ಕಾಯಕ

ಕಾಯಕ

ಇಷ್ಟಪಟ್ಟ ಬದುಕು ಪಡೆಯಲು
ಕಷ್ಟಪಟ್ಟು ಕಾಯಕದಿ ಬೆರೆತು
ನಷ್ಟವಾಗದಂತೆ ಕ್ಷಣವು
ಪುಷ್ಟಿಯಿಂದ ಬೆಳೆಯುವಾ||

ಮನದ ಆಸೆ ಅರಿತು ಬದುಕಿ
ದುರಾಸೆಗಳನು ದೂರವಿರಿಸಿ
ದೀನರಲ್ಲಿ ದಯೆಯತೋರಿ
ಧೈರ್ಯದಿಂದ ಸಾಗುವಾ||

ಹೊಂದಾಣಿಕೆ ಬೇಡ ನಮಗೆ
ಬಡತನದ ಜೊತೆಗೆ
ದುಡಿಮೆ ಮಂತ್ರ ಜೊತೆಗೊರಲು
ಬೇರೆ ಮಂತ್ರಬೇಕೆ ||

ಕಷ್ಟವನ್ನು ಕಳೆದು ನಾವು
ದುಷ್ಟತನವ ದಮನಮಾಡಿ
ಅಷ್ಟದಿಕ್ಕಿನಲ್ಲಿ ಬೆಳೆದು
ಮುಷ್ಟಿಕಟ್ಟಿ ನಿಲ್ಲುವಾ
ಸಮಷ್ಟಿಯನ್ನು ಗೆಲ್ಲುವಾ||

ಸವಿತಾ ಮಾಟೂರು ಇಲಕಲ್ಲ 

78927 10782

One thought on “ಕಾಯಕ

Comments are closed.

Don`t copy text!