ನಂದವಾಡಗಿ ಶ್ರೀಮಠದಲ್ಲಿ ನಡೆಯುತ್ತಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ದೊಡ್ಡನಗೌಡ ಜಿ ಪಾಟೀಲ್
e-ಸುದ್ದಿ ಇಳಕಲ್
ತಾಲೂಕಿನ ನಂದವಾಡಗಿ ಶ್ರೀ ಮಹಾಂತೇಶ್ಚರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಷಟಸ್ಥಲ ಬ್ರಹ್ಮ ತಪೋನಿಧಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಹಸ್ರ ಚಂದ್ರ ದರ್ಶನ ಹಾಗೂ ಡಾ. ಚನ್ನಬಸವದೇವರು ಹಿರೇಮಠ ಇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಂದವಾಡಗಿ ಯ ಶ್ರೀ ಮಹಾಂತೇಶ್ವರ ಹಿರೇಮಠದಲ್ಲಿ ಒಂದು ತಿಂಗಳಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಭಾಗವಹಿಸಿ ಪೂಜ್ಯ ಹಿರಿಯ ಶ್ರೀಗಳ ಆಶೀರ್ವಾದ ಪಡೆದರು.
ನಂದವಾಡಗಿಯ ಹಿರಿಯ ಪೂಜ್ಯರ ಪ್ರತಿದಿನ ನಡೆಯುವ ತುಲಾಭಾರ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದೇ ಸಂಧರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ನಂದವಾಡಗಿ ಹಾಗೂ ಅಕ್ಕಪಕ್ಕದ ಹಳ್ಳಿಗಳಿಂದ ಹಿರಿಯರು ತಾಯಂದಿರು ವೃದ್ದರು ಹಾಗೂ ಆಳಂದ ,ನಂದವಾಡಗಿ, ಜಾಲವಾದಿ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ