ಗವಿಮಠ ಪರಂಪರೆಯಲ್ಲಿ ೧೬ ನೇಯ ಪೀಠಾಧಿಪತಿ, ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳು

ಗವಿಮಠ ಪರಂಪರೆಯಲ್ಲಿ ೧೬ ನೇಯ ಪೀಠಾಧಿಪತಿಗಳಾದ ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳು

:ಪುಜ್ಯರು ಜನಿಸಿದ ಭೂಮಿ ಮಾಲಗಿತ್ತಿ :

ನಮ್ಮ ತಿರುಳ್ಗನ್ನಡನಾಡಿನ ಜೈನಪರಂಪರೆಯ ನೆಲೆವೀಡು, ಶ್ರೀ ಗವಿಮಠದ ಪರಂಪರೆಯನ್ನು ನೋಡಲಾಗಿ,ವೀರಶೈವರ ಪುಣ್ಯಕ್ಷೇತ್ರ, ಬಸವಾದಿ ಪ್ರಮಥರ ಕಾಲದಿಂದಲೂ ಈ ಮಠವು ೧೧ ನೇ ಶತಮಾನದಿಂದಲೂ ಪ್ರಸಿದ್ದಿ ಯಲ್ಲಿದೆ.

ಉತ್ತರ ಭಾರತದಿಂದ ಶ್ರೀ ಮ ನಿ ಪ್ರ ರುದ್ರ ಮುನಿ ಮಹಾಸ್ವಾಮಿಗಳು ಧರ್ಮಪ್ರಚಾರಾರ್ಥ ದಕ್ಷಿಣ ಭಾರತಕ್ಕೆ ದಯಮಾಡಸಿ ಕೊಪ್ಪಳ ದ ಗುಡ್ಡದ ಗವಿಯಲ್ಲಿ ನೆಲೆಸಿ ತಪವನ್ನಾಚರಿಸಿದರು,ಇವರು ನಿಂತ ನೆಲೆಯೇ, ಬೆಟ್ಟದ ಗವಿಯೇ ಗವಿಮಠವಾಯಿತು.

ಇವರ ತಪಸ್ಸಿನ ಫಲವಾಗಿ, ನಾಡಿನ ಮೂಲೆ ಮೂಲೆಗೆ ಇವರ ಪ್ರಭಾವ ಶಕ್ತಿ ಸಂಕಲ್ಪ ದ ಪರಿಣಾಮವಾಗಿ ಮಸ್ಕಿಯ ಶರಣ ಸಂಪನ್ನ ಹೋಳಿ ಹಂಪಯ್ಯನು ವ್ಯಾಪಾರಿ , ತಮ್ಮ ವ್ಯವಹಾರ ಮಾಡುತ್ತಾ ಶ್ರೀಗಳ ದರ್ಶನದಿಂದ ಪುನೀತನಾಗಿ ,
ಗುಹೆಯ ಮುಂದಿನ ಭಾಗವನ್ನು ಕಟ್ಟಿಸಿದನೆಂದು ಶ್ರೀ ಮಠದ ಶಾಸನ ಹೇಳುತ್ತದೆ.

ಶ್ರೀ ಗವಿ ಮಠದ ಪರಂಪರೆಯ ಪೀಠಾಧೀಶ ಯತಿಗಳು

೧) ಶ್ರೀ ಮ‌.ನಿ.ಪ್ರ.ಜಗದ್ಗುರು ರುದ್ರಮುನಿ ಮಹಾಸ್ವಾಮಿಗಳು.

೨) ಶ್ರೀ ಮ.ನಿ.ಪ್ರ.ಜ, ಸಂಗನಬಸವ ಮಹಾಸ್ವಾಮಿಗಳು

೩) ಶಿವಲಿಂಗ ಮಹಾಸ್ವಾಮಿಗಳು

೪) ಚೆನ್ನವೀರ ಮಹಾಸ್ವಾಮಿಗಳು

೫) ಕಾಶಿ ಕರಿಬಸವ ಮಹಾಸ್ವಾಮಿಗಳು

೬)ಶಿವಲಿಂಗ ಮಹಾಸ್ವಾಮಿಗಳು

೭)ಪುಟ್ಟ ಸುಚೆನ್ನವೀರ ಮಹಾಸ್ವಾಮಿಗಳು

೮) ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು

೯)ಸಂಗನಬಸವ ಮಹಾಸ್ವಾಮಿಗಳು

೧೦) ಚನ್ನಬಸವ ಮಹಾಸ್ವಾಮಿಗಳು

೧೧) ಗವಿಸಿದ್ದೇಶ್ವರ ಮಹಾಸ್ವಾಮಿಗಳು

೧೨) ಹಿರಿಶಾಂತವೀರ
ಮಹಾಸ್ವಾಮಿಗಳು

೧೩) ಶಿವಶಾಂತವೀರ ಮಹಾಸ್ವಾಮಿಗಳು

೧೪) ಮರಿಶಾಂತವೀರ ಮಹಾಸ್ವಾಮಿಗಳು

೧೫)ಶಿವಶಾಂತವೀರ ಮಹಾಸ್ವಾಮಿಗಳು

# ೧೬) ಮರಿಶಾಂತವೀರ ಮಹಾಸ್ವಾಮಿಗಳು

೧೭) ಶಿವಶಾಂತವೀರ ಮಹಾಸ್ವಾಮಿಗಳು

೧೮) ಶ್ರೀ ಮ.ನಿ.ಪ್ರ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು
ಪ್ರಸ್ತುತ ಪೀಠಾಧಿಪತಿಗಳು

ಗವಿಮಠದ ಭವ್ಯ ಪರಂಪರೆಯ ೧೬ ನೆ ಪೀಠಾಧಿಪತಿಗಳೆ ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳು.

ಬಸವಲಿಂಗಯ್ಯ ಹಾಗೂ ಶಾಂತಮ್ಮ ದಂಪತಿಗಳ ಸುಪತ್ರರು ಮರಿಶಾಂತವೀರ ಮಹಾಸ್ವಾಮಿಗಳು,
ಶ್ರೀ ಮತಿ ಶಾಂತಮ್ಮ ನವರ ತವರೂರು, ಕುಷ್ಟಗಿ ತಾಲೂಕಿನ ಪಶ್ಚಿಮಕ್ಕೆ ಇರುವ ಮಾಲಗಿತ್ತಿ ಗ್ರಾಮ
ಶಾಂತಮ್ಮನವರ ತಂದೆ ಮಾಲಗಿತ್ತಿಗ್ರಾಮದ ಹಿರೇಮಠ ದ ಮಾಹೇಶ್ವರ ಮುಪ್ಪಿನಾರ್ಯಯರು ಇವರು ಜೋತಿಷ್ಯದಲ್ಲಿ ನಿಪುಣರಾಗಿದ್ದರು.

ಶ್ರೀ ಮತಿ ಶಾಂತಮ್ಮನವರು ೩/೧೨/೧೮೮೮ ರಂದು ತಮ್ಮ ಚೊಚ್ಚಿಲು ಕೂಸಿಗೆ ಜನ್ಮ ನೀಡಿದರು, ಮಗುವಿಗೆ ,ಗುರು ನಂಜಯ್ಯ ಎಂದು ನಾಮಕರಣ ಮಾಡಿದರು.

ಮಗಳಿಗೆ ಅವರ ತಂದೆಯವರು ಈ ರೀತಿ ಹೇಳಿದರು ?

” ಶಾಂತಮ್ಮ ಈ ಗಂಡುಕೂಸು ನಿನ್ನದಾಗುವುದಿಲ್ಲ, ” ಗುರು ನಂಜಯ್ಯ ದೊಡ್ಡವನಾದ ಮೇಲೆ ನಿನ್ನ ಜೋಪಾನ ಮಾಡುವುದಿಲ್ಲ, ” ?

ಎಂದು ಹೇಳಿ ಸಂನ್ಯಾಸಿಯಾಗುವ ಭವಿಷ್ಯ ಬರೆದುಬಿಟ್ಟರು !
ಮಾಲಗಿತ್ತಿ ಹಿರೇಮಠದ ಮುಪ್ಪಿನಾರ್ಯರರು ಜೋತಿ಼್ಷ್ಯ ಭವಿಷ್ಯ ಸುಳ್ಳಾಗಲಿಲ್ಲ ,! ಶಾಂತಮ್ಮನವರ ಮಗ ಗುರು ನಂಜಯ್ಯ ನೇ ಮರಿಶಾಂತವೀರ ಮಹಾಸ್ವಾಮಿಗಳು ಎಂಬ ಅಭಿಧಾನದಿಂದ ೧೯೨೨ ರ ಡಿಸೆಂಬರ್ ತಿಂಗಳಲ್ಲಿ ತಮ್ಮ ೩೪ ನೆ ವಯಸ್ಸಿಗೆ ಕೊಪ್ಪಳ ಗವಿ ಮಠದ ಪರಂಪರೆಯ ೧೬ ನೇ ಪೀಠಾಧಿಪತಿಗಳಾದರು,

ಸಾಹಿತ್ಯ ಮೀಮಾಂಸೆ ,ತರ್ಕ ದರ್ಶನ ಶಾಸ್ತ್ರ, ವೇದಾಂತ, ಸಂಸ್ಕೃತ ತತ್ವಜ್ಞಾನ ,ಆಯುರ್ವೇದ ಯೋಗಸಾಧನೆ, ಇನ್ನೂ ಮುಂತಾದ ಕ್ಷೇತ್ರದಲ್ಲಿ ಅಪಾರ ಜ್ಞಾನದ ಗಣಿಯಾಗಿದ್ದವರು ಮರಿಶಾಂತವೀರ ಮಹಾಸ್ವಾಮಿಗಳು, ಕನ್ನಡ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು

ಆಯಾ ಭಾಷೆಗಳ ವಿದ್ವತ್ ಸಾಹಿತ್ಯ ಪತ್ರಿಕೆಗಳನ್ನು , ಧಾರ್ಮಿಕ ಹಾಗೂ ವಿದ್ವತ್ ಪತ್ರಿಕೆ ಗಳನ್ನು ಶ್ರೀ ಮಠಕ್ಕೆ ತರಿಸುವ ಪರಿಪಾಠ ಹೊಂದಿದ್ದರು, ನಾಡಿನ ಪ್ರಖ್ಯಾತ ಸಾಹಿತಿ ಗಳನ್ನು ಕರೆಯಿಸಿ ಉಪನ್ಯಾಸ ಕೊಡಿಸುತ್ತಿದ್ದರು .

ಪೂಜ್ಯರು ನಡೆದ ದಾರಿ : ಧಾರ್ಮಿಕ ಕ್ಷೇತ್ರದ ಸವಾರಿ

೩/೧೨/೧೮೮೮ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಜನನ

೧೮೯೩/ ೨೮೦೯ ರವರೆಗೆ ಸೂಡಿ, ಕೊಟ್ಟೂರು, ಅಬ್ಬಿಗೇರಿ ಹುನಗುಂದ ಹಾಗೂ ಸೊಲ್ಲಾಫುರದಲ್ಲಿ ಅಧ್ಯಯನ

೧೯೦೯ ಡಿಸೆಂಬರ್ , ಸೊಲ್ಲಾಪುರ ದ ವಾರದ ಮಲ್ಲಪ್ಪನವರ ಅಧ್ಯಕ್ಷ ತೆಯಲ್ಲಿ ,ಬಳ್ಳಾರಿಯಲ್ಲಿ ಜರುಗಿದ ೫ ನೆಯ ಅಖಿಲಭಾರತ ವೀರಶೈವ ಮಹಾಸಭೆಯಯಲ್ಲಿ ಭಾಗಿ

ಶ್ರೀ ಗವಿಮಠದ ೧೫ ನೆಯ ಪೀಠಾಧಿಪತಿ ಜ, ಶಿವಶಾಂತವೀರ ಮಹಾಸ್ವಾಮಿಗಳು( ಗಡ್ಡದಜ್ಜನವರು) ದರ್ಶನ

೧೯೨೨ ಡಿಸೆಂಬರ್ ಶ್ರೀ ಗವಿಮಠದ ಪೀಠಾಧೀಶರಾದದು

೧೯೨೪/೨೫ ಬನವಾಸಿ ಹಾಗೂ ಮಧುಕೇಶ್ವರ ದೇವಾಲಯದ ಪ್ರಕರಣಗಳಲ್ಲಿ ಭಾಗಿ

೧೯೩೦ ಆಸಕ್ತ ವಿಧ್ಯಾರ್ಥಿಗಳಸೇರಿಸಿ ಆಯುರ್ವೇದ ವೈದ್ಯಕೀಯ ಜ್ನಾನ ನೀಡಿ ಇಂಜಕ್ಷನ್ ಥೆರಪಿ ತರಭೇತಿ ನೀಡಿಸಿದರು.ದೀನದಲಿತರ ಆರೋಗ್ಯ ಕಾಳಜಿವಹಿಸಿದರು

೧೯೪೯ರಲ್ಲಿ ದೊಡ್ಡ ಬರಗಾಲ ವನ್ನು ಮೆಟ್ಟಿನಿಂತು ದಾಸೋಹ ನಡೆಸಿದರು

೧೯೫೧ ರಲ್ಲಿ ಶ್ರೀ ಗವಿಸಿದ್ದೇಶ್ವರ ಮಿಡ್ಲಸ್ಕೂಲ್ ಆರಂಭ

೧೯೫೮ ರಲ್ಲಿ ಸೂಡಿ ಜೂಕ್ತಿ ಹಿರೇಮಠ ದ ಶ್ರೀ ಷ. ಬ್ರ.ಉಮಾಪತಿ ಶಿವಾಚಾರ್ಯ ರನ್ನು ಶ್ರೀ ಗವಿಮಠದ ಉತ್ತರಾಧಿಕಾರಿ ಗಳೆಂದು ಆಯ್ಕೆ

೧೯೬೩ ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಸ್ತಾಪನೆ, ಹಾಗೂ ಶ್ರೀ ಗ.ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆರಂಭ

೧೯೬೩ ರಿಂದ ೬೪ರವರೆಗೆ ಕುಕನೂರಿನ ಎಡೆಡ್ ಹೈಸ್ಕೂಲ್ ನ್ನು ಶ್ರೀ ಗ.ವಿ ಟ್ರಸ್ಟ್ ಆಡಳಿತ ಕ್ಕೆ ತಗೆದುಕೊಂಡಿದ್ದು

೨೭/೫/೧೯೬೬ ರಲ್ಲಿ ಉಮಾಪತಿ ಶಿವಾಚಾರ್ಯ ರಿಗೆ ಜ‌ ಶಿವಶಾಂತ ವೀರ ಮಹಾಸ್ವಾಮಿಗಳಾಗಿ ಗವಿಮಠದ ಉತ್ತರಾಧಿಕಾರಿ ಯಾಗಿ ಮಾಡಿ ನಿರ್ಗಮಿಸಿದ್ದು,

೧/೭/೧೯೬೭ ರಲ್ಲಿ ಬೆಳಗಿನಲ್ಲಿ ಬೆಳಕಾದರು.

ಅಖಂಡ ೪೫ ವರ್ಷಗಳ ಕಾಲ ಉಗ್ರ ತಪಸ್ಸನ್ನು ಆಚರಿಸಿ ಅಷ್ಟಾವರಣ, ಪಂಚಾಚಾರ,ಷಟ್ ಸ್ಥಲ, ಶೀಲಾಚರಣೆಯ ಲಿಂಗಾಂಗ ಸಾಮರಸ್ಯದಲ್ಲಿ ಶಿವಾನುಭವಿಗಳಾಗಿ ತ್ರಿವಿಧ ದಾಸೋಹ ಮೂರ್ತಿಯಾಗಿ ಭಕ್ತರ ಹೃದಯದ ಆರಾಧ್ಯ ರಾಗಿ ಗವಿಮಠದ ಪೀಠದ ಬೆಳಕನ್ನ ನಾಡಿನೆಲ್ಲಡೆ ಪಸರಿಸಿದರು

ಚಿಕೇನಕೊಪ್ಪದ ಚೆನ್ನವೀರ ಶರಣರಿಗೆ, ಚಿನ್ಮ ಯಾನುಗ್ರಹ, ಕರುಣಿಸಿದವರೆ, ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳು,

ಮಹಾಮಹಿಮರಾದ ಶ್ರೀ ಗವಿಸಿದ್ದನಲ್ಲಿ, ಮರಿಶಾಂತವೀರ, ಶಿವಶಾಂತವೀರ ಶಿವಯೋಗಿಗಳ ಬಗೆಗಿದ್ದ ಅಪ್ರತಿಮ ಶ್ರಧ್ಧಾ ,ಭಕ್ತಿ ಅನನ್ಯವಾದುದು,

ಶ್ರೀ ಗವಿಸಿದ್ದೇಶ್ವರ ರ ಜಾತ್ರಾ ಮಹೋತ್ಸವ ದ ಮರುದಿನ ವೈಭವದಿಂದ ನಡೆಯುವ ಗವಿಮಠದ ಮಹಾದ್ವಾರದಿಂದ ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯವರೆಗೂ ದೀರ್ಘದಂಡ ನಮಸ್ಕಾರ ಹಾಕುವ ಕಾಯಕವನ್ನು ತಮ್ಮ ಜೀವಿತಾವಧಿವರೆಗೂ ಪಾಲಿಸಿಕೊಂಡು ಬಂದಿದರುವುದು ಇವರ ಹಿಂದೆ ಅಸಂಖ್ಯಾತ ಭಕ್ತ ಸಮೂಹವು ದೀಡ್ ನಮಸ್ಕಾರ ಹಾಕುವ ಪಧ್ದತಿ ಎಲ್ಲರಿಗೂ ತಿಳಿದ ಸಂಗತಿಯಾಗಿದೆ,

ಮೌನತಪಸ್ವಿ ಚಿಕೇನಕೊಪ್ಪದ ಚೆನ್ನವೀರಶರಣರು ಕೈಗೊಂಡ ದೀಡ್ ನಮಸ್ಕಾರ ದ ಕಾಯಕವನ್ನು ಒಂದು ವೃತದಂತೆ ಬಿಟ್ಟು ಬಿಡದೆ, ಅವರ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಮುಂದುವರೆಸಿಕೊಂಡು ಬರುತ್ತಿದ್ದಾರೆ,

ಪ್ರಸ್ತುತ ಗವಿಮಠದ ಸಂಸ್ಥಾನದ ವ್ಯಾಪ್ತಿಗೆ ೬೩ ಶಾಖಾಮಠಗಳು ಇದ್ದು

ಕೊಪ್ಪಳ ಜಿಲ್ಲೆಯ

ನರೇಗಲ್ಲು, ಯತ್ನಟ್ಟಿ, ಹಿರೇ ಬಗನಾಳ , ಕುಟುಗನಹಳ್ಳಿ , ಕಾಸನಕಂಡಿ , ಕೋಮಲಾಪೂರ, ಹಿರೇಸಿಂಧೋಗಿ , ಬಿಸರಳ್ಳಿ, ಮೈನಳ್ಳಿ , ಅಳವಂಡಿ , ಬೆಟಗೇರಿ, ನೀರಲಗಿ, ಭಾನಾಪೂರು , ತಳಕಲ್ಲ , ತೊಂಡಿಹಾಳ , ಯಲಬುರಗಿ , ಮ್ಯಾಗೇರಿ , ಬಳೂಟಗಿ,ಹೊಸಳ್ಳಿ ಹೂವಿನಾಳ , ಬಹದ್ದೂರು ಬಂಡಿ , ವೀರಾಪೂರು , ಮುನಿರಾಬಾದ , ಹಿರೇ ಬಿಡನಾಳ ಢಣಾಪೂರುವ, ಸಂಗಮೇಶ್ವರ , ಕೋರಗಲ್ಲುಬ, ಯಕಲಾಸಾಪುರ , ಯರೇ ಹಂಚಿನಾಳ , ಗಂಗಾವತಿ

ಗದಗಜಿಲ್ಲೆ :
ಗದಗ ಬೆಟಗೇರಿ, ಗಜೇಂದ್ರಗಡ , ಡಂಬಳ , ವಡ್ಡಟ್ಟಿ ,ನಂದಿವೇರಿಮಠ , ಕಪ್ಪತ್ತಗುಡ್ಡ

ರೋಣ ತಾಲೂಕು
ಶಾಂತಗೇರಿ

ಬಳ್ಳಾರಿ ಜಿಲ್ಲೆ
ಹಿರೇಹಡಗಲಿ ,ಹೂವಿನಹಡಗಲಿ, ಕತ್ತೆ ಬೆನ್ನೂರ ,ಬೂದನೂರು ,ಮಕರಬ್ಬಿ ,ಮಾಗಳ , ಹರಪನಹಳ್ಳಿ, ದೇವಗೊಂಡನಹಳ್ಳಿ , ಬಾಚಿಗೊಂಡನಹಳ್ಲಿ ,ಕಡ್ಲಬಾಳು ,ಕೊಳಚಿ ಹೊಸಪೇಟೆ, ಹಂಪಿ ,ಕಮಲಾಪೂರ ಸೊನ್ನ ಮೋರಗೇರಿ , ಇಟ್ಟಗಿ , ಬಾವಿಹಳ್ಳಿ, ಹಗರನೂರು

ಈ ಅರವತ್ಮೂರು ಸಂಸ್ಥಾನ ಶ್ರೀ ಗವಿಮಠದ ಶಾಖಾ ಮಠಗಳು ನಿರಂತರ ಸೇವಾ ಕೈಂಕರ್ಯ ಕೈಗೊಂಡಿವೆ,

ಇಂತಹ ಮಹಾಮಹಿಮರು ಜನುಮ ನೀಡಿದ ಪುಣ್ಯ ಭೂಮಿ ಮಾಲಗಿತ್ತಿ ಗ್ರಾಮದಲ್ಲಿ ಅವರಹೆಸರನಲ್ಲಿ ಒಂದು ವಸತಿಯುತ ಪಾಠ ಶಾಲೆಯನ್ನು ಆರಂಭಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ದಿಶೆಯಲ್ಲಿ ಸಂಸ್ಥಾನ ಶ್ರೀ ಗವಿಮಠ ಮನಸ್ಸುಮಾಡಬೇಕಿದೆ.

ಪೂರಕ ಸಾಹಿತ್ಯ( ಎಸ್ ಎಂ ಕಂಬಾಳಿಮಠ ಅವರ ಸಾಹಿತ್ಯ ಕೃತಿ )

ಲೇಖನ – ನಟರಾಜ್ ಸೋನಾರ್
ಕಸಾಪ ಕುಷ್ಟಗಿ

_–_——–_——————————–_—————————–
ಕ್ಷಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

Don`t copy text!