ಮನಶಾಂತಿ ಪಡೆಯುವುದು ಹೇಗೆ ??
ಪ್ರತಿದಿನ ಯಾರು ಓದಿದ್ದನ್ನು ಓದಿ ,ಪ್ರತಿದಿನ ಯಾರು ಯೋಚಿಸಿದನ್ನು ಯೋಚಿಸಿ ಸರ್ವಾನುಮತ ಭಾಗವಾಗಿ ಸದಾ ಇರುವರು ಅಂತವರ ಮನಸ್ಸು ಯಾವತ್ತೂ ಖುಷಿಯಿಂದ ಇರಲು ಸಾಧ್ಯವಿಲ್ಲ.
ಸಾಮಾನ್ಯವಾಗಿ ನಾವೆಲ್ಲ ಕಾಲ ಕಾಲಕ್ಕೆ ಎಸ್ಟೋ ಸಲ ಅಸಮಾಧಾನದಿಂದಿರುತ್ತೇವೆ. ಎಲ್ಲರ ಜೀವನದಲ್ಲಿ ಇದು ನಿತ್ಯ ಜೀವನದ ಸಾಮಾನ್ಯ ಭಾಗ. ಆದರೆ ಆತಂಕ ಅಥವಾ ಕೋಪ ಆವರಿಸಿದಾಗ ಏನಾಗುತ್ತದೆ ಎಂದು ಗೊತ್ತಾಗುವುದಿಲ್ಲ. ಆಗ ಆಗಿದ್ದೆಲ್ಲ ನೆನೆದು ಬೇಸರಿಸಿಕೊಂಡು ಕಣ್ಣೀರ್ ಹಾಕುತ್ತಾ ಕುಳಿತುಕೊಳ್ಳುತ್ತೇವೆ.
ಈ ಕೋಪ ಮತ್ತು ಆತಂಕ ತ್ವರಿತವಾಗಿ ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ತಂತ್ರ ಎಂದರೆ ನಮ್ಮ ಉಸಿರಾಟ. ಕೋಪಗೊಂಡಾಗ ತ್ವರಿತ ಆಳ ಉಸಿರನ್ನು ತೆಗೆದುಕೊಳ್ಳುತ್ತಾ ಹೋದರೆ ಇದು ನಮ್ಮ ಮೆದುಳಿಗೆ ಸಂದೇಶವನ್ನು ಕಳಿಸುತ್ತದೆ. ಆಗ ನಮಗೆ ತಪ್ಪು ಸರಿ ಗೊತ್ತಾಗಲು ಪ್ರಾರಂಭವಾಗುತ್ತದೆ.
ನಮ್ಮ ಪ್ರಕ್ರಿಯೆಯನ್ನು ಬಲಪಡಿಸುವ ಲೂಪ್ ಉಂಟುಮಾಡುವಂತ ಉಸಿರಾಟ ನಮ್ಮ ಮೆದುಳಿಗೆ ಹೋಗುತ್ತದೆ , ಇದರಿಂದ ದೀರ್ಘವಾದ ಶಾಂತಿ ಸಿಕ್ಕಿದಂತಾಗುತ್ತದೆ.
ಈ ಆತಂಕ ಮತ್ತು ಕೋಪ ನಿರ್ವಹಿಸಲು ಅಕ್ಯುಪಂಕ್ಚರ್ ಪಡೆಯಬಹುದು, ಆದರೆ ಅದನ್ನ ಮಾಡಲು ನಮ್ಮ ದಿನದಲ್ಲಿ ಸಮಯ ಹುಡುಕುವುದು ಕಷ್ಟವಾಗಿ ಬಿಡುತ್ತದೆ.
ಒಳ್ಳೆಯ ಸುದ್ದಿ ಏನೆಂದರೆ ತತ್ತಕ್ಷಣ ಆತಂಕ ನಿವಾರಣೆಗಾಗಿ ಅಕ್ಯುಪ್ರೆಶರ್ ಮಾಡಬಹುದು ಈ ವಿಧಾನ ದೇಹದ ಕೆಲ ಹಂತಗಳಲ್ಲಿ ಬೆರಳುಗಳನ್ನು ನಮ್ಮ ಕೈಯಿಂದ ಒತ್ತಡವನ್ನು ಹಾಕುವುದನ್ನು ಒಳಗೊಂಡಿದ್ದಾಗ ಒತ್ತಡ ಬಿಡುಗಡೆ ಮಾಡಿ ದೇಹ ವಿಶ್ರಾಂತಿ ಮಾಡಲು ಪ್ರಾರಂಭಿಸುತ್ತದೆ.
ನಾವು ಕೋಪಗೊಂಡಾಗ ನಮ್ಮ ದೇಹದಲ್ಲಿನ ಪ್ರತಿಯೊಂದು ಸ್ನಾಯು ಉದ್ವಿಗ್ನಗೊಳ್ಳುತ್ತದೆ. ವಿಶ್ರಾಂತಿ ಮನಸ್ಸು ಮತ್ತು ದೇಹ ಎರಡನ್ನು ಶಾಂತ ಗೊಳಿಸುತ್ತದೆ.
ಹಾಗಾಗಿ ಧ್ಯಾನ ಮಾಡಿದಾಗ ನಮಗೆ ಹಾಗೂ ನಮ್ಮ ಮೆದುಳಿಗೆ ವಿಶ್ರಾಂತಿ ದೊರೆಯುತ್ತದೆ.
ನಾವು ಯಾವಾಗ ಕೋಪದಲ್ಲಿ ಇರುತ್ತೇವೋ ಅವಾಗ ನಮ್ಮ ಅತ್ಯಂತ ಪ್ರಿಯವಾದ ಚಿಂತನೆ ಎಂದಿಗೂ ಮಾಡುವುದಿಲ್ಲ ಬದಲಿಗೆ ಬದುಕಿ ಉಳಿಯುವ ಚಿಂತೆಯಲ್ಲಿ ತೊಡಗುತ್ತೇವೆ ನಮ್ಮ ಜೀವನ ನಿಜವಾಗಿ ಅಪಾಯದಲ್ಲಿದ್ದರೆ ಆ ರೀತಿ ಚಿಂತನೆ ಉತ್ತಮವಾಗಿದೆ .
ಆದರೆ ಅದು ಜೀವನಕ್ಕೆ ಅಪಾಯ ಉಂಟುಮಾಡದಿದ್ದರೆ ನಾವು ನಮ್ಮ ಅತ್ಯಂತ ಉತ್ತಮ ಚಿಂತನೆ ಅನುಭವಿಸುತ್ತೇವೆ. ಹೊರತು ಬದುಕಿ ಉಳಿಯುವ ಪ್ರವೃತ್ತಿಯಲ್ಲ , ಹೀಗಾಗಿ ಒತ್ತಡದಲ್ಲಿರುವಾಗ ನಮ್ಮ ಗಮನ ಒಳ್ಳೆಯದತ್ತ ಹೋಗಬೇಕೇ ವಿನಹ ಕೆಟ್ಟದತ್ತಲ್ಲ ನಮ್ಮ ಆಲೋಚನೆಗಳನ್ನು ನಾವು ಬರಿತಾ ಹೋಗಬೇಕು ಸಂಪೂರ್ಣ ವಾಕ್ಯಗಳು ವಿರಾಮ ಚಿಹ್ನೆಗಳು, ಚಿಂತಿಸಬೇಕು ಕೇವಲ ಬರೆದರೆ ಮಾತ್ರ ಸಾಲದು ಜೊತೆಗೆ ನಮ್ಮ ಉದ್ವಿಗ್ನತೆಯನ್ನು ಶಮನಗೊಳಿಸಬೇಕು.
ನಕರಾತ್ಮಕ ಆಲೋಚಗಳು ಹೊರಹಾಕಬೇಕು ಬರೆಯುವುದನ್ನು ಪೂರ್ಣಗೊಳಿಸಿದ ಮೇಲೆ ಶಾಂತವಾಗಿ ಒಂದ್ಸಲ ಓದಬೇಕು ಆಗ ನಮಗೆ ನಮ್ಮ ಸಮಸ್ಯೆಗಳು ಅರ್ಥವಾಗಲು ಪ್ರಾರಂಭವಾಗುತ್ತದೆ.
ನಮ್ಮೆಲ್ಲರಿಗೂ ತಿಳಿದಂತೆ ನಮ್ಮ ಶರೀರ ಪಂಚಭೂತಗಳಿಂದ ಕೂಡಿದೆ ಅದಕ್ಕಾಗಿ ಏನಾದ್ರೂ ತೊಂದರೆಯಾದರೆ ಚಿಕಿತ್ಸೆ ನೀಡಲೇಬೇಕು ತಾಳ್ಮೆ ನಮ್ಮ ಜೀವನ ಪದ್ಧತಿಯಾದಾಗ ಕೋಪ ತಾಶ್ಯಾತಂಕ ತಡೆಯಬಹುದು ಸರಿಯಾದ ಮತ್ತು ನಿಯಮಿತ ಜೀವನಶೈಲಿಯಿಂದ ದೊರಕುವ ಪ್ರತಿಫಲ ಮನಶಾಂತಿ ನೀ ಮನಶಾಂತಿಯ ಮೇಲೆ ವೈಯಕ್ತಿಕ ಸ್ವಾಸ್ಥ್ಯ ಅವಲಂಬಿಸಿದೆ ಆದ್ದರಿಂದ ಮೊಟ್ಟಮೊದಲು ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕಾದರೆ ನಮ್ಮ ಮನೋರೋಗ ರೋಗ ರಹಿತವಾಗಿರಬೇಕು.
ನಮ್ಮ ತರ್ಕಬದ್ಧ ಆಲೋಚನೆಗಳು ನಮ್ಮ ಮನಸ್ಸನ್ನು ಹತೋಟಿಯಲ್ಲಿಡುತ್ತವೆ ಹಾಗಾಗಿ ಅಂತ ಚಿಂತನೆಗಳನ್ನು ನಾವು ಮಾಡಬೇಕು ಕಾಪಾಡಿಕೊಳ್ಳಬಹುದು.
ಮುಂದುವರೆಯುವುದು….
– ಮೇನಕಾ ಪಾಟೀಲ್