ಕಾಂಗ್ರೆಸ್ ಸ್ವಾಭಿಮಾನ ಗೆಲ್ಲಲಿ, ಸ್ವಾರ್ಥ ರಾಜಕಾರಣ ಅಂತ್ಯವಗಲಿ-ಬಸನಗೌಡ ಬಾದರ್ಲಿ 

e-ಸುದ್ದಿ, ಮಸ್ಕಿ
ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಪ್ರತಾಪಗೌಡ ಪಾಟೀಲರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರÀ ಯುಕಾಂಗ್ರೆಸ್ ಕಾಂiÀರ್iಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ಮಸ್ಕಿ ಕ್ಷೇತ್ರದ ಅಭಿವೃದ್ದಿ ಹಣ ಬಿಡುಗಡೆ ಮಾಡದೇ ಈಗ ಉಪ ಚುನಾವಣೆ ಹತ್ತಿರದಲ್ಲಿ ನೂರಾರು ಕೋಟಿ ರೂ ಬಿಡುಗಡೆ ಮಾಡಿತ್ತಿರುವದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಣ ಮಾಡುವ ಉದ್ದೇಶದಿಂದ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟಿದ್ದು ಎಲ್ಲರಿಗೂ ತಿಳಿದಿದೆ. ಉಪ ಚುನಾವಣೆಯನ್ನು ಏದುರಿಸಲು ನೂರಾರು ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಿ ಅದರಲ್ಲಿ 10% ಹೊಡೆಯುವ ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.
ಪ್ರತಾಪಗೌಡ ಪಾಟೀಲ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಅಮರಪ್ಪ ಕಡದರಾಳ ಅವರಿಗೆ ಹಲ್ಲೆ ಮಾಡುವ ಮೂಲಕ ಅವರ ಸಂಸೃತಿ ತೊರಿಸಿದ್ದಾರೆ. ಮತದಾರರು ಇದೆಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಬಸನಗೌಡ ಬಾದರ್ಲಿ ತಿಳಿಸಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ತತ್ವಗಳನ್ನು ಮತ್ತು ಕಾಂಗ್ರೆಸ್ ಸರ್ಕಾರದಲ್ಲಿದ್ದಾಗ ಮಾಡಿದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಬಿಜೆಪಿಯವ ಗುಂಡಾ ವರ್ತನೆಯನ್ನು ಜನ ನೋಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಗಾಂಧಿ ತತ್ವ ಶಾಂತಿಯಿಂದ ಚುನಾವಣೆ ಎದುರಿಸೋಣ ಎಂದರು.
ಯುಥ್ ಕಾಂಗ್ರೆಸ್ ನಗರ ಘಟಕ ಹುಸೇನಬಾಷಾ ಬಳಗಾನೂರು, ಗ್ರಾಮೀಣ ಘಟಕದ ಅಧ್ಯಕ್ಷ ಹನುಮೇಶ ಬಾಗೋಡಿ, ಅಮರೇಶ, ವೆಂಕಟೇಶ ರಾಗಲಪರರ್ವಿ, ರೆಡ್ಡಪ್ಪ, ಮರಿಸ್ವಾಮಿ ಹೊಸಳ್ಳಿ ಹಾಗೂ ಇತರರು ಭಾಗವಹಿಸಿದ್ದರು.

 

Don`t copy text!