ಲಿಂಗಾಯತ ವೀರಶೈವ ಮತ್ತೆ ಹೇಗೆ ಒಂದಾದವು?

ಲಿಂಗಾಯತ ವೀರಶೈವ ಮತ್ತೆ ಹೇಗೆ ಒಂದಾದವು?

ಜಗತ್ತಿನ ಮಹಾ ಕ್ರಾಂತಿಕಾರಿ ಬಸವಣ್ಣ ಮತ್ತು ದಲಿತ ಮೂಲದ ಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು

ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾ೦ಸ್ಥಿಕರಣವಲ್ಲದ ಜಗತ್ತಿನ ಗಮನ ಸೆಳೆದ ಲಿಂಗಾಯತ ಧರ್ಮ ಒಂದು ವೈಚಾರಿಕ ಮತ್ತು ವೈಜ್ನಾನಿಕ ಅಹಿಂದು ಮತ್ತು ಅವೈದಿಕ ಧರ್ಮವಾಗಿದೆ

ಲಿಂಗಾಯತ ಸಮತೆಯ ಚಳುವಳಿ .ಅರಿವಿನ ಆ೦ದೊಲನ

ಲಿಂಗಾಯತ ಧರ್ಮದ ಪ್ರಸ್ತಾಪವನ್ನು ೧೮೪೦ ರಲ್ಲಿ ಸಿ ಪಿ ಬ್ರೌನ್

೧೮೭೮ ಜಾನ್ ಡಿ ಮೆನ್ ಸುಪ್ರೀಂ ಕೋರ್ಟ್ ನ್ಯಾಯಾಧಿಶ

೧೮೭೧ ಜನಗಣತಿ

೧೯೧೧ ಜನಗಣತಿ

೧೯೫೨ ೧೯೫೬ ರಲ್ಲಿ ರಚಿತವಾದ ಕಾನೂನು ಅಡಿಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರೂ ಸಹಿತ
ಲಿಂಗಾಯತ ಧರ್ಮದ ಪ್ರಸ್ತಾಪ ಮಾಡಿದ್ದಾರೆ

೧೯೬೬ ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧಿಶ ಶ್ರೀ ಪಿ ಬಿ ಗಜೇಂದ್ರಗಡಕರ ಇವರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಸ್ವತಂತ್ರ ಧರ್ಮ ಎಂದು ಹೇಳಿದ್ದಾರೆ.

ಬ್ರಿಟಿಷ್ ಗೆಜೆಟ್ ಮತ್ತು ನೂರಾರು ದಾಖಲೆಗಳಲ್ಲಿ ಲಿಂಗಾಯತ ಧರ್ಮ ಒಂದು ಸರ್ವ ತಂತ್ರ ಸ್ವತಂತ್ರ ಎಂದು ಸಿದ್ದವಾದ ಮೇಲೂ ಲಿಂಗಾಯತ ಧರ್ಮ ತನ್ನ ಅಸ್ಮಿತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ 

ಲಿಂಗಾಯತ ಧರ್ಮದಲ್ಲಿ ವೀರಶೈವ ಎಂಬ ವೈದಿಕ ಮೂಲದ ಆಚರಣೆ ಸೇರಿ ಕೊಂಡಿದ್ದು ಲಿಂಗಾಯತ ಧರ್ಮಕ್ಕೆ ಹಿನ್ನೆಡೆ

ಲಿಂಗಾಯತ ವೀರಶೈವ ಬೇರೆ ಬೇರೆ ಅವರ ಆಚರಣೆ ವೈದಿಕ ಬಸವಣ್ಣ ಮತ್ತು ತಳ ಸಮುದಾಯದ ಶರಣರು ಹುಟ್ಟು ಹಾಕಿದ ಲಿಂಗಾಯತ ಧರ್ಮ ವೈಚಾರಿಕ ಮತ್ತು ವೈದಿಕ ವಿರೋಧಿ ಧರ್ಮ

೨೦೧೮ ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ನ್ಯಾಯಮೂರ್ತಿ ನಾಗ ಮೋಹನ ದಾಸ ಅವರ ಸಮಿತಿ ವರದಿ ಆಧಾರಿತ ನಿರ್ಧಾರವನ್ನು ಸಚಿವ ಸಂಪುಟದಲ್ಲಿ

ಸರ್ವಾನುಮತದಿಂದ ಒಪ್ಪಿಕೊಂಡು ಕೇಂದ್ರ ಸರಕಾರಕ್ಕೆ ಲಿಂಗಾಯತ ಅಲ್ಪ ಸ೦ಖ್ಯಾತ ಸ್ಥಾನ ನೀಡಲು ಶಿಫಾರಸನ್ನು ಮಾಡಿ ಅದನ್ನು ಕೇಂದ್ರ ಸರಕಾರ ತಿರಸ್ಕರಿಸಿದಾಗ
ಸಮಿಶ್ರ ಸರಕಾರ ಕೇಂದ್ರ ಸರಕಾರದ ನಡೆಯನ್ನು ಪ್ರಶ್ನಿಸಿ ಮೆಲ್ಮನವಿ ಸಲ್ಲಿಸಿಲ್ಲ

ನಾಡಿನ ತುಂಬಾ ಸಮಾವೆಶ ನಡೆಸಿ ಮತಗಳ ಕ್ರೊಡಿಕರಣಕ್ಕೆ ಲಿಂಗಾಯತರನ್ನು ಬಳಸಿಅಂದಿನ ಸರಕಾರವು ಮತ್ತೆ ಇಂದು ಈಗ ಕೆಲ ಲಿಂಗಾಯತ ರಾಜಕೀಯ ಪುಡಾರಿಗಳನ್ನು ಮುಂದೆ ಮಾಡಿ  ಕೆಲ ಸ್ವಾಮಿಗಳು ಲಿಂಗಾಯತ ಹಿಂದೂ ಅಲ್ಲ ಎನ್ನುವ ಹೇಳಿಕೆ ನೀಡಿ ಈಗ ಲಿಂಗಾಯತ ವೀರಶೈವ ಒಂದೇ ಎಂಬ ಬ್ರಹತ್ ಸಮಾವೆಶ ದಾವಣಗೆರಿಯಲ್ಲಿ ನಡೆಯುತ್ತಿದ್ದು ಇದು ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನ ಪಡೆಯುವಲ್ಲಿ ಮತ್ತೆ ಹಿಂದೇಟು ನಿಶ್ಚಿತ

ರಾಜಕಾರಣಿ ಮತ್ತು ರಾಷ್ಟ್ರೀಯ ಪಕ್ಷಗಳ ದಾಳವಲ್ಲ ಲಿಂಗಾಯತರು

ಲಿಂಗಾಯತರು ಮುಗ್ಧರು ಮೂರ್ಖರಲ್ಲ ರಾಜಕೀಯ ನಾಯಕರು ಸ್ವಾಮಿಗಳವರ ಆಜ್ಞೆಯಂತೆ ಕುಣಿವ ಬೊಂಬೆಗಳಲ್ಲ. ಇಂತಹ ನಡೆಯನ್ನು ನೋಡಿದರೆ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಲಿಂಗಾಯತ ಧರ್ಮ ಮಾನ್ಯತೆಗೆ ಹುಟ್ಟಿ ಕೊಂಡ ಜಾಗತಿಕ ಲಿಂಗಾಯತ ಮಹಾ ಸಭೆಗೆ ಏನು ಅಂತರ?

ಲಿಂಗಾಯತರಿಗೆ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನ ಮುಖ್ಯ
ಕರ್ನಾಟಕದ ಯಾವುದೇ ರಾಜಕೀಯ ಪಕ್ಷವು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ
ಸಂಖ್ಯಾತ ಸ್ಥಾನಮಾನ ನೀಡು ವಲ್ಲಿ ಆಸಕ್ತಿ ತೊರದೆ ಲಿಂಗಾಯತರ ಬಸವ ಭಕ್ತರ ಭಾವನೆಗಳೊಂದಿಗೆ ಆಟವಾಡಿದರೆ
ಆಗುವ ಪರಿಣಾಮ ನೆಟ್ಟಗೆ ಇರುವದಿಲ್ಲ ಎಚ್ಚರ ನಾಯಕರೇ ಎಚ್ಚರ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಇದು ನ್ಯಾಯ ಸಮ್ಮತ ತತ್ವ ಸಮ್ಮತ ಮತ್ತು ಕಾನೂನು ಸಮ್ಮತ

ಬಸವ ಭಕ್ತರೇ
ಒಮ್ಮೆ ಯೋಚಿಸಿ ಲಿಂಗಾಯತ ಧರ್ಮ ರಾಜಕಾರಣಿ ಮತ್ತು ಸ್ವಾಮಿಗಳವರ ಆಜ್ಞೆಯಂತೆ ಕುಣಿವ ಬೊಂಬೆ ನಾವಾಗಬಾರದು.
ಬನ್ನಿ ಇವರಿಗೆ ತಕ್ಕ ಪಾಠ ಕಲಿಸೋಣ

ನಾನು ಲಿಂಗಾಯತ ವೀರಶೈವ ಒಂದೇ ಎನ್ನುವ ನಡೆಯನ್ನು ತೀವ್ರವಾಗಿ ವಿರೊಧಿಸುತ್ತೆನೆ ಮತ್ತು ಇಂತಹ ನಡೆಯ ವಿರುದ್ಧ
ಹೋರಾಡುತ್ತೇನೆ

ಪ್ರತಿ ಬಸವ ಭಕ್ತರು ಇಂತಹ ಗಟ್ಟಿ ನಿರ್ಧಾರ ಮಾಡಲು ಮನವಿ ಮತ್ತು ಇದನ್ನು ಹೆಚ್ಚಿನ ಲಿಂಗಾಯತ ಬಸವಾಯತ ಧರ್ಮಿಯರಿಗೆ ಫಾರ್ವರ್ಡ್ ಮಾಡಲು ಕೋರಿಕೆ

-ಡಾ ಶಶಿಕಾಂತ ಪಟ್ಟಣ
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮತ್ತು ಮುಖ್ಯಸ್ಥರು ಜಾಗತಿಕ ಲಿಂಗಾಯತ ಮಹಾ ಸಭೆ
ಮಹಾರಾಷ್ಟ

One thought on “ಲಿಂಗಾಯತ ವೀರಶೈವ ಮತ್ತೆ ಹೇಗೆ ಒಂದಾದವು?

  1. ಕುಂಕುಮ ಲೇಪಿತ ರಾಜಕೀಯ ಮುತ್ಸದ್ಧಿಯೊಬ್ಬ ನಾನೇ ಲಿಂಗಾಯಿತರ ನಾಯಕನೆಂದು ಅಡ್ಡ ಪಲ್ಲಕ್ಕಿ ಗಳನ್ನು ಮೇಲೆತ್ತಿಕೊಂಡೇ ಬಸವನನ್ನು ಜಪಿಸಿದರೆ ಬೆಕ್ಕು ಕಣ್ಣಾ ಮುಚ್ಚಿ ಹಾಲು ಕುಡಿಯುತ್ತಿರುವಂತೆ ಕಾಣಿಸುತ್ತಿದೆ..!!

Comments are closed.

Don`t copy text!