ಬಾಳು

ಬಾಳು

ನಿರ್ಮಲ ಚಿತ್ತ ಚಿತ್ತಗಳೇ
ತಿಳಿ ನೀರಿನ ಸೆಲೆಗಳು.

ಹಸಿರು ಹಸಿರಿನ ಸಿರಿಗಳೇ
ಮುದ ನೀಡುವ ನೋಟಗಳು.

ಸುಹೃದಯದ ಸಜ್ಜನರೇ
ಸಿಹಿ ಕಬ್ಬಿನ ಜಲ್ಲೆಗಳು.

ಸಿಹಿ ಸಿಹಿ ನೆನಪುಗಳೇ
ಸಂಸಾರದ ಮಾಣಿಕ್ಯಗಳು.

ನಲಿದಾಡುವ ಚಿಕ್ಕ ಮಕ್ಕಳೇ
ಜೀವನದ ಕಣ್ಣೆವೆಗಳು.

ಬಂಧುಗಳ ಜತೆಯಿರುವದೇ
ಸುಂದರ ಜೀವನದ ಮಂದಿರ
ಗಳು.

-ಕೃಷ್ಣ ಬೀಡಕರ. ವಿಜಯಪುರ.

Don`t copy text!