(ಪ್ರವಾಸ ಕಥನ ಮಾಲಿಕೆ ವಿಶೇಷ ಲೇಖನ)
ಬಸವಣ್ಣನವರ ಧರ್ಮ ಪತ್ನಿ ಶರಣೆ ಗಂಗಾಬಿಕೆಯ ಐಕ್ಯವಾದ ಸ್ಥಳ…..
ಪುಣೆ -ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ.. ಬೆಳಗಾವಿಗೆ 30 K. M ದೂರದಲ್ಲಿ ಗಂಗಾಬಿಕೆಯ ಐಕ್ಯ ಸ್ಥಳವಿದೆ. M. K ಹುಬ್ಬಳ್ಳಿಯಿಂದ 1km.
ಜಗಜ್ಯೋತಿ ಬಸವಣ್ಣನವರ ಹಿರಿಯ ಪತ್ನಿ ಶರಣೆ ಗಂಗಾಬಿಕೆ.. ಇವರು ಬಿಜ್ಜಳನ ಮಂತ್ರಿ ಬಲ ದೇವ ಎಂಬುವವರ ಮಗಳು. ಸಣ್ಣ ವಯಸ್ಸಿನಿಂದಲೂ ಪ್ರತಿಭಾವಂತೆ. ಸಾಹಿತ್ಯ. ಸಂಗೀತ ಮಾತ್ರವಲ್ಲದೆ ಕತ್ತಿ ವರೆಸೆಯಲ್ಲೂ ಎತ್ತಿದ ಕೈ. ಘನಲಿಂಗ ರುದ್ರಮುನಿಗಳ ಶಿಷ್ಯೆಯಾದ ಈಕೆಯದು ಅದ್ಭುತ ವ್ಯಕ್ತಿತ್ವ. ಬಸವಣ್ಣನವರೇ ಇವಳಿಗೆ ಯೋಗ್ಯ ಗಂಡು ಎಂದು ಅವರ ಜೊತೆ ವಿವಾಹ ಮಾಡುತ್ತಾರೆ.
ವಿವಾಹನಂತರ ಗಂಗಾಬಿಕೆ ಬಸವಣ್ಣನವರ ಅಂತರಂಗವನ್ನರಿತು ಅವರ ಇಚ್ಛೆಯಂತೆ ನಡೆಯುತ್ತಾರೆ. ಅವರು ಕೂಡ ಅಧ್ಯಾತ್ಮ ಸಾಧಕಿ. ಒಂದು ಗಂಡು ಮಗು ಹುಟ್ಟಿ ಕೆಲವೇ ತಿಂಗಳಲ್ಲಿ ತೀರಿಕೊಂಡಿತು. ಆ ನೋವು ಅವರ ವಚನಗಳಲ್ಲಿ ಕಾಣಬಹುದು. ಬಸವಣ್ಣ ನವರ್ ಎರಡನೇ ಪತ್ನಿ. ನೀಲಾoಬಿಕೆಯ ಮಗನನ್ನೇ ತಮ್ಮ್ ಮಗ ಎಂಬಂತೆ ವಾತ್ಸಲ್ಯ ದಿಂದ ಬೆಳೆಸಿದ್ದರು.
ಇವರ 9 ವಚನಗಳು ಮಾತ್ರ ಲಭ್ಯವಿದೆ. ಇವರ ವಚನಗಳ ಅಂಕಿತ.. ಗಂಗಪ್ರಿಯ ಕೂಡಲ ಸಂಗಮದೇವ. ಇವರ ವಚನ ಶ್ರೀಮಂತಿಕೆಯನ್ನು ಸಿದ್ಧರಾಮೇಶ್ವರರು ಕೊಂಡಾಡಿದ್ದಾರೆ.ಅವರ ಒಂದು ವಚನ..
ಅವಳ ಕಂದ ಬಾಲಸಂಗ ನಿನ್ನ ಕಂದ
ಚನ್ನಲಿಂಗ ಎಂದು ಹೇಳಿದರಮ್ಮ್
ಎನ್ನ ಒಡೆಯರು ಫಲವಿಲ್ಲದ
ಕಂದನಿರ್ಪನವಳಿಗೆ ಎನಗೆ ಫಲವಿಲ್ಲ
ಕಂದನಿಲ್ಲ ಇದೇನೋ ದುಃಖದಂದುಗ
ಗಂಗಾಪ್ರಿಯಾ ಕೂಡಲ ಸಂಗಮದೇವಾ.
ಕಲ್ಯಾಣ ಕ್ರಾಂತಿ ಸಮಯದಲ್ಲಿ ಅರಸು ಬಿಜ್ಜಳನನ್ನ ಕೊಲೆಗಯ್ಯಲಾಯಿತು. ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ. ಶರಣರು ಕಷ್ಟಕ್ಕೆ ಸಿಲುಕಿದ್ದರು. ಆ ಸಮಯದಲ್ಲಿ ಶರಣರ ರಕ್ಷಣೆಗೆ ಕತ್ತಿ ಹಿಡಿದು ನಿಂತಿದ್ದು ಶರಣೆ ಗಂಗಾಬಿಕೆ. ಮಲಪ್ರಭಾ ನದಿ ತೀರದಲ್ಲಿರುವ ಕಾದರವಳ್ಳಿಯಲ್ಲಿ ನಡೆದ ಯುದ್ಧದಲ್ಲಿ ಗಂಗಾಬಿಕೆ ಧೈರ್ಯದಿಂದ ಪಾಲ್ಗೊಂಡು ಸಾಹಸ ತೋರಿಸಿದಳು. ಇದೇ ಕಾಳಗದಲ್ಲಿ ವೀರ ಮರಣವನ್ನು ಅಪ್ಪುತ್ತಾಳೆ.
ಹೀಗಾಗಿ ಈ ಸ್ಥಳದಲ್ಲಿ ಗಂಗಾಬಿಕೆಯ ಸಮಾಧಿಯಿದೆ. ಸುಮಾರು 800ವರ್ಷಗಳ ಇತಿಹಾಸ ವಿರುವ ಈ ಸ್ಥಳವು ಮಲಪ್ರಭಾ ನದಿಯ ಮಧ್ಯದಲ್ಲಿದೆ.
ಏಪ್ರಿಲ್ 2009 ರಲ್ಲಿ ಈ ಸ್ಮಾರಕವನ್ನು ಜೀರ್ಣೋದ್ಧಾರ ಮಾಡಿ ಜನವರಿ -14 -2012ರಂದು ಹೊಸ ಸ್ಮಾರಕ ಲೋಕಾರ್ಪಣೆ ಮಾಡಲಾಯಿತು. ಐಕ್ಯ ಸ್ಥಳದ ಸುತ್ತಲೂ 40 ಅಡಿ ಎತ್ತರದ ಒಣ ಬಾವಿಯನ್ನು ಅಲ್ಲಿಗೆ ಹೋಗಲು ಸೇತುವೆಯನ್ನು ನಿರ್ಮಿಸಲಾಗಿದೆ. ಎರಡೂ ಬದಿ ಮೆಟ್ಟಲುಗಳಿವೆ. ಮೇಲಿನ ಭಾಗದಲ್ಲಿ 60ಅಡಿ ವ್ಯಾಸವಿರುವ ಗೋಪುರ ಎರಡು ಹಂತಗಳಲ್ಲಿ ಅಂದ್ರೆ 40ಅಡಿ ಎತ್ತರದ ಮೇಲೆ ಒಂದು ಹಾಗೂ 53ಅಡಿ ಎತ್ತರದ ಮೇಲೆ ಒಂದು ಕ್ಯಾಂಟಿಲಿವರಗಳನ್ನು ನಿರ್ಮಿಸಲಾಗಿದೆ. ಮಳೆಗಾಲದ ಲ್ಲಿ ಕೂಡ ತುಂಬಿರುವ ಮಲಪ್ರಭಾ ನದಿಯ ತೊಂದ್ರೆ ಇಲ್ಲದಂತೆ ಕೆಳಗಿಳಿದು ದರ್ಶನ ಮಾಡಬಹುದು. ಒಮ್ಮೆ ಎಲ್ಲರೂ ಭೇಟಿ ಕೊಡಬೇಕಾದ ಸ್ಥಳ. ಅದೂ ಕೂಡ ಬೆಳಗಾವಿಯ ಸುತ್ತ ಮುತ್ತ.
ಇದೇ ದಾರಿಯಲ್ಲಿ ಮುಂದೆ ಲಕ್ಷ್ಮಿ ನರಸಿಂಹ ದೇವಸ್ಥಾನವಿದೆ. ಜಾಗೃತ ದೇವರು. ಸುಂದರ ಪರಿಸರ. ಬೆಳಿಗ್ಗೆ ಬಂದು ಸಾಯಂಕಾಲದವರೆಗೂ ಕಾಲ ಕಳೆಯಬಹುದು. ಇಲ್ಲಿ ಏನೂ ಸಿಗದ ಕಾರಣ…. ಊಟ ತಿಂಡಿ ವ್ಯವಸ್ತೆ ಮಾಡಿಕೊಂಡೇ ಬರಬೇಕು.
✍️ಶ್ರೀಮತಿ. ವಿದ್ಯಾ. ಹುಂಡೇಕರ.