬೆಳೆಸುತ್ತೇವೆ.
ನನ್ನ ಶತ್ರುವಿನ ಶತ್ರು ನನ್ನ ಮಿತ್ರ ಸಾಮಾನ್ಯ ಶತ್ರುಗಳು ಬೆಳೆದಂತೆಲ್ಲ ಸ್ನೇಹ ಬೆಳೆಯುತ್ತದೆ . ಇದು ಸಾಮಾನ್ಯ. ಶತ್ರು ಮಿತ್ರರಲ್ಲಿ ಒಂದಾಗಿದೆ.
ಆದರೆ ನೈಜ ಗೆಳೆತನ
ಪರಸ್ಪರ ಗೌರವದ ಆಧಾರದ ಮೇಲೆ ನಿಂತಿರುತ್ತದೆ
ಗೆಳೆಯರಿಬ್ಬರ ಹೃದಯದಲ್ಲಿ ಪರಸ್ಪರ ಒಳ್ಳೆಯ ಭಾವನೆ ಇರುತ್ತದೆ , ಇಬ್ಬರು ಅದರಂತೆ ನಡೆದುಕೊಳ್ಳುತ್ತಾರೆ. ಅವರ ನಡತೆ, ಒಳ್ಳೆಯ ಗೆಳೆಯನ ರೂಪದಲ್ಲಿ ನಮ್ಮ ಕಡೆ ಹಿಂತಿರುಗಿ ಬರುತ್ತದೆ . ಇದು ನಮ್ಮ ಬದ್ಧತೆ , ನಡತೆ , ಮೇಲೆ ನಿಂತಿರುತ್ತದೆ .
ಸಮೃದ್ಧಿ ಗೆಳೆತನ ಬಡತನ ಅವರ ಬಣ್ಣ ಬಯಲು ಮಾಡಲು ಬಿಡುವುದಿಲ್ಲ.
ಸ್ನೇಹದ ಬಗ್ಗೆ ನಾನು ಒಂದು ಪದ್ಯದಲ್ಲಿ ನಾನು ನೋಡಿದ್ದೆ.
ನೀ ಸಂತಸದಿದ್ದರೆ ಹತ್ತಿರಕ್ಕೆ ಬರುವರು, ನೀ ದುಃಖಿಸಿದರೆ ದೂರ ಹೋಗುವರು, ನಿಮ್ಮ ಸುಖ ಸಂಪತ್ತಿನ ಸಂಪೂರ್ಣ ಮಾಹಿತಿ ಬೇಕು ಅವರಿಗೆ, ಸಂತಸದಿಂದಿರಿ ನಿಮ್ಮ ಕಷ್ಟಕಾರ್ಪಣ್ಯಗಳು ಬೇಡ ಅವರಿಗೆ , ಸಂತಸದಿಂದಿರಿ ನಿಮಗೆ ಮಿತ್ರರಾಗುತ್ತಾರೆ. ದುಃಖಿಸಿ ಕಳೆದುಕೊಳ್ಳುವಿರಿ ನೀವೆಲ್ಲರನ್ನ, ಪ್ರತ್ಯೇಕ ಚಿಂತಿಸಿದಿರಿ ಯಾರು ನಿರಾಕರಿಸುವುದಿಲ್ಲ ಮಧ್ಯಪಾನ. ಆದ್ರೆ ನೀವೊಬ್ಬರೇ ಕುಡಿಯಬೇಕು ಜೀವನದ ವಿಷಪಾನ ಈಗೀನ ಗೆಳತನ ಹೀಗೇನೇ
ನಿಜವಾದ ಗೆಳೆಯರು ಪರಸ್ಪರ ನೆರವಾಗುತ್ತಾರೆ, ಉಪಕಾರವಿರುವುದಿಲ್ಲ, ಗೆಳೆತನಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಾರೆ, ಸಂಬಂಧಗಳು ಕಾಲಾಂತರದಲ್ಲಿ ಬೆಳೆಯುತ್ತವೆ, ಅಕ್ಕರೆ ತಿಳುವಳಿಕೆ, ಮತ್ತು ತ್ಯಾಗದ ಬುನಾದಿ ಮೇಲೆ ಅದು ಬೆಳೆಯುತ್ತದೆ, ಮತ್ಸರ ಸ್ವಾರ್ಥ ಅಹಂ ಮತ್ತು ಕೊರತೆಗಳ ಮೇಲೆ ಸಂಬಂಧಗಳನ್ನು ನಮ್ಮ ಮೂಗಿನ ನೇರಕ್ಕೆ ಹೋಗ್ ಕೊಡದು, ಉದಾಸಿನ ಮಾಡಬಾರದು, ಒಮ್ಮೆ ಸಂಬಂಧ ಬೆಳೆದ ಮೇಲೆ ಅದಕ್ಕೆ ನೀರ್ ಏರದು ಪೂಜಿಸಬೇಕು. ಯಾರು ಪರಿಪೂರ್ಣರಲ್ಲ ಪರಿಪೂರ್ಣತೆ ನಿರೀಕ್ಷಿಸುವುದೆಂದರೆ ನಿರಾಶೆಯನ್ನು ಆಹ್ವಾನಿಸದಂತೆ.
ಹಾಗಾಗಿ ಇತರರ ಸ್ನೇಹ ಸಹಕಾರವಿಲ್ಲದೆ ಯಶಸ್ಸು ಸಾಧಿಸುವುದು ತುಂಬಾ ಕಷ್ಟ. ಸರಳ ಮತ್ತು ಇತರರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಬೇಕು . ಹೆಸರೊಂದಿಗೆ ಹೊಂದಿಕೊಳ್ಳುವುದೆಂದರೆ ಅಸಹಾಯಕ ನಡವಳಿಕೆಯಲ್ಲ ಇದರ ಅರ್ಥ ಸಮಯ ಸಂದರ್ಭ ನೋಡಿಕೊಂಡು ಇನ್ನೊಬ್ಬರನ್ನು ಅರ್ಥಮಾಡಿಕೊಂಡು ಸಮರ್ಪಕವಾಗಿ ಸ್ಪಂದಿಸುವುದು.
ಆದರೆ ಮೌಲ್ಯಗಳು ಮತ್ತು ತತ್ವಗಳ ವಿಷಯದಲ್ಲಿ ಹೊಂದಾಣಿಕೆ ಇಲ್ಲದೆ ಸಲ್ಲದು
ಮುಂದುವರೆಯುವುದು…..
_ ಮೇನಕಾ ಪಾಟೀಲ್