ಮನೆಯ ದೀಪ

ಮನೆಯ ದೀಪ

ಪ್ರಕೃತಿ ಪುರುಷರ ಸಂಗಮವೇ ಜಗದ ಐಸಿರಿ
ವಾಸ್ತವದ ಅರಿವಿನ ಬೆಳಕಿದ್ದರೂ
ಆ ಬೆಳಕಿನ ನೋಟದೊಳಗೆ
ಕತ್ತಲೆಯನ್ನು ಕಂಡರಿಸಿ
ಮನದ ಅಹಮ್ಮಿನೊಳಗೆ
ಪ್ರತಿಷ್ಠೆ ಯ ಹುಚ್ಚರ ಸಂತೆಯೊಳಗೆ
ಪ್ರಕೃತಿಯ ನಿಜ ನೋಟವ ಮರೆಯಾಗಿರಿಸಿ
ಪುರುಷಕಾರದ ಠೇಂಕಾರದೊಳಗೆ
ಪ್ರಕೃತಿ ಪ್ರತಿ ಛಾಯೆಯಲ್ಲಿ ಪುರುಷತ್ವದ
ಅರಸುವಿಕೆ
ಹಾಗಾಗಿ ಹುಟ್ಟುವ ಪ್ರತಿ ಮಗು ಗಂಡಾಗಲೇಂಬ
ಸಂಪ್ರದಾಯಿಕ ಮನೋಭಿತ್ತಿ
ಸಾಧನೆಯ ಸಿಧ್ಧಿ ಗೆ ಅವನೇ ಸಿಧ್ಧಪುರಷನೆಂಬ
ಹುಚ್ಚು ಹಂಬಲ
ತಿಳಿಗೇಡಿ ಜನಕೆ ಅನ್ನದ ಹಂಬಲಕೆ
ಆಶ್ರಯದಾತೆಯಾದಾಗ ಕನಸುಗಳಿಗೆ ಕಂಗಳುಗಳಾಗಿ
ಮನದ ಬೇಗುದಿಗಳಿಗೆ ಸಾಂತ್ವನದ ಉಸಿರಾಗಿ
ನಡೆಯುವ ಹಾದಿಯಲಿ ಸಂತಸ ಮೂಡುವ ಛಾಯೆಯ ಪ್ರತೀಕವಾದಾಗ
ಆಗ ಅದು
ಹೆಣ್ಣು ಮಗುವಾಗುವುದಿಲ್ಲ
ಹುಟ್ಟುವಾಗ ಬೇಸರಿದವರೆ
ಭರವಸೆಯಿಂದ ಮಗಳನೇ
ಮನೆ ಬೆಳಕೆಂದು ಭಾವನೆಯ ಬಂಧಿಯಾಗಿರಿಸುತ್ತಾರೆ
ಹಾಗಾಗಿ
ಹುಟ್ಟುವ ಮಗು
ಅದು ಮಗು ಎಂಬುದಷ್ಟೇ ತಿಳಿವಿರಲಿ
ಲಿಂಗ ಭೇದದೊಳಗೆ
ಮನೆಯ ದೀಪವಾದ ಮಗಳನು
ಕತ್ತಲೆಯ ಕೂಪಕ್ಕೆ ದೂಡದೇ
ಹುಟ್ಟುವ ಪ್ರತಿ ಮಗಳು
ನಮ್ಮ ಬದುಕಿನ ಮುಗಳೆಂದು ಭಾವಿಸೋಣ


-ಡಾ. ನಾಹೀರಾ ಕುಷ್ಟಗಿ
(ಮಗಳ ದಿನದ ನಿಮಿತ್ತ)

Don`t copy text!