ಮಹಾಯೋಗಿ ವೇಮನ ಜಯಂತಿ ಆಚರಣೆ,ಸಾಧಕರಿಗೆ ಸತ್ಕಾರ….
e-ಸುದ್ದಿ ಇಲಕಲ್ಲ
ವರದಿ: ಶರಣಗೌಡ ಕಂದಕೂರ ಇಲಕಲ್ಲ
ಇಲಕಲ್ಲ ತಾಲೂಕ ದಂಡಾಧಿಕಾರಿ ಕಚೇರಿಯಲ್ಲಿ
ಮಹಾಯೋಗಿ ವೇಮನ ಜಯಂತಿ ಆಚರಣೆ ಮಾಡಲಾಯಿತು.
ಇಲಕಲ್ಲ ಸಮಸ್ತ ರೆಡ್ಡಿ ಸಮಾಜದ ಭಾಂಧವರು ತಾಲೂಕ ಕಚೇರಿ ಸಿಬ್ಬಂದಿ ವರ್ಗದವರು ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ದುಂಡಾರೆಡ್ಡಿ ಗುರುಗಳು ವೇಮನರ ತತ್ವಗಳನ್ನು ಕವನಗಳ ಮೂಲಕ ಜನರಿಗೆ ಮನಮುಟ್ಟುವಂತೆ ತಿಳಿಯಪಡಿಸಿದರು.
ನಂತರದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜು ಜುನ್ನೂರ್ ಅವರು ಮಾತನಾಡಿ ಶ್ರೀ ಮಹಾಯೋಗಿ ವೇಮನರು ತಮ್ಮ ವಚನಗಳ ಮೂಲಕ ಕವಿತೆಗಳ ಮೂಲಕ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನ್ ಕವಿಗಳು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ದಂಡಾಧಿಕಾರಿ ಗ್ರೇಡ ೨ ತಹಶೀಲ್ದಾರ್ ತಾಲೂಕು ಪಂಚಾಯತ್ ಕಾರ್ಯನಿರ್ವಕಾಧಿಕಾರಿ ಸಂಜು ಜಿನ್ನೂರು ಹಾಗೂ ರೆಡ್ಡಿ ಸಮಾಜದ ಹಿರಿಯರು. ಯುವಕರು ತಾಯಂದಿರು ಉಪಸ್ಥಿತರಿದ್ದರು.