ನಲ್ಲೆ-ನಲ್ಲ

ನಲ್ಲೆ

ಹೇಗೆ ಹೇಳಲಿ ಇನಿಯ
ಅಂತರಂಗದ ಧ್ವನಿಯ
ಆಲಿಸುವೆನೆಂದರೆ ಈಗ
ಹೇಳುವೆನು ನಾನೀಗ.

ತಂದೆ ತಾಯಿಯರ ಬಿಟ್ಟು
ಒಡಹುಟ್ಟಿದವರ ಬಿಟ್ಟು
ಬಂಧು ಬಳಗವ ಬಿಟ್ಟು
ಬಲ್ಲೆಯ, ನಾ ಬಂದಿರುವ ಗುಟ್ಟು.

ಹುಟ್ಟಿದ ಮನೆಯಲಿದ್ದೆ
ಬಾಲ್ಯದಲಿ ನಲಿತಿದ್ದೆ
ಯೌವನದಿ ಪುಟಿದೆದ್ದೆ
ಸಂಭ್ರಮದಿ ನಿನ್ನ ಗೆದ್ದೆ.

ಮೆಟ್ಟಿದ ಮನೆಯ ಕನಸು
ಗಳನು
ನನಸಾಗಿಸುತಿರುವೆ ನಾನು
ಅರಿತರಿತು ಬಾಳುವೆ ನಾನು
ಬೆಂಬಲವ ನೀಡುತ ನೀನು.

ನಲ್ಲ..❤

ನಿನ್ನ ಮನದಬಯಕೆಯ ನಾ
ಬಲ್ಲೆ
ಮನದಿ ಮಿಡಿಯುತಲಿರುವದ
ನಾ ಬಲ್ಲೆ
ಉಕ್ಕುತಿಹ ಪ್ರೇಮದ ಝರಿಯ
ಬಲ್ಲೆ
ಉಕ್ಕಿಸುತ ಇರು ಈ ಮನೆಯ
ಹಾಲಿನ ಬೆಳದಿಂಗಳಲ್ಲೇ

ನಿನ್ನ ಒಲುಮೆಯನು ಏನೆಂದು
ಬಣ್ಣಿಸಲಿ
ಮೈ ಮರೆಯದೇ ಎಲ್ಲವನು
ನೋಡುತ ಆನಂದದಲಿ
ರಣರಂಗವಿರದೇ, ನಂದ ಗೋಕುಲವಿರಲಿ
ನಿನ್ನ ಬಾಳಿನ ಬೆಳಕು ಬೆಳಗಲಿ
ಇಲ್ಲಿ.

ಕೃಷ್ಣ ಬೀಡಕರ,, ವಿಜಯಪುರ..

Don`t copy text!