ಪ್ರಾಚೀನ ಮಲ್ಲಿಕಾರ್ಜುನ ದೇವಾಲಯಕ್ಕೆ ಮೂಲ ಸ್ವರೂಪದ ಸ್ಪರ್ಶ
e -ಸುದ್ದಿ ಮಸ್ಕಿ (ವಿಶೇಷ ವರದಿ)
ಪಟ್ಟಣದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವನ್ನು ೧೬ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಎರಡನೇ ಶ್ರೀಶೈಲವೆಂದೆ ಖ್ಯಾತಿ ಹೊಂದಿದ ದೇವಾಲಯದ ಗೋಡೆಗಳ ಮೇಲೆ ಇತ್ತಚೀನ ವರ್ಷಗಳಲ್ಲಿ ಸುಣ್ಣ ಮತ್ತು ಅಲಂಕಾರಿಕ ಬಣ್ಣ ಬಳಿದು ಮೂಲ ಸ್ವರೂಪ ಹಾಳಾಗಿತ್ತು.
ಈಗ ದೇವಸ್ಥಾನಕ್ಕೆ ಹಚ್ಚಿದ ಬಣ್ಣವನ್ನು ತೆರವು ಮಾಡಿರುವದರಿಂದ ದೇವಸ್ಥಾನದ ಕಟ್ಟಡದಲ್ಲಿ ಮುಚ್ಚಿ ಹೋಗಿದ್ದ ಸುಂದರ ಕಲಾಕೃತಿಗಳು ಪುನಃ ಬೆಳಕಿಗೆ ಬಂದಿದ್ದು ದೇವಸ್ಥಾನ ಮೂಲ ಸ್ವರೂಪಕ್ಕೆ ಬಂದಿದ್ದು ಭಕ್ತರನ್ನು ಆಕರ್ಷಿಸುತ್ತಿದೆ.
೧೬ ನೇ ಶತಮನಾದ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾದ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆಗಳ ಮೇಲೆ ಶಾಸನಗಳು, ವಿವಿಧ ಕಲಾಕೃತಿಗಳುನ್ನು ಕೆತ್ತನೆ ಮಾಡಲಾಗಿದೆ. ಕೆಲವು ಕಲಾಕೃತಿಗಳು ಕಿಡಿಗೇಡಿಗಳ ಕೃತ್ಯಕ್ಕೆ ಹಾಳಾಗಿವೆ.
ಕಾಲಕ್ರಮೇಣ ಭಕ್ತರು ಪುರಾತನ ದೇವಸ್ಥಾನದ ಗೋಡೆಯ ಹೊರಗೆ ಮತ್ತು ಒಳಗೆ ಶಿಲಾ ಕಂಬಗಳಿಗೆ ಬಣ್ಣ ಹಚ್ಚಿದ್ದರಿಂದ ಶಿಲೆಯ ಕಲಾಕೃತಿಗಳು ಮುಚ್ಚಿಹೋಗಿದ್ದವು.
ದೇವಸ್ಥಾನದ ಭಕ್ತರಾದ ಕೊಪ್ಪಳದ ಇಂಜಿನಿಯರ್ ಶರಣಬಸಪ್ಪ ಅವರು ದೇವಸ್ಥಾನದ ಸುಣ್ಣ ಬಣ್ಣ ತೆರವುಗೊಳಿಸಿ ಪುನಃ ಮೂಲ ಆಕೃತಿಗೆ ತರುವ ಕೆಲಸ ಮಾಡಿಸುತ್ತಿದ್ದಾರೆ.
ಯಂತ್ರದ ಮೂಲಕ ಸ್ಯಾಂಡ್ ಬ್ಲಾಸ್ಟ್ ಮಾಡುವ ಮೂಲಕ ಗೋಡೆಗಳಿಗೆ ಅಂಟಿದ ಬಣ್ಣ ತೆಗೆಸುವ ಕೆಲಸ ಭರದಿಂದ ಸಾಗಿದೆ. ದೇವಸುಗೂರಿನ ಅಮರೇಶ ಅವರ ನೇತೃತ್ವದಲ್ಲಿ ನಿತ್ಯ ೧೦ ಜನ ಕಾರ್ಮಿಕರು ಒಂದು ವಾರದಿಂದ ಕೆಲಸದಲ್ಲಿ ನಿರತರಾಗಿದ್ದಾರೆ.
————————————
ಇಲಾಖೆಯ ಸಹಕಾರ
ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಇಲಾಖೆಯ ಸಹಯಾಕ ನಿರ್ದೆಶಕ ಮಂಜುನಾಥ ಭೋಗಾವತಿ ದೇವಸ್ಥಾನದ ಸುಣ್ಣ ಬಣ್ಣ ತೆಗೆಯಿಸಿದ್ದು ಉತ್ತಮ ಕಾರ್ಯ ಎಂದು ಅಭಿಪ್ರಾಯಪಟ್ಟಿದ್ದು, ಪ್ರವಾಸೋಧ್ಯಮ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ದೇವಸ್ಥಾನದ ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳುವೆ.
–ಮಂಜುನಾಥ ಬೋಗಾವತಿ ಸಹಾಯಕ ನಿರ್ದೆಶಕರು ಪ್ರವಾಸೋಧ್ಯಮ ಇಲಾಖೆ ರಾಯಚೂರು
——————————————————-
ಮೂಲ ಸ್ವರೂಪದಲ್ಲಿ ಇದ್ದರೆ ವಾಸ್ತವಕ್ಕೆ ಹತ್ತಿರ
ದೇವಸ್ಥಾನದ ಭಕ್ತರಾದ ಇಂಜಿನಿಯರ್ ಶರಣಬಸಪ್ಪ ಅವರು ಕಾರ್ತೀಕ ಮಾಸದಲ್ಲಿ ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಅಭಿವೃದ್ದಿಗಾಗಿ ಕಾಣಿಕೆ ಕೊಡಲು ಮುಂದೆ ಬಂದಾಗ ದೇವಸ್ಥಾನದ ಸುಣ್ಣ ಬಣ್ಣ ತೆರವುಗೊಳಿಸಿ ಮೂಲ ಆಕೃತಿಗೆ ತಂದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದಾಗ ಒಪ್ಪಿಕೊಂಡು ಕೆಲಸ ಮಾಡಿಸುತ್ತಿದ್ದಾರೆ.
–ಬಸವರಾಜಸ್ವಾಮಿ ಅರ್ಚಕ ಮಲ್ಲಿಕಾರ್ಜುನ ದೇವಸ್ಥಾನ ಮಸ್ಕಿ