ವ್ಯಕ್ತಿತ್ವ ವಿಕಸನ ಮಾಲೆಯ ಸರಣಿ ಲೇಖನ
ಜೀವನದಲ್ಲಿ ಸೃಜನಶೀಲತೆ ತುಂಬಾ ಮುಖ್ಯ
ಜ್ಞಾನ ಎಂದರೆ ಮುಂದೇನು ಮಾಡುವುದೆಂದು ತಿಳಿಯುವುದು, ಕೌಶಲ್ಯ ಎಂದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯುವುದು, ಅದೇ ಸದ್ಗುಣ ಎಂದರೆ ಕಾರ್ಯಕರ್ತಗೊಳಿಸುವುದು.
ಯಾವುದೇ ವಿಷಯ ಅನಿಸುವುದು ಸಹಜ ಒಂದು ವೇಳೆ ಸೃಜನ ಶೀಲತೆಯ ಆಸಕ್ತಿ ಬತ್ತಿ ಹೋಗಿದೆ ಎಂದರೆ ಲೋಕಿಕ ಮತ್ತು ನಿರೀಕ್ಷಿತ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದೇವೆ ಎಂದರ್ಥ.
ಜೀವನದಲ್ಲಿ ಬರೀ ಆಕಾಂಕ್ಷೆ ಇದ್ದರೆ ಸಾಲದು. ಮಹತ್ವಾಕಾಂಕ್ಷೆ ಜೊತೆಗೆ ಸೃಜನ ಶೀಲತೆ ತುಂಬಾ ಉಪಯುಕ್ತ.
ಹೊಸ ಮತ್ತು ಕಲ್ಪನಾತ್ಮಕ ವಿಚಾರಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಕ್ರಿಯೆ. ಹೊಸ ರೀತಿಯಲ್ಲಿ ಗ್ರಹಸುವ ಸಾಮಾರ್ಥ್ಯ ವಾಗಿದೆ .ಈ ಆಲೋಚನೆ ಮತ್ತು ಉತ್ಪಾದನೆಯೆಂಬ ಏರಡು ಪ್ರಕ್ರಿಯೆಗಳನ್ನು ಒಳಗೊಂಡಿದೆ.
ಅನೇಕರು ಈ ಸೃಜನ ಶೀಲತೆಯನ್ನು ಅಸಾಧ್ಯ ಎಂದು ಪರಿಗಣಿಸುತ್ತಾರೆ. ಸೃಜನಶೀಲ ಮನಸ್ಸು ಯಾವಾಗಲೂ ಒಂದು ಕುತೂಹಲಕಾರಿ ಮನಸ್ಸು ಆದ್ದರಿಂದ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಜ ಕುತೂಹಲಬೇಕು ,
ಹೊಸ ಜ್ಞಾನವನ್ನು ಪಡೆದುಕೊಳ್ಳಲು ಸ್ಪೂರ್ತಿ ಬೇಕು ಬಿಡುವಿನ ವೇಳೆಯಲ್ಲಿ ಹೆಚ್ಚು ಓದಲು ಪ್ರಯತ್ನಿಸಿದರೆ ಅದು ನಮಗೆ ಕಲಿಕೆಯಾಗುತ್ತಾ ಹೋಗುತ್ತದೆ.
ನಿಜವಾಗಿಯೂ ನಾವು ನಮ್ಮ ಕೆಲಸವನ್ನು ಪ್ರೀತಿಸಿದಾಗ ಸಹಜವಾಗಿ ಹೆಚ್ಚು ಸ್ಪೂರ್ತಿ ಉತ್ಸಾಹ ಆಲೋಚನೆಗಳೊಂದಿಗೆ ಬರುತ್ತದೆ, ಯಾವುದೇ ಕೆಲಸ ಮುಂದೊಡದೆ ಅದನ್ನ ಖುಷಿಯಿಂದ ಮಾಡುತ್ತಾ ಹೋದಲ್ಲಿ ನಾವು ಮಾಡುವ ಕೆಲಸ ಇಷ್ಟ ಪಡುವಂತಾಗುತ್ತದೆ ಅದೇ ಹವ್ಯಾಸವಾಗಿ ಬಿಡುತ್ತದೆ.
ಜೀವನದಲ್ಲಿ ಬರುವಂತಹ ಸವಾಲುಗಳನ್ನು ಎದುರಿಸುತ್ತಾ ನಾವು ಯಶಸ್ಸಿನತ್ತ ಹೋಗಲು ಪ್ರಯತ್ನಿಸುತ್ತಾ ಹೋದರೆ ಈ ಸೃಜನಶೀಲ ಪ್ರತಿಭೆ ಖಂಡಿತ ಸಾಧ್ಯವಾಗುತ್ತದೆ.
ನಾವು ಪಡುವ ಪ್ರಯತ್ನದಲ್ಲಿ ಅನೇಕ ಬಾರಿ ವಿಫಲರಾಗಬಹುದು, ಹಾಗಂತ ಭಯವನ್ನು ಇಟ್ಟುಕೊಂಡರೆ ಪ್ರಗತಿ ಕುಂಠಿತಗೊಳ್ಳುತ್ತದೆ , ತಪ್ಪು ಮತ್ತು ವೈಫಲ್ಯಗಳು ಪ್ರಕ್ರಿಯೆ ಭಾಗ ಹಾದಿಯಲ್ಲಿ ಎಡವಿ ಬೀಳಬಹುದು, ಆದರೆ ಅಂತಿಮವಾಗಿ ಸೃಜನಶೀಲ ವ್ಯಕ್ತಿಯಾಗುವುದಂತೂ ಖಂಡಿತ.
ಕೆಲಸದಿಂದ ಬೇಸತ್ತಾಗ ಸಂಗೀತ ವಾದ್ಯಗಳು ಕೇಳುವುದು ಮನಸ್ಸಿಗೆ ಮದವನ್ನು ನೀಡುತ್ತದೆ, ಜೊತೆಗೆ ಮಧ್ಯಮ ಮತ್ತು ಅಂತ್ಯದ ಆಟಗಳು ನಮ್ಮ ಬುದ್ಧಿ ಚುರುಕುಗೊಳಿಸುತ್ತದೆ.
ಮೆದುಳು ದಾಳಿಗೆ ಸಮಯ ನೀಡುತ್ತಾ, ಪ್ರತಿಯೊಂದು ಸಾಧ್ಯವನ್ನು ಪರಿಗಣಿಸಿ ಪ್ರಬಲ ಆಲೋಚನೆಗಳನ್ನ ಪಟ್ಟಿ ಮಾಡುತ್ತಾ ಇದೇ ಚಿಂತನೆಯಲ್ಲಿ ಪ್ರಕ್ರಿಯೆ ಹೊಂದಿದಾಗ ಎಲ್ಲ ಮಾಹಿತಿ ಸಂಗ್ರಹಿಸಿದಂತಾಗುತ್ತದೆ.
ಇಂಥ ಒಳ್ಳೆಯ ಮನಸ್ಸುಳ್ಳ ಚಿಂತಕರು ಸಾಮಾನ್ಯವಾಗಿ ಹೊಸ ವಿಷಯಗಳನ್ನು ಪ್ರಯತ್ನಿಸಲು ಸಿದ್ಧವಾಗಿರುತ್ತಾರೆ ಆದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಭವವನ್ನು ಪಡೆಯುತ್ತಾರೆ. ಹೊಸ ಕಾರ್ಯ ಸ್ವೀಕರಿಸುತ್ತಾರೆ ಸಾಮಾನ್ಯ ಕೆಲಸದ ಅಭ್ಯಾಸಕ್ಕಿಂತ ಭಿನ್ನವಾದ ಕನಿಷ್ಠ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ.
ಪ್ರತಿ ದಿನ ಒಂದಾದರೂ ಕೆಲಸ ವಿಭಿನ್ನವಾಗಿ ಮಾಡಬೇಕು ಆಗ ನಮ್ಮ ಕೆಲಸದ ಶೈಲಿ ಬದಲಾಗುತ್ತಾ ಹೋಗುತ್ತದೆ ಒಂದು ನಿರ್ದಿಷ್ಟ ಕೆಲಸ ನಿರ್ವಹಿಸಿಕೊಂಡು ಅದನ್ನು ನಾವು ಬದಲಾಯಿಸಬಹುದು ಉತ್ತರಗಳು ತಾನಾಗಿಯೇ ಬರುತ್ತವೆ ಇಂಥ ದೃಷ್ಟಿಕೋನಗಳಿಂದ ನಮ್ಮ ಆಲೋಚನೆಗಳು ಮತ್ತು ಪರಿಹಾರಗಳು ಪ್ರಜ್ಞಾಪೂರ್ವಕವಾಗಿ ಪರಿಗಣಿಸುತ್ತದೆ .
ಮುಂದುವರೆಯುವುದು…..
– ಮೇನಕಾ ಪಾಟೀಲ್.