ಸರ್ಕಾರಿ ಸೇವಕ

Fight for OPS

ಸರ್ಕಾರಿ ಸೇವಕ

ಸರ್ಕಾರಿ ಸೇವಕ
ಪಕ್ಷಾತೀತ, ಪರಿಶ್ರಮಿಕ,
ಲಾಭಗಳಿಗೂ ಮಣಿಯದೇ
ಸೇವೆ ಸಲ್ಲಿಸಿದ,
ರಾಜಕೀಯದಿಂದ
ದೂರವೇ ನಿಂತ,
ಕೊನೆಗಾಲದಲ್ಲಿ
ಬೇಡುತಿಹನು ಪಿಂಚಣಿ ನಿಶ್ಚಿತ!!

ಕೇಳುತ್ತಿಲ್ಲ ಯಾವ
ಆಸ್ತಿ ಐಷಾರಾಮಿ,
ಮುರ್ಯಾದೆ ಬೇಕಲ್ಲವೇ
ಅರವತ್ತರ ಇಳಿವಸ್ಸಿನಲ್ಲಿ?,
ಮೂರು ಹೊತ್ತಿಗೆ ಬುತ್ತಿ
ಒಂದ್ಚೂರು ಔಷಧಿ,
ಸಾಕಾಗುವಷ್ಟು ನೀಡಿ
ನಿಶ್ಚಿತ ಪಿಂಚಣಿ!!!

ನಾವೂ ಬಯಸುವುದು
ಸ್ವಾಭಿಮಾನದ ಬದುಕು,
ಹಗಲಿರುಳು ದುಡಿದು
ಕಳೆದಾಯಿತು ಆಯಸ್ಸು,
ಬಂದಾಗ ಮುಪ್ಪು
ಯಾರು ಯಾರಿಗೆ ಬೇಡಬೇಕು?
ದಾನವಲ್ಲ, ಇದು ನಮ್ಮ ಹಕ್ಕು
ಪಡೆದೇ ತೀರುವೆವು ಒ.ಪಿ.ಯಸ್ಸು!!

ಇಂದು ನಾಳೆ ಸಾಕು ಬಿಡಿ
ಬೇಕೇ ಬೇಕು ಹಳೇ ಪಿಂಚಣಿ,
ಪರಿಶ್ರಮದ ಪಯಣಕೆ
ಪರಿಹಾರ ಒದಗಿಸಿ,
ನೌಕರನ ನಿಯತ್ತಿಗೆ
ನೈತಿಕ ನೆಮ್ಮದಿ ನೀಡಿ,
ನಿಶ್ಚಿತ ಪಿಂಚಣಿ
ಜಾರಿಗೆ ಮಾಡಿ!!

🖋ಫರ್ಹಾನಾಜ್. ಮಸ್ಕಿ

Don`t copy text!