ಹಿಂಜರಿಕೆಯನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ… ವೀಣಾ

ಹಿಂಜರಿಕೆಯನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ… ವೀಣಾ

 

ವಿದ್ಯಾರ್ಥಿಗಳು ಹಿಂಜರಿಕೆಯಿಂದ ಹೊರಬಂದು ಅಧ್ಯಯನಶೀಲರಾಗಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವ ಮೂಲಕ ಮುನ್ನಡೆ ಸಾಧಿಸಬೇಕು. ಹಿಂಜರಿಕೆಯನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ ಎಂದು ‘ಸಿವಾ’ ಪ್ರಶಸ್ತಿ ಪುರಸ್ಕೃತ ಲೇಖಕಿ ವೀಣಾ ಹೇಮಂತಗೌಡ ಪಾಟೀಲ ನುಡಿದರು.

ಅವರು ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸಾಧಕರು-ಮಕ್ಕಳು ಸಂವಾದ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಅವರು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ತಮ್ಮ ಬಾಲ್ಯ, ಶಾಲಾ ಅನುಭವ, ತಮ್ಮ ತೊಡಗಿಸಿಕೊಳ್ಳುವಿಕೆ, ಇತ್ಯಾದಿ ಕುರಿತು ಮಾತನಾಡುತ್ತ ಶಾಲಾ ವಾತಾವರಣದಲ್ಲಿ ಕೇವಲ ಪಾಠ ಪರೀಕ್ಷೆಗೆ ಜೋತು ಬೀಳದೇ ಸಹಪಠ್ಯ ಚಟುವಟಿಕೆಗಳಲ್ಲಿ, ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಅನುಭವ ಗಳಿಸಿಕೊಳ್ಳಬೇಕು ಎಂದರಿ. ರೊಕ್ಕ ಕೊಟ್ಟರೆ ಏನೆಲ್ಲ ಸಿಗಬಹುದು ಅನುಭವ ಕೊಂಡುತರುವಂಥದಲ್ಲಿ ಸ್ವತಃ ಭಾಗಿಯಾಗುವುದರಿಂದ ಸಂಪಾದಿಸ ಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದೇ ಶಿಕ್ಷಣವಲ್ಲ. ಶಾಲಾ ಅಂಗಳದಲ್ಲಿ ಮಕ್ಕಳ ಸ್ವಯಂಪ್ರತಿಭೆಗೆ ಅವಕಾಶ ಮಾಡಿಕೊಡುವ ಮೂಲಕ ಸೃಜನಶೀಲತೆಗೆ ಇಂಬುಕೊಡುವಂತಿರಬೇಕು. ವೀಣಾ ಪಾಟೀಲ ಅವರು ಕಲೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ತಮ್ಮ ನಿರಂತರ ಕಾರ್ಯಚಟುವಟಿಕೆಗಳ ಪ್ರತಿಫಲವಾಗಿ ಧಕ್ಷಿಣ ಭಾರತದ ಸಾಧಕ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಸಾಧಕರ ಅನುಭವಗಳು ಮಕ್ಕಳ ಭವಿಷ್ಯಕ್ಕೆ ಸ್ಪೂರ್ತಿಯಾಗಬಲವು. ಪ್ರೇರಕ ಶಕ್ತಿಯಾಗಬಲ್ಲವು ಎಂದರು.

ಬಿ.ಎಚ್. ಹಲವಾಗಲಿ, ಶ್ರೀಮತಿ ಶಿವಲೀಲಾ ಅಬ್ಬಿಗೇರಿ ಉಪಸ್ಥಿತರಿದ್ದರು. ಶ್ರೀಮತಿ ಪಿ.ಆರ್ ಗಾಡದ ಸ್ವಾಗತಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು. ಪಿ.ಎಂ.ಲಾಂಡೆ ಕಾರ್ಯಕ್ರಮ ನಿರೂಪಿಸಿದರು.

Don`t copy text!