ಲಿಂಗಾಯತ ಪುಣ್ಯಪುರುಷರ ಮಾಲಿಕೆ
ಮಹಾದಾನಿ ರಾಜಾ ಲಖಮಗೌಡರ ಬದುಕು ಮತ್ತು ನಾಡು ನುಡಿಗೆ ಅವರ ಕೊಡುಗೆಗಳು
ರಾಜ ಲಕಮಗೌಡ ಸರದೇಸಾಯಿ ಅವರು ಒಂಟುಮೂರಿ ಸಂಸ್ಥಾನದ ದೊರೆಯಾಗಿ ಈ ನಾಡು -ನುಡಿ ಕಟ್ಟುವಲ್ಲಿ ಸೇವೆ ಅನನ್ಯವಾದುದು .
ಅವರ ಶ್ರೀಮಂತ ಜೀವನ ಶ್ರೀಮಂತರು ಸಮಾಜ ಮುಖಿಯಾಗಿ ಹೇಗೆ ಬದುಕ ಬೇಕೆಂಬುವುದನ್ನು ತೋರಿಸಿಕೊಡುತ್ತದೆ.
ಶಿರಸಂಗಿ ಲಿಂಗರಾಜರು ತ್ಯಾಗವೀರರಾದರೆ ರಾಜ ಲಕಮಗೌಡ ಸರದೇಸಾಯಿ ಅವರು ಮಹಾದಾನಿಗಳಾಗಿ ಇರುವುದು ವರ್ತಮಾನದ ಜನಾಂಗಕ್ಕೆ ತಿಳಿಯದೇ ಇರುವುದು ಖೇದಕರ ವಿಷಯ.
1864 ಜುಲೈ 29ರಂದು ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ಸಾಮಾನ್ಯ ಮನೆತನದಲ್ಲಿ ಜನಿಸಿ ದೂಡ್ಡ ಸಂಸ್ಥಾನದ ಸಂಸ್ಥಾನಿಕರಾಗಿರುವುದು ಅವರ ಜೀವನದ ಬಹುದೊಡ್ಡ ತಿರುವು.
ವಂಟಮೂರಿ ಸಂಸ್ಥಾನದ 18ನೇ ದೊರೆಯಾದ ಬಸವ ಪ್ರಭು ದೇಸಾಯಿಯವರಿಗೆ ಮಕ್ಕಳಿಲ್ಲದೇ 1877 ರಲ್ಲಿ ನಿಧನರಾದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಅಂದಿನ ನ್ಯಾಯಾಧೀಶರಾದ “ಮಿಸ್ಟರ ಶ್ಯಾ “ವಂಟಮೂರಿ ಸಂಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ವಂಟಮೂರಿ ಸಂಸ್ಥಾನದ ವಿಧವೆ ರಾಣಿ “ಶಿವಗಂಗಮ್ಮ “ದೊಡ್ಡ ಸಂಸ್ಥಾನದ ಅಧಿಪತಿಯಾಗಿದ್ದಳು.
ಶಿವಗಂಗಮ್ಮ ಅಮ್ಮಣಿಗೆಯ ಅಲಗೌಡ ದೇಸಾಯಿಯ ಮೂರನೇ ಮಗನಾದ “ಅಪ್ಪಾ ಸಾಹೇಬನನ್ನು” ದತ್ತಕ್ಕೆ ತೆಗೆದುಕೊಂಡಳು.
ದತ್ತಕ ತೆಗೆದುಕೊಳ್ಳುವ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ಲಿಖಿತ ಒಪ್ಪಿಗೆಯನ್ನು ಪಡೆಯಲಾಯಿತು.
ದತ್ತಕ ಪಡೆಯುವ ಮಗು ಹತ್ತಿರದ ಸಂಬಂಧಿಕರು ಇರುವುದನ್ನು ಶಿವಗಂಗಮ್ಮ ಕೊಲ್ಲಾಪುರದ ಆಡಳಿತ ಕೆಂದ್ರದಲ್ಲಿ ಬ್ರಿಟಿಷ್ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು.
ಆ ಸಂದರ್ಭದಲ್ಲಿ ಬ್ರಿಟಿಷರು ದತ್ತಕ ತೆಗೆದುಕೊಳ್ಳುವ ಮಗುವನ್ನು ಪರೀಕ್ಷಿಸುವುದಾಗಿ ಘೋಷಣೆ ಮಾಡಿದರು .
ಹಾಗಾಗಿ ವಂಟಮೂರಿ ಯ ಸಂಸ್ಥಾನಕ್ಕೆ ದತ್ತಕ ಬರುವ ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾದರು. ಆಗ ಬೆಳಗಾವಿ ಜಿಲ್ಲಾಧಿಕಾರಿ “ಮಿಸ್ಟರ್ ಶ್ಯಾ” ನೇತೃತ್ವದಲ್ಲಿ ಸಂದರ್ಶನ ನಡೆದು “ಅಮ್ಮಣಗಿ “ಮನೆತನದ “ಅಪ್ಪಾಸಾಹೇಬ”ನನ್ನು ಅಧಿಕೃತವಾಗಿ ದತ್ತಕ ತೆಗೆದುಕೊಳ್ಳಲು ಬ್ರೀಟಿಷ ಸರಕಾರ ಅನುಮತಿಯನ್ನು ನೀಡಿದರು.
ಅಪ್ಪಾ ಸಾಹೇಬ ಬಾಲ್ಯದಿಂದಲೂ ಕೈಯಲ್ಲೊಂದು ಪುಸ್ತಕವನ್ನು ಹಿಡಿದುಕೊಳ್ಳುವ ಪರಿಪಾಠ ಹೊಂದಿದ್ದರು.
1887 ರಲ್ಲಿ ವಂಟಮೂರಿಯ ಅರಮನೆಯಲ್ಲಿ ದತ್ತಕ ಪ್ರಕ್ರಿಯೆ ವಿಜ್ರಂಭಣೆಯಿಂದ ಜರುಗಿತು.ಆಗ 13 ವರ್ಷದವನಿದ್ದ ಅಪ್ಪಾಸಾಹೇಬ “ರಾಜಾ ಲಖಮಗೌಡ “ರಾಗಿ ಸಂಸ್ಥಾನದ ಒಡೆಯರಾದರು.
ಲಖಮ್ ಗೌಡ್ರ ಶಿಕ್ಷಣ:
ವಂಟಮೂರಿ ಸಂಸ್ಥಾನದ ಒಡೆಯರಾದರೂ ಅಂದಿನ ಸಂಸ್ಥಾನಿಕ ಒಡೆಯರಲ್ಲಿ ಅತಿ ಹೆಚ್ಚು ಉನ್ನತವನ್ನು ಶಿಕ್ಷಣ ಪಡೆದ ಮೊದಲಿಗರು ರಾಜಾ ಲಖಮಗೌಡ ದೇಸಾಯಿ ಅವರು .
ವೀರನಗೌಡ ಪಾಟೀಲ್ ಎಂಬ ಶಿಕ್ಷಕರು ಮನೆಗೆ ಬಂದು ಲಖಮಗೌಡರಿಗೆ ಪಾಠ ಹೇಳಿಕೊಡುತ್ತಿದ್ದರು ..
ಇದು ಮುಂದೆ ಅಮ್ಮನಿಗೆ ಗ್ರಾಮದಲ್ಲಿ ಗಾವಠಿ ಶಾಲೆ ಪ್ರಾರಂಭವಾಗಲು ಕಾರಣವಾಯಿತು.
1878 ರಿಂದ 1880 ರ ವರೆಗೆ ಕೋಲಾಪುರದ ಸರ್ದಾರ್ ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು .ನಂತರ ಮುಂಬೈ ಪ್ರಾಂತ್ಯದ ಸಂಸ್ಥಾಣಿಕರ ಮಕ್ಕಳಿಗಾಗಿ ತೆರೆದ ವಿಶೇಷ ಶಾಲೆಗೆ ದಾಖಲಾಗಿ ಅಲ್ಲಿನ ಮುಖ್ಯೋಪಾಧ್ಯಾಯರಾದ ಕ್ಯಾಂಡಿಯವರ ನೆಚ್ಚಿನ ಶಿಷ್ಯರಾದರು.
ಇಲ್ಲಿ ಛತ್ರಪತಿ ಶಾಹು ಮಹಾರಾಜರು, ಸವಣೂರಿನ ಸಾಲಾರಜಂಗ್ ,ಮಿರಜ್ ನ ನವಾಬ್ ರಾಜಸಾಹೇಬ್, ಇಚಲ್ಕರಂಜಿಯ ದೇಸಾಯಿ ,ಸಾವಂತ್ ವಾಡಿಯ ಸರದಾರ, ಮೈಶಾಳ ದೇಶಗತಿಯ ಅಪ್ಪಾ ಸಾಹೇಬ , ಶಿರಸಂಗಿ ಸಂಸ್ಥಾನದ ಲಿಂಗರಾಜ್ ದೇಸಾಯಿರು ಸಹಪಾಠಿಗಳಾಗಿದ್ದರು.
ಶಿರಸಂಗಿ ಲಿಂಗರಾಜರು ಲಖಮ ಗೌಡರನ್ನು ತಮ್ಮ ಮಾರ್ಗದರ್ಶಕ ರೆಂದು ತಿಳಿದು ಪ್ರತಿ ಕಾರ್ಯ ಕೈಗೊಳ್ಳುವ ಮುನ್ನ ಲಕಮ ಗೌಡರ ಸಲಹೆಯನ್ನು ಕೇಳುತ್ತಿದ್ದರು.
ಬೆಳಗಾವಿಯಲ್ಲಿ ಶಿಕ್ಷಣ:
ಕೋಲ್ಲಾಪುರದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಳಗಾವಿ ಜಿಲ್ಲೆಯ ಸರದಾರ ಹೈಸ್ಕೂಲನ್ನು ಆಯ್ದುಕೊಂಡರು.
1881 ರಿಂದ 1883ರ ವರೆಗೆ ಸರ್ದಾರ್ ಹೈ ಸ್ಕೂಲ್ ನಲ್ಲಿ ಇಂಗ್ಲಿಷ್ ನಲ್ಲಿ ಶಿಕ್ಷಣವನ್ನು ಪಡೆದರು.
ಈ ಶಾಲೆಯಲ್ಲಿ ಪ್ರತಿ ವರ್ಷ ನೀಡುವ ಆದರ್ಶ ವಿದ್ಯಾರ್ಥಿಗಳಲ್ಲಿ ಮೊದಲು ಹೆಸರು ಕೇಳಿ ಬರುತ್ತಿದ್ದೆ ಲಖಮಗೌಡರದ್ದು.
ಸರ್ದಾರ್ ಶಾಲೆಯಲ್ಲಿ ಏಳು ವರ್ಷ ಶಿಕ್ಷಣವನ್ನು ಪೂರೈಸಿದ ನಂತರ 1883 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಮೆಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದರು.
Deccan Saradar association ನಲ್ಲಿ ಉನ್ನತ ಶಿಕ್ಷಣವನ್ನು ಪಡೆದ ಮೊದಲಿಗರಾಗಿದ್ದರು ಲಕಮಗೌಡ ದೇಸಾಯಿಯವರು.
ಮೂರುವರೆ ಲಕ್ಷ ರೂಪಾಯಿಗಳ ಉತ್ಪನ್ನವಿದ್ದ ವಂಟಮೂರಿ ದೇಸಾಯಿ ಅವರು ಡೆಕ್ಕನ್ ಸರ್ದಾರ್ ಅಸೋಸಿಯೇಷನ್ ನಲ್ಲಿ ಮೊದಲ ಸಾಲಿನಲ್ಲಿ ಕೂಡುವ ಅವಕಾಶವನ್ನು ಸಿಕ್ಕಿತು. ಅದಕ್ಕೆ ಕಾರಣ ಅವರು ಪಡೆದ ಉನ್ನತ ಶಿಕ್ಷಣದಿಂದ .ಇದು ಕೆಲವೊಂದಿಷ್ಟು ದೇಸಾಯಿಗಳಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿದರೂ ಸಹಿತ ಅವರ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ.
1884ರಲ್ಲಿ ಲಖಮಗೌಡರಿಗೆ ಬ್ರಿಟಿಷ್ ಸರ್ಕಾರ ವಂಟಮೂರಿ ಸಂಸ್ಥಾನದ ಆಡಳಿತವನ್ನು ಒಪ್ಪಿಸಿತು.
ಇಂಗ್ಲೆಂಡ್ ನಲ್ಲಿ ಉನ್ನತ ಶಿಕ್ಷಣ:
ಅಂದಿನ ಬೆಳಗಾವಿ ಜಿಲ್ಲಾಧಿಕಾರಿಯಾದ ಮಿಸ್ಟರ್ ಶ್ಯಾ ಮತ್ತು ಅಂದಿನ ಬೆಳಗಾವಿಯ ಪ್ರಸಿದ್ಧ ವಕೀಲರಾದ ಅಣ್ಣಾಸಾಹೇಬ್ ಛತ್ರೆ ಅವರಿಂದ ಕಾನೂನು ಅಧ್ಯಯನದ ಮಾಹಿತಿ ಹಾಗೂ ಸಲಹೆಗಳನ್ನು ಪಡೆದುಕೊಂಡು 1886 ರಲ್ಲಿ ಬಾರ್ ಆ್ಯಟ್ ಲಾ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು.
ಇಂಗ್ಲೆಂಡಿನ ಪ್ರಸಿದ್ಧ ಕಾನೂನು ಮಹಾವಿದ್ಯಾಲಯ ವಾದ “ಇನ್ನರ್ ಟೆಂಪಲ್ “ನಲ್ಲಿ ಪ್ರವೇಶ ಪಡೆದುಕೊಂಡರು. ಕಾನೂನು ಅಧ್ಯಯನದ ಜೊತೆಗೆ ಇಂಗ್ಲೆಂಡ್ ನ ಸಾಂಸ್ಕೃತಿಯ ಕುರಿತು ಆಳವಾಗಿ ಅಭ್ಯಾಸಸಿದರು .
ಪ್ರೆಂಚ ಸಂಸ್ಕೃತಿಯನ್ನು ಅರಿಯಬೇಕೆಂದು ಫ್ರೆಂಚ್ ಭಾಷೆ ಕಲಿಯಲು ಪ್ರಾರಂಭಿಸಿದರು.
ಎರಡು ವರ್ಷಗಳ “ಬಾರ್ ಆ್ಯಟ್ ಲಾ” ಅಧ್ಯಯನವನ್ನು 1888ರಲ್ಲಿ ಮುಗಿಸಿದರು.
1888 ರಲ್ಲಿ ಬಾರ್ ಆ್ಯಟ ಲಾ ಪದವಿಯನ್ನು ಪಡೆದರು .ಲಿಂಗಾಯತ ಸಮಾಜದಲ್ಲಿ ಬಾರ್ ಆ್ಯಟ ಲಾ ಪದವಿಯನ್ನು ಪಡೆದ ಮೊದಲ ವ್ಯಕ್ತಿಗಳಾದರು ಲಖಮಗೌಡ ದೇಸಾಯಿಯವರು.
“ಬಾರ್ ಆ್ಯಟ್ ಲಾ “ಪದವಿ ಪಡೆದ ನೆನಪಿಗಾಗಿ ಇವರು ಬೆಳಗಾವಿಯ ಬ್ರಾಹ್ಮಣ ಸಮಾಜದ ಆಡಳಿತ ಮಂಡಳಿಯ KLS ಸೊಸಾಯಿಟಿ ಗೆ ನೀಡಿದ ಒಂದು ಲಕ್ಷ ದೇಣಿಗೆ ಯಿಂದ ಬೆಳಗಾವಿಯಲ್ಲಿ ತೆರೆಯಲಾದ ಕಾನೂನು ಮಹಾವಿದ್ಯಾಲಯಕ್ಕೆ ರಾಜ_ಲಖಮಗೌಡ_ಕಾನೂನು ಮಹಾವಿದ್ಯಾಲಯ ಎಂಬ ಹೆಸರಿಡಲಾಯಿತು .
ಗೋಕಾಕದ ಪ್ರತಿಷ್ಠಿತ ಕಲ್ಯಾಣ ಶೆಟ್ಟಿ ಅವರ ಮಗಳಾದ ಪಾರ್ವತಿದೇವಿಯನ್ನು ವಿವಾಹವಾದರು.
1884ರಲ್ಲಿ ಬಸವ ಪ್ರಭು ಎಂಬ ಗಂಡು ಮಗುವಿಗೆ ಜನ್ಮ ನೀಡಿದರು .1917ರಲ್ಲಿ ಪಾರ್ವತಿ ದೇವಿ ನಿಧನ.
1908ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ನಾಲ್ಕನೆಯ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೀಯ ಸ್ಥಾನವನ್ನು ವಹಿಸಿಕೊಂಡು ಇವರ ಮಾಡಿದ ಭಾಷಣ ಸಾರ ಸಮಾಜಕ್ಕೆ ದಿಕ್ಸೂಚಿಯಾಗಿದ್ದವು.
ಮಧ್ಯಪ್ರದೇಶದ ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ತಾವು ಅನುಭವಿಸಿದ ಸೀತಾಫಲದ ಹಣ್ಣಿನ ರುಚಿ ಇವರಿಗೆ ಬಹಳ ಅಪ್ಯಾಯಮಾನವಾಗಿತ್ತು .
ಲಖಮಗೌಡರು ಸೀತಾಫಲ ತಳಿಯ ಬೀಜಗಳನ್ನು ತಮ್ಮ ಜೊತೆ ತಂದು ಒಂಟಮೂರಿ ಸಂಸ್ಥಾನದಲ್ಲಿ ಸೀತಾಫಲ ಬೆಳೆಯುವ ಕುರಿತು ಪ್ರಚಾರ ಮಾಡಿದರು.
ಲಖಮ್ ಗೌಡ ದೇಸಾಯಿ ಅವರಿಗೆ ಇಡೀ ಜಗತ್ತನ್ನು ಸಂಚರಿಸಲು ಕಷ್ಟವಾಗಲಿಲ್ಲ ಕಾರಣ ಕನ್ನಡ ,ಹಿಂದಿ ,ಇಂಗ್ಲಿಷ್ ,ಮರಾಠಿ ,ಉರ್ದು ,
ಭಾಷೆಗಳನ್ನು ಸುಲಿಲಿತವಾಗಿ ಮಾತನಾಡುತ್ತಿದ್ದರು .
ಬೇರೆ ಬೇರೆ ಪ್ರದೇಶದಲ್ಲಿ ಕಂಡುಕೊಂಡ ಒಳ್ಳೆಯ ಅಂಶಗಳನ್ನು ತಮ್ಮ ಸಂಸ್ಥಾನದಲ್ಲಿ ಆಚರಣೆಗೆ ತರುವ ಪ್ರಯತ್ನವನ್ನು ಮಾಡಿದರು.
ಲಖಮಗೌಡರು 1884 ಜುಲೈ 29ರಂದು ಲಕ್ಕಮ್ಮ ಗೌಡರು ತಮ್ಮ 20ನೆಯ ಹುಟ್ಟು ಹಬ್ಬದ ದಿನದಂದು ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಿಂದ ಒಂಟಮೂರಿ ಸಂಸ್ಥಾನದ ಆಡಳಿತವನ್ನು ವಹಿಸಿಕೊಂಡರು.
ಆರಂಭದಲ್ಲಿ ಎಂಟುಮುರಿ ಸಂಸ್ಥಾನದ ಒಟ್ಟು ಆಸ್ತಿ ಎಷ್ಟು? ಅದನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಲು ಮತ್ತು ಸಂಸ್ಥಾನದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಕಾರ್ಯ ಪ್ರಾರಂಬಿಸಿದರು.
ಸಂಸ್ಥಾನವನ್ನು ಆಡಳಿತದ ಅನುಕೂಲಕ್ಕಾಗಿ ಏಳು ಭಾಗಗಳಾಗಿ ವಿಂಗಡಿಸಿದರು.
ವಂಟಮೂರಿ,೨)ದಡ್ಡಿ, ೩)ಹುಕ್ಕೇರಿ ,೪)ನಿಪ್ಪಾಣಿ ,೫)ಚಿಕ್ಕೋಡಿ, ೬)ನಾಗರ ಮನ್ನೂಳ್ಳಿ ,೭)ಸಂಕೇಶ್ವರ.
1884ರಲ್ಲಿ ವಂಟಮೂರಿ ಸಂಸ್ಥಾನದ ಆಡಳಿತ ಜವಾಬ್ದಾರಿಯನ್ನು ರಾಜಾಲಖಮಗೌಡ ದೇಸಾಯಿಯವರು ವಹಿಸಿಕೊಂಡರು.
ಆಗ ಬ್ರಿಟಿಷ್ ಸರ್ಕಾರ ಇವರನ್ನು “ಫಸ್ಟ್ ಗ್ರೇಡ್ “ಸರದಾರ ಎಂದು ಘೋಷಿಸಿದರೊಂದಿಗೆ ಡೆಕ್ಕನ್ ಸರ್ದಾರ್ ಅಸೋಸಿಯೇಷನ್ ನಲ್ಲಿ ಮೊದಲ ಸಾಲಿನ ಕುರ್ಚಿಯಲ್ಲಿ ಕುಳಿತಳುಕೊಳ್ಳಲು ನಿಯೋಜಿಸಿದರು.
1888 ರಲ್ಲಿ ಬ್ರಿಟಿಷ್ ಸರ್ಕಾರ ಲಖಮಗೌಡರ ನ್ಯಾಯ ಪ್ರವೀಣತೆಯನ್ನು ತಿಳಿದು ಲಖಮಗೌಡರನ್ನು ಪ್ರಥಮ ದರ್ಜೆ ನ್ಯಾಯಾಧೀಶರ ಹುದ್ದೆ ನೀಡಿತು.
ಏಳನೇ ಎಡ್ವರ್ಢ ಚಕ್ರವರ್ತಿಯ ಸಿಂಹಾಸನರೋಹಣದ ಅಂಗವಾಗಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವೀಶೆಷ ಅತಿಥಿಯಾಗಿ ಭಾಗಿಯಾಗಲು ಬ್ರಿಟಿಷ್ ಸರ್ಕಾರ ಅಹ್ವಾನ ನೀಡಿತ್ತು.
ಮುಂಬೈ ಲೆಜಿಸ್ಲೇಟಿವ್ ಕೌನ್ಸಿಲ್ ನ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿದ್ದರು.
ಬ್ರಿಟಿಷ್ ಸರ್ಕಾರ “ಸಿಐಇ “ಹಾಗೂ “ರಾಜಾ” ಎಂಬ ಪದವಿ ನೀಡಿ ಗೌರವಿಸಿತು.
1908 ರಲ್ಲಿ ಬಾಗಲಕೋಟೆಯಲ್ಲಿ ನಡೆದ ನಾಲ್ಕನೇ ವೀರಶೈವ ಮಹಾಸಭೆಯ ಅಧ್ಯಕ್ಷತೆಯನ್ನು ರಾಜಾ ಲಖಮಗೌಡ ದೇಸಾಯಿಯವರು ವಹಿಸಿಕೊಂಡಿದ್ದರು.
1928 ರಿಂದ 1843 ರವರೆಗೆ ರಾಜಾ ಲಕಮ ಗೌಡ ಸರದೇಸಾಯಿ ಅವರು ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಇವರ ಅಧ್ಯಕ್ಷೀಯ ಅವಧಿಯಲ್ಲಿ ಧಾರವಾಡದಲ್ಲಿ RLS ಪ್ರೌಢಶಾಲೆ ,ಒಂಟಮೂರಿಯಲ್ಲಿ ಇಂಗ್ಲೀಷ್ ಶಾಲೆ ,ಬೆಳಗಾವಿಯಲ್ಲಿ ಲಿಂಗರಾಜ್ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ಆರ್. ಎಲ್ .ಎಸ್ .ವಿಜ್ಞಾನ ಮಹಾವಿದ್ಯಾಲಯ ಸ್ಥಾಪನೆಗೆ ಕಾರಣಿಭೂತರಾದರು.
1933 ರಲ್ಲಿ ಧಾರವಾಡದಲ್ಲಿರುವ LEA(Lingayat education association) ಸಂಸ್ಥೆಯ ಅಧ್ಯಕ್ಷರಾಗಿ 1933 ರಿಂದ 1943 ರರವರೆಗೆ ಕಾರ್ಯನಿರ್ವಹಿದರು.
1943 ಜೂನ್ ಒಂದರಂದು ತಮ್ಮ 79 ನೇ ವಯಸ್ಸಿನಲ್ಲಿ ರಾಜಾ ಲಖಮಗೌಡ ದೇಸಾಯಿ ಅವರು ನಿಧನ ಹೊಂದಿದರು.
ರಾಜಾ ಲಖಮಗೌಡ ಸರದೇಸಾಯಿಯವರು ಕಟ್ಟಿದ ಶೈಕ್ಷಣಿಕ ಸಂಸ್ಥೆಗಳು.
ರಾಜಾ ಲಖಮಗೌಡ ಸರದೇಸಾಯಿಯವರು ಕಟ್ಟಿದ ಶೈಕ್ಷಣಿಕ ಸಂಸ್ಥೆಗಳು.
ಧಾರವಾಡದಲ್ಲಿ ಅರಟಾಳ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪನವರಿಂದ ಸ್ಥಾಪಿತ ಲಿಂಗಾಯತ ಶಿಕ್ಷಣ ನಿದಿಗೆ ಆರಂಭದಲ್ಲಿ 5000 ಗಳನ್ನು ಮತ್ತು 1901 ರಲ್ಲಿ 50,000ಗಳನ್ನು ನೀಡಿ ಲಿಂಗಾಯತ ಸಮಾಜದ ಶೈಕ್ಷಣಿಕ ಮುನ್ನಡೆಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟವರು ರಾಜ ಲಖಮ ಗೌಡ ಸರ ದೇಸಾಯಿ ಅವರು.
೨)1933 ರಿಂದ 1943 ರವರೆಗೆ ಲಿಂಗಾಯತ್ ವಿದ್ಯಾ ಅಭಿವೃದ್ಧಿ ಸಂಸ್ಥೆ ಧಾರವಾಡ ಇದರ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದರು. ಈ ಸಂಸ್ಥೆಯ ಮೊದಲ ಚುನಾಯಿತ ಅಧ್ಯಕ್ಷರು ಆಗಿ ಕಾರ್ಯ ನಿರ್ವಹಿಸಿದರು.
ಇದಕ್ಕೂ ಮುಂಚೆ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳು LEA ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು.
೩)1907ರಲ್ಲಿ ಛತ್ರಪತಿ ಶಾಹೂ ಮಹಾರಾಜರ ಆಹ್ವಾನದ ಮೇರೆಗೆ ರಾಜ ಲಖಮ್ ಗೌಡ ಸರದೇಸಾಯಿ ಮತ್ತು ಅರಟಾಳ ರುದ್ರಗೌಡರು ಅಂದಿನ ದಕ್ಷಿಣ ಮಹಾರಾಷ್ಟ್ರದ ಶೈಕ್ಷಣಿಕ ಕೇಂದ್ರವೆನಿಸಿದ ಕೊಲ್ಲಾಪುರಕ್ಕೆ ಭೇಟಿ ಕೊಟ್ಟರು .
ಈ ಸಂದರ್ಭದಲ್ಲಿ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಛತ್ರಪತಿ ಶಾಹು ಮಹಾರಾಜರು ರೂ.30,000ಗಳನ್ನು ಮತ್ತು ರಾಜ ಲಖಮಗೌಡ ಸರ್ ದೇಸಾಯಿ ಯವರು 12 ಸಾವಿರಗಳನ್ನು ಹಣವನ್ನು ದೇಣಿಗೆಯಾಗಿ ನೀಡಿದರು.
೪)ವಾರದ ಮಲ್ಲಪ್ಪನವರಿಂದ ಸ್ಥಾಪಿತವಾದ ಶಿವಯೋಗ ಮಂದಿರ ಸ್ಥಾಪನೆಯ ಕುರಿತು ನಿರ್ಧಾರ ಮಾಡಿದ ಬಾಗಲಕೋಟೆಯಲ್ಲಿ ಜರುಗಿದ ನಾಲ್ಕನೇ ವೀರಶೈವ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಲಖಮಗೌಡರ ಅಧ್ಯಕ್ಷತೆಯಲ್ಲಿ ಶಿವಯೋಗ ಮಂದಿರ ಸ್ಥಾಪನೆಯ ಠರಾವು ಸ್ವೀಕರಿಸಲಾಯಿತು.
೪)KLE ಸಂಸ್ಥೆಯ ಸಂಸ್ಥಾಪಕರು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿರುವ ಆರಟಾಳ ಗೌಡ್ರು ಮತ್ತು ಎಂ ಆರ್ ಸಾಕ್ರೆ ಮತ್ತು ಮಮದಾಪುರ ಅವರು ವಂಟಮೂರಿಗೆ ಹೋಗಿ ಲಕಮಗೌಡ ದೇಸಾಯಿ ಅವರಲ್ಲಿ KLE ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಧೇಣಿಗೆ ಕೇಳಿದಾಗ ಲಖಮಗೌಡ ದೇಸಾಯಿಯವರು 20,000ಗಳನ್ನು ನೀಡಿದರು.
ಈ ಬೃಹತ್ ಮೊತ್ತದಲ್ಲಿ ಕೆಎಲ್ಇ ಯವರು ಭೂಮಿಯನ್ನು ಖರೀದಿಸಿದರು .ಮುಂದೆ 80000ಗಳ ಸ್ವಂತ ವೆಚ್ಚದಿಂದ ಲಖಮಗೌಡರು ಕಟ್ಟಡವನ್ನು kLE ಯ ಪ್ರಥಮ ಅಂಗಸಂಸ್ಥೆಯಾದ GA ಶಾಲೆ ಗೆ ಕಟ್ಟಡ ನಿರ್ಮಿಸಿದರು. ಇದರ ಪರಿಣಾಮವಾಗಿ kLE ಯ ಪ್ರಥಮ ಅಂಗ ಸಂಸ್ಥೆಯಾದ GA ಹೈಸ್ಕೂಲ್ ಸ್ವಂತ ಕಟ್ಟಡ ಹೊಂದುವಂತಾಯಿತು.
೫)1922 ರಲ್ಲಿ KLE ಸಂಸ್ಥೆಯ 2ನೇ ಅಂಗಸಂಸ್ಥೆಯಾದ ಧಾರವಾಡದಲ್ಲಿ ಪ್ರೌಢಶಾಲೆ ಪ್ರಾರಂಭವಾಯಿತು .ಇದಕ್ಕೆ 1929ರಲ್ಲಿ ನ್ಯಾಯಮೂರ್ತಿ ಎನ್. ಎಸ್ .ಲೋಕುರ್ ಅವರು ರಾಜಾ ಲಖಮ ಗೌಡ ಸರ್ ದೇಸಾಯಿ ಪ್ರೌಢಶಾಲೆ ಎಂದು ನಾಮಕರಣ ಮಾಡಿದರು .
೬)1930ರಲ್ಲಿ ಬ್ರಿಟಿಷ್ ಸರ್ಕಾರ ಲಕಮ ಗೌಡರಿಗೆ ರಾಜ ಎಂಬ ಪದವಿಯನ್ನು ನೀಡಿದರು.
೭)1925 ರಲ್ಲಿ ಸ್ವಗ್ರಾಮ ವಂಟಮೂರಿಯಲ್ಲಿ KLE ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 50,000 ಗಳ ಖರ್ಚು ಮಾಡಿ ಆಂಗ್ಲೋ ವರ್ಣ್ಯಾಕುಲರ ಇಂಗ್ಲೀಷ ಶಾಲೆಯನ್ನು ಪ್ರಾರಂಭಿಸಿದರು .
ಐದಾರು ವರ್ಷಗಳ ಕಾಲ ನಡೆದು ವಿದ್ಯಾರ್ಥಿಗಳ ಕೊರತೆಯಿಂದ ಈ ಸಾಲೆ ನಿಂತು ಹೋಯಿತು.
1922 ರಲ್ಲಿ KLE ಸಂಸ್ಥೆಯ 2ನೇ ಅಂಗಸಂಸ್ಥೆಯಾದ ಧಾರವಾಡದಲ್ಲಿ ಪ್ರೌಢಶಾಲೆ ಪ್ರಾರಂಭವಾಯಿತು ಇದಕ್ಕೆ 1929ರಲ್ಲಿ ನ್ಯಾಯಮೂರ್ತಿ ಎನ್ ಎಸ್ ಲೋಕುರ್ ಅವರು ರಾಜಾ ಲಖಮ ಗೌಡ ಸರ್ ದೇಸಾಯಿ ಪ್ರೌಢಶಾಲೆ ಎಂದು ನಾಮಕರಣ ಮಾಡಿದರು .1930ರಲ್ಲಿ ಬ್ರಿಟಿಷ್ ಸರ್ಕಾರ ಲಕಮ ಗೌಡರಿಗೆ ರಾಜ ಎಂಬ ಪದವಿಯನ್ನು ನೀಡಿದರು.
ವಂಟಮೂರಿಯಲ್ಲಿ ಇಂಗ್ಲಿಷ್ ಶಾಲೆ
೯)1925 ರಲ್ಲಿ ಸ್ವಗ್ರಾಮ ವಂಟಮೂರಿಯಲ್ಲಿ kLE ಯಲ್ಲಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 50,000 ಗಳ ಖರ್ಚು ಮಾಡಿ ಆಂಗ್ಲೋ ವರ್ಣ್ಯಾಕುಲರ ಇಂಗ್ಲೀಷ ಶಾಲೆಯನ್ನು ಪ್ರಾರಂಭಿಸಿದರು .ಐದಾರು ವರ್ಷಗಳ ಕಾಲ ನಡೆದು ವಿದ್ಯಾರ್ಥಿಗಳ ಕೊರತೆಯಿಂದ ನಿಂತು ಹೋಯಿತು.
೧೦)RLS ಪದವಿ ಮಹಾವಿದ್ಯಾಲಯ ಬೆಳಗಾವಿ
1928 ರಿಂದ 1943 ರವರೆಗೆ ದೇಸಾಯಿ ಅವರು KLE ಸಂಸ್ಥೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು .
ಇವರ ಅವಧಿಯಲ್ಲಿ 1933ರಲ್ಲಿ KLEಯ ಪ್ರಥಮ ಪದವಿ ಮಹಾವಿದ್ಯಾಲಯ ಲಿಂಗರಾಜ್ ಮಹಾವಿದ್ಯಾಲಯ ಉದ್ಘಾಟನೆಯಾಯಿತು.
RLS ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ.
೧೧)1943ರಲ್ಲಿ ಲಖಮಗೌಡರು ಐವತ್ತು ಸಾವಿರ ರೂಪಾಯಿಗಳ ದೇಣಿಗೆ ನೀಡುವುದರ ಮೂಲಕ KLEಯ ಪ್ರಥಮ ವಿಜ್ಞಾನ ಮಹಾವಿದ್ಯಾಲಯದ ಪ್ರಾರಂಭ ಮಾಡಿದರು. ಇವರ ದೇಣಿಗೆಯನ್ನು ಸ್ಮರಿಸುವ ಸಲುವಾಗಿ ಆ ಮಹಾವಿದ್ಯಾಲಯಕ್ಕೆ ರಾಜ ಲಕಮಗೌಡ ದೇಸಾಯಿ ವಿಜ್ಞಾನ ಮಹಾವಿದ್ಯಾಲಯ ಎಂಬ ಹೆಸರು ನಾಮಕರಣ ಮಾಡಲಾಯಿತು.
೧೨)RLS_ಕಾನೂನು_ಮಹಾವಿದ್ಯಾಲಯ_ಬೆಳಗಾವಿ.
೧೩)ಬ್ರಾಹ್ಮಣ_ಸಮಾಜ ಕಾನೂನು ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಕಾನೂನು ಶಿಕ್ಷಣ ಸಂಸ್ಥೆ ಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಆಗ ಕಾನೂನ ಮಹಾವಿದ್ಯಾಲಯ ಸ್ಥಾಪಿಸಲು ಮುಂಬೈ ಸರಕಾರಕ್ಕೆ ಮನವಿ ಸಲ್ಲಿಸಿದಾಗ ಒಂದು ಲಕ್ಷ ರೂಪಾಯಿಗಳ ಠೇವಣಿ ನೀಡುವ ನಿಯಮಾವಳಿಯನ್ನು ಮುಂಬೈ ಸರಕಾರ ಬ್ರಾಹ್ಮಣ ಸಮಾಜದ ಮುಖಂಡರಿಗೆ ವಿಧಿಸಿತು.
ಆ ಸಂದರ್ಭದಲ್ಲಿ ಬಿ.ಎನ್.ದಾತಾರ. ವಿ ಡಿ ಬೆಳವಿ. ಮುಂತಾದವರು ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಬಾರ್ ಅ್ಯಟ್ ಲಾ ಪದವಿಯನ್ನು ಪಡೆದ ರಾಜ ಲಕಮ ಗೌಡ ದೇಸಾಯಿ ಅವರನ್ನು ಭೇಟಿಯಾಗಿ ತಮ್ಮ ಆಶಯ ವ್ಯಕ್ತಪಡಿಸಿದ್ದರು. ಆಗ ಲಕಮಗೌಡ ದೇಸಾಯಿ ಅವರು 1939 ರಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಪ್ರಾಮಿಸರ್ ನೋಟ್ ನಲ್ಲಿ ಠೇವಣಿ ಮಾಡಿ ಕಾನೂನು ಮಹಾವಿದ್ಯಾಲಯ ಸ್ಥಾಪನೆಗೆ ಚಾಲನೆ ನೀಡಿದರು .ದೇಸಾಯಿ ಅವರು ನೀಡಿದ ಬೃಹತ್ ಠೇವಣಿಯಿಂದ ಮುಂಬೈ ಸರಕಾರದ ಮಾನ್ಯತೆ ಪಡೆದುಕೊಂಡು ಬೆಳಗಾವಿಯಲ್ಲಿ ಕೆಎಲ್ಎಸ್ ಕಾನೂನು ಮಹಾವಿದ್ಯಾಲಯ ಪ್ರಾರಂಭವಾಯಿತು. ಹಾಗಾಗಿ KLS ಕಾನೂನು ಮಹಾವಿದ್ಯಾಲಯಕ್ಕೆ #ರಾಜ_ಲಖಮಗೌಡ_ಸರದೇಸಾಯಿ_ಕಾನೂನು #ಮಹಾವಿದ್ಯಾಲಯವೆಂದು ಆಡಳಿತ ಮಂಡಳಿಯವರು ಗೌರವಾರ್ಥವಾಗಿ ಹೆಸರನ್ನಿಟ್ಟರು.
೧೩)KCD_ಮಹಾವಿದ್ಯಾಲಯ.
ಧಾರವಾಡದಲ್ಲಿ ಅರಟಾಳ ರುದ್ರಗೌಡರು ನಾಯಕತ್ವದಲ್ಲಿ ಕೆ ಸಿ ಡಿ ಮಹಾವಿದ್ಯಾಲಯ ಸ್ಥಾಪನೆಗೆ ಮುಂದಾದಾಗ ಬ್ರಿಟಿಷ್ ಸರ್ಕಾರ 2 ಲಕ್ಷ 64ಸಾವಿರ ರೂಪಾಯಿಗಳ ಠೇವಣಿಯನ್ನು ಮುಂಬೈ ಸರಕಾರದಲ್ಲಿ ಇಡುವ ಷರತ್ತನ್ನು ಹಾಕಿತು. ಆ ಸಂದರ್ಭದಲ್ಲಿ ಅರಾಟಾಳ ರುದ್ರಗೌಡರು 1 ಲಕ್ಷ ರೂಪಾಯಿ ಸಂಗ್ರಹ ಮಾಡುವ ಜವಾಬ್ದಾರಿ ಸರಕಾರ ನೀಡಿತು. ಆದರೆ ಅರಟಾಳ ರುದ್ರಗೌಡ್ರು 70 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದ್ದರು .ಇನ್ನುಳಿದ 30,000ಗಳನ್ನು ಲಖಮಗೌಡ ದೇಸಾಯಿ ಅವರು ನೀಡುವ ವಾಗ್ದಾನ ನೀಡಿದ್ದರು. ಆದರೆ ಅರಟಾಳ ರುದ್ರಗೌಡರು ಕೇವಲ ರೂ.7000ಗಳನ್ನು ಮಾತ್ರ ಮಾತ್ರ ಲಕಮ ಗೌಡ ದೇಸಾಯಿ ಅವರಿಂದ ಕರ್ನಾಟಕ ಮಹಾವಿದ್ಯಾಲಯ ಧಾರವಾಡ ಸ್ಥಾಪನೆಗೆ ಅರಟಾಳರು ಸ್ವೀಕರಿಸಿದರು.
ಭಂಡಾರ್ಕರ_ಸಂಸ್ಕ್ರತ_ರಿಸರ್ಚ್ ಅಸೋಸಿಯೇಷನ್_ಪುಣೆ.
ಬಂಡಾರ್ಕರ್ ಸಂಸ್ಕೃತ ರಿಸರ್ಚ ಅಸೋಸಿಯೇಷನ್ ಸದಸ್ಯರು ಲಖಮಗೌಡರನ್ನು ಭೇಟಿಯಾಗಿ ತಮ್ಮ ಸಂಸ್ಥೆಗೆ ಸಹಾಯ ನೀಡಬೇಕೆಂದು ವಿನಂತಿಸಿದರು .ಲಖಮಗೌಡರು ಪ್ರತಿ ವರ್ಷ ರೂ.50 ಗಳನ್ನು ಕೊಡುವುದಾಗಿ ಹೇಳಿ ಪ್ರತಿ ಜನವರಿ ತಿಂಗಳ 5ನೇ ತಾರೀಕಿನ ಒಳಗಾಗಿ ಪುಣೆಯ ಬಂಡಾರ್ಕರ್ ಸಂಸ್ಕೃತ ಅಸೋಶಿಯೆಷನ್ ಗೆ ಹಣವನ್ನು ಗಳಿಸುತ್ತಿದ್ದರು ಲಖಮಗೌಡರು.
೧೫)ಡೆಕ್ಕನ್_ಎಜುಕೇಶನ್_ಸೊಸೈಟಿ_ಪುಣೆ
ಇದಕ್ಕೆ 5,000 ರೂಪಾಯಿ ದೇಣಿಗೆ ನೀಡಿದರು.
೧೬)ವಿಲ್ಲಿಂಗ್ಡನ್_ಕಾಲೇಜು_ಸಾಂಗಲಿ
ಒಂದು ಸಾವಿರ ರೂಪಾಯಿ ದೇಣಿಗೆ ನೀಡಿದರು
೧೭)ಲೇಡಿ_ಆರ್ಯರ್ವಿನ_ಕಾಲೇಜ್_ಡೆಲ್ಲಿ 5000ರೂಪಾಯಿ ದೇಣಿಗೆ ನೀಡಿದರು.
೧೮)ಮರಾಠ_ಮಂಡಲ_ವಿದ್ಯಾಲಯ-
೧೯)3000 ರೂಪಾಯಿ ದೇಣಿಗೆ ನೀಡಿದರು
೨೦)ಬಾಷಲ್_ಮಿಷನ್_ವನಿತಾ_ವಿದ್ಯಾಲಯ_ಬೆಳಗಾವಿ ಒಂದು ಸಾವಿರ ರೂಪಾಯಿಗಳ ದೇಣಿಗೆ ನೀಡಿದರು.
೨೧)ಸಾರ್ವಜನಿಕ_ಗ್ರಂಥಾಲಯ_ಮತ್ತು_ವಾಚನಾಲಯಕ್ಕೆ ಹತ್ತು_ಸಾವಿರ_ರೂಪಾಯಿಗಳ ದೇಣಿಗೆ
೨೨)ರಾಜ ಲಖಮ್ ಗೌಡ್ರು ದೇಸಾಯಿಯವರು ಬೆಳಗಾವಿ #ಆಯುರ್ವೇದ_ಮಹಾವಿದ್ಯಾಲಯಕ್ಕೆ_25_ಸಾವಿರ ರೂಪಾಯಿಗಳ_ದೇಣಿಗೆ ನೀಡಿದರು.
೨೩)ಹುಕ್ಕೇರಿ ತಾಲೂಕಿನ ಘಟಪ್ರಭಾದಲ್ಲಿರುವ ಕರ್ನಾಟಕ_ಆರೋಗ್ಯ_ದಾಮ ಇದಕ್ಕೆ ಲಖಮಗೌಡರು #ಆರು_ಸಾವಿರ ದೇಣಿಗೆ ನೀಡಿದರು
೨೪)ಬೆಳಗಾವಿ ಜಿಲ್ಲೆಯ #ಸರ್ಕಾರಿ_ಆಸ್ಪತ್ರೆಯಲ್ಲಿ ಕ್ಷ_ಕಿರಣ (X-ray centre)ಯಂತ್ರದ ಸೌಲಭ್ಯಕ್ಕಾಗಿ 10,000 ಗಳ ದೇಣಿಗೆ.
೨೬)ಬೆಳಗಾವಿ ಜಿಲ್ಲಾ ಕ್ಷಯ ರೋಗ ನಿವಾರಣಾ ಸಂಸ್ಥೆ ಇದಕ್ಕೆ ರೂ.2000 ಗಳ ಉದಾರ ದೇಣಿಗೆ.
೨೭)ಮಿರಜ್ ನಲ್ಲಿರುವ ಮಿಷನ್ ಆಸ್ಪತ್ರೆಗೆ 3000 ಗಳ ಉದಾರ ದೇಣಿಗೆ ನೀಡಿದ್ದರು ಲಖಮಗೌಡರು
೨೮)ದೆಹಲಿಯ_ಲೇಡಿ_ಡಪ್ರೀನ್_ಅಸ್ಪತ್ರೆ.
ದೆಹಲಿಯ ಲೇಡಿ ಡಫ್ರೀನ್ ಆಸ್ಪತ್ರೆ ದೆಹಲಿ ಇದಕ್ಕೆ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಲಖಮ ಗೌಡ ದೇಸಾಯಿ ಅವರು ನೀಡಿದ್ದರು.
ಕನ್ನಡ_ಸಾಹಿತ್ಯ_ಪರಿಷತ್ತಗೆ_ಒಂದು_ಲಕ್ಷದೇಣಿಗೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದನ್ನು ಸ್ಮರಿಸಬೇಕಾದುದು. ಆದರೆ ಉತ್ತರ ಕರ್ನಾಟಕದವರಾಗಲಿ ,ಕನ್ನಡ ಸಾಹಿತ್ಯ ಪರಿಷತ್ತಿನವರಾಗಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿರುವ ಲಖಮ ಗೌಡರನ್ನು ನೆನೆಸದೆ ಇರುವುದು ಖಂಡನಾರ್ಹವಾದುದು.
೩೦)ಪಂಡರಾಪುರಕ್ಕೆ ಬರುವ ಭಕ್ತರಿಗಾಗಿ ವಸತಿ #ನಿಲಯಗಳನ್ನು ಕಟ್ಟಲು ಜಮೀನನ್ನು ದಾನವಾಗಿ ನೀಡಿದರು ಲಖಮಗೌಡರು.ಈಗಲೂ ಸಹಿತ ಪಂಡರಾಪುರದಲ್ಲಿ ಲಖಮಗೌಡರು ಕೊಡ ಮಾಡಿದ ಜಾಗದಲ್ಲಿ ತಂಗು ಮನೆಗಳನ್ನು ಕಾಣಬಹುದು.
೩೧)ಬೆಳಗಾವಿಯಲ್ಲಿರುವ ಸೋಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ನಿರ್ಮಾಣಕ್ಕಾಗಿ ಲಖಮ ಗೌಡರು ಆದೇಶ 6000 ಗಳ ದೇಣಿಗೆಯನ್ನು ನೀಡಿದ್ದರು.
ಬೆಳಗಾವಿಯ ಯೂನಿಯನ್ ಜಿಮಖಾನಾ ಸ್ಥಾಪನೆಗಾಗಿ 5000 ಗಳ ದೇಣಿಗೆ ನೀಡಿದ್ದರು.
೩೨)ಧಾರವಾಡದ ಲಿಂಗಾಯತ ಸಾಹಿತ್ಯ ಸಮಿತಿಗೆ 2500 ಗಳನ್ನು ಮೂಲ ಧನ ವನ್ನಾಗಿ ನೀಡಿದರು.
ಕಿತ್ತೂರು ಕರ್ನಾಟಕ ಭಾಗದಲ್ಲಿ ಇಷ್ಟೆಲ್ಲ ಶೈಕ್ಷಣಿಕ ಸಾಂಸ್ಕೃತಿಕ ಸಮುಚ್ಛಯಗಳನ್ನು ಕಟ್ಟಲು ತಮ್ಮನ್ನು ತಾವು ಅರ್ಪಿಸಿಕೊಂಡ ರಾಜಾ ಲಕಮಗೌಡ ದೇಸಾಯಿ ಅವರು ತಮ್ಮ 79ನೇ ವಯಸ್ಸಿನಲ್ಲಿ 1943 ಜೂನ್ ಒಂದರಂದು ಬೆಳಗಾವಿಯ ಕಿಲ್ಲೆಯ ಬಂಗ್ಲೆಯಲ್ಲಿ ನಿಧನರಾದರು .
ಅವರ ನಿಧನದಿಂದ ಇಡೀ ಬೆಳಗಾವಿಯೇ ಸ್ತಬ್ಧವಾಗಿ ಹೋಗಿತ್ತು .ಶಾಲೆ ಕಾಲೇಜು ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದವು
ಲಖಮಗೌಡ ದೇಸಾಯಿ ಅವರು ನಿಧನನಾದರೂ ಅವರು ತಮ್ಮ ದೂರ ದೃಷ್ಟಿಯ ಫಲವಾಗಿ ಈ ನಾಡಿನಲ್ಲಿ ಕಟ್ಟಿದ ಶೈಕ್ಷಣಿಕ ಸಂಸ್ಥೆಗಳು ಇವತ್ತಿಗೂ ಸಹಿತ ಅವರನ್ನು ನಮ್ಮ ಸ್ಮೃತಿ ಪರಿಸರದಲ್ಲಿ ಅಜರಾಮರವಾಗಿ ಉಳಿಸಿವೆ..
ಈ ವರ್ಷದ ಕೊನೆ ಘಟ್ಟದಲ್ಲಿ ರಾಜಾ ಲಕಮ್ ಗೌಡದೇಸಾಯಿ ಅವರ ಲೇಖನದೊಂದಿಗೆ ಹಳೆಯ ವರ್ಷಕ್ಕೆ ವಿಧಾಯ ಹೇಳುತ್ತಾ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸೋಣ
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
–ಮಹೇಶ ಚನ್ನಂಗಿ ಕಿತ್ತೂರು