ಕೋಪೇಶ್ವರ ದೇವಾಲಯ (ಖಿದ್ರಾಪುರ )

ಪ್ರವಾಸ ಕಥನ ಮಾಲೆ

 

ಕೋಪೇಶ್ವರ ದೇವಾಲಯ (ಖಿದ್ರಾಪುರ ).

 


12ನೇ ಶತಮಾನದಲ್ಲಿ ಶೀಲಾಹಾರ ರಾಜ ಗಂಡರಾಧಿತ್ಯ ನಿರ್ಮಿಸಿದ ದೇವಾಲಯ. ಕೋಪೇಶ್ವರ ಅಂದ್ರೆ ಕೋಪಗೊಂಡ ಶಿವ. ಸತಿಯು ಶಿವನನ್ನು ಮದುವೆಯಾಗುವದನ್ನು ಇಷ್ಟಪಡದ ದಕ್ಷನು ಯಜ್ಞ ನಡೆಸಿದನು. ಅದಕ್ಕೆ ಶಿವ ಹಾಗೂ ತನ್ನ ಮಗಳನ್ನು ಕರೆಯಲಿಲ್ಲ. ಆದರೂ ಸತಿ ನಂದಿಯ ಮೇಲೆ ಅಲ್ಲಿಗೆ ಬರುತ್ತಾಳೆ. ಆಗ ದಕ್ಷ ನೆರೆದ ಅತಿಥಿಗಳ ಮುಂದೆ ಅವಳನ್ನು ಅವಮಾನಿಸುತ್ತಾನೆ. ಅಪಮಾನ ಸಹಿಸದ ಸತಿ ಅದೇ ಯಜ್ಞದ ಬೆಂಕಿಯಲ್ಲಿ ಹಾರಿ ದಹಿಸಿಕೊಳ್ಳುತ್ತಾಳೆ.

ಈ ವಿಷಯ ತಿಳಿದ ಶಿವ ಕೋಪಗೊಂಡು ದಕ್ಷನ ತಲೆ ಕಡಿಯುತ್ತಾನೆ. ಮಧ್ಯ ಪ್ರವೇಶಿಸಿದ ವಿಷ್ಣು ಶಿವನನ್ನು ಸಮಾಧಾನಿಸಿ ದಕ್ಷನನ್ನು ರಕ್ಷಿಸುತ್ತಾನೆ. ವಿಷ್ಣು. ಶಿವನ ಕ್ರೋಧ ಶಮನ ಮಾಡಲು ಕರೆದುಕೊಂಡ ಬಂದ ಸ್ಥಳವೇ ಈ ದೇವಾಲಯ ವಿದ್ದ ಸ್ಥಳ.
ಈ ದೇವಾಲಯವನ್ನು ಶಿಲಾಹಾರ ರಾಜರು ನಿರ್ಮಿಸಿದರು. ಈ ದೇವಾಲಯದ ಒಳಗೆ ಹೊರಗೆ ಅನೇಕ ಶಾಸನಗಳಿದ್ದು ಈಗ ಕೆಲವು ಮಾತ್ರ ಸುಸ್ಥಿತೀಯಲ್ಲಿವೆ. ಈ ಎಲ್ಲಾ ಶಾಸನ ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ. ಮೊದಲು ಸ್ವರ್ಗ ಮಂಟಪ ಪ್ರವೇಶಿಸುತ್ತೇವೆ. ಅದು ವೃತ್ತಕಾರವಾಗಿ ಆಕಾಶಕ್ಕೆ ತೆರೆದಿದೆ. ಆಕಾಶ ನೋಡುವಾಗ ಸ್ವರ್ಗ ನೀಡಿದ ಅನುಭವ. ಗಣೇಶ. ಕಾರ್ತಿಕೆಯ. ಕುಬೇರ. ಇಂದ್ರನ ಕೆತ್ತಿದ ವಿಗ್ರಹಗಳಿವೆ. ಆನೆ. ನಾವಿಲು. ಇದೆ ಆದರೆ ಈಗ ಬಹಳಷ್ಟು ಮೂರ್ತಿಗಳು ವಿಘ್ನವಾಗಿವೆ.
ಮುಂದೆ ಒಳಗೆ ಹೋದ ಹಾಗೆ ಎರಡನೇ ಪ್ರಾಂಗಣ ದಾಟಿದ ಮೇಲೆ ಪ್ರತಿಷ್ಠಾಪಿಸಿದ ಕೊಪೆಶ್ವರ ಹಾಗೂ ಶಿವಲಿಂಗಾ ಕೃತಿಯಲ್ಲಿರುವ ವಿಷ್ಣುವಿನ ವಿಗ್ರಹ ಇದೆ. ಶಿವನ ಮುಂದೆ ಇಲ್ಲಿ ನಂದಿ ಇಲ್ಲ. ಇಲ್ಲಿ ಶಿವ. ವಿಷ್ಣುವಿನ ಪೂಜೆ ನಡೆಯುತ್ತದೆ.
ಈ ದೇವಾಲಯದಲ್ಲಿ 48ಸ್ಥoಭಗಳಿವೆ. ಅಧ್ಭುತ ಕೆತ್ತನೆಯಿಂದ ಕಂಗೊಳಿಸುತ್ತಿದೆ. ಕೃಷ್ಣಾ ನದಿ ತಟ ದಲ್ಲಿರುವ ಸುಂದರ ದೇವಾಲಯ. ಪ್ರತಿಯೊಂದೂ ಕಂಬಗಳು ಬೇರೆ ಬೇರೆ ಆಕಾರದಲ್ಲಿದೆ.

ದೇವಸ್ಥಾನಕ್ಜೆ ಮೂರು ಬಾಗಿಲುಗಳಿವೆ. ಕೋಪೇಶ್ವರ(ಶಿವ ). ಧೂಪೆಶ್ವರ್ (ವಿಷ್ಣು ) ಇಬ್ವರೂಲಿಂಗ ರೂಪದಲ್ಲಿ ಪೂಜೆ ಗೊಳ್ಳುವ ದೇವರು.ದಕ್ಷಿಣ ಭಾಗದಲ್ಲಿ ಸಪ್ತ ದ್ವಾರ ಪಾಲಿಕೆಯರಿದ್ದಾರೆ. ಈ ದೇವಸ್ಥಾನ ಚಾಲುಕ್ಯ ಹಾಗೂ ಪಲ್ಲವರ ಯುದ್ಧ ದ ಕಾರಣ ಪೂರ್ಣ ಪ್ರಮಾಣ ದಲ್ಲಿ ಕಟ್ಟಲಾಗಲಿಲ್ಲವಂತೆ.
ಈ ಸುಂದರ ಮಂದಿರಕ್ಕೆ ಒಮ್ಮೆ ಭೇಟಿ ನೀಡಿ. ಇಲ್ಲಿನ ಶಿಲ್ಪ ಕಲಾ ವೈಭವ ನೋಡಿ ಆನಂದಿಸಿ. ಆಕಾಶಕ್ಕೆ ತೆರೆದುಕೊಂಡ ಸ್ವರ್ಗ ಮಂಟಪ ಇಲ್ಲಿನ ಪ್ರಮುಖ ಆಕರ್ಷಣೆ ಖಿದ್ರಾಪುರ ಚಿಕ್ಕೋಡಿಯಿಂದ 30 km ದೂರದಲ್ಲಿದೆ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

Don`t copy text!