ಹಲಸಿ….

(ಪ್ರವಾಸ ಕಥನ ಮಾಲಿಕೆ)

ಹಲಸಿ…..

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಒಂದು ಪಟ್ಟಣ. ಖಾನಾಪುರದಿಂದ ಸುಮಾರು 14 km ದೂರದಲ್ಲಿದೆ. ಈ ಪಟ್ಟಣದ ಪ್ರಾಚೀನ ಹೆಸರು ಪಲಾಶಿಕಾ. ಗೋವಾದ ಕದಂಬರ ರಾಜಧಾನಿಯಾಗಿತ್ತು. ಇಲ್ಲಿರುವ ವರಾಹನರಸಿಂಹ. ಸುವರ್ಣೇ ಶ್ವರ ದೇವಸ್ಥಾನ. ರಾಮೇಶ್ವರ ದೇವಸ್ಥಾನಗಳು ಪ್ರಸಿದ್ಧವಾಗಿವೆ.
ಹಲಸಿ ದೇವಸ್ಥಾನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಹತ್ತೊಂಬತ್ತ ನೆಯ ಶತಮಾನದೆಂದು ಗುರುತಿಸಲಾದ ಶೈಲಿ ಸಂಪ್ರದಾಯಗಳು ಜಕಣಾ ಚಾರ್ಯರು ಮಾಡಿದ್ದೆoದು ಹೇಳುತ್ತದೆ.
. ದೇವಾಲಯದ ಒಳಗೆ ಎರಡು ಗರ್ಭ ಗೃಹಗಳು ಪರಸ್ಪರ ಮುಖಾಮುಖಿಯಾಗಿವೆ. ಬಲಭಾಗದಲ್ಲಿ ಕುಳಿತ ಭಂಗಿಯಲಿ ಭಗವಾನ ಶ್ರೀ ವಿಷ್ಣುವಿನ ವಿಗ್ರಹವಿದೆ. ಸೂರ್ಯ ನಾರಾಯಣ ಮತ್ತು ಮಹಾಲಕ್ಷ್ಮಿ ದೇವತೆಗಳು ಮುಖ್ಯ ದೇವತೆಯ ಹಿಂದೆ ಇದ್ದಾರೆ. ಎಡ ಭಾಗದಲ್ಲಿರುವ ಕೊನೆಯು ಭೂವರಾಹ ಸ್ವಾಮಿಯ ದೇವರನ್ನುಹೊಂದಿದ್ದು ವಿಷ್ಣುವಿನ ವರಾಹ ಅವತಾರವನ್ನು ಹೊಂದಿದೆ. ಅಲ್ಲಿ ದಂತದ ಮೇಲೆ ಭೂಮಿತಾಯಿಯನ್ನು ಹೊತ್ತಿದ್ದಾನೆ. ಮುಖ್ಯ ದೇವಾಲಯದ ಹೊರಗೆ ಗಣೇಶ್. ಶಿವ. ವಿಠಲನ ದೇವಾಲಯಗಳಿವೆ.
ಅಶ್ವಿನ ಹುಣ್ಣಿಮೆಯoದು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.ಈ ಮಂದಿರಕ್ಕೆ ಮುಂಭಾಗದಲ್ಲಿ ದ್ವಾರವಿಲ್ಲ. ಎಡ. ಬಲ ಭಾಗದಲ್ಲಿ ಎರಡು ದ್ವಾರಗಳಿವೆ. ಮುಖ್ಯ ದೇವಸ್ಥಾನದ ಎಡ ಬದಿಯಲ್ಲಿ ಮುರುಡಿ ಎತ್ತರದ ಸ್ವಯಂಭು ಬಾಲ ನರಸಿಂಹ. ಬಲ ಭಾಗದಲ್ಲಿ ಆಂಜನೇಯ ಮೂರ್ತಿ ಇದೆ. ಇಲ್ಲಿ ಆಂಜನೇಯನ ಮುಖ ನೇರವಾಗಿರುವದು ವಿಶೇಷ.
ಹಲಸಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಕದಂಬೋತ್ಸವ ನಡೆಯುತ್ತದೆ. ಹಲಸಿ ಇತಿಹಾಸಕ್ಕ ಸ್ಟೇ ಅಲ್ಲ. ಸಾಂಸ್ಕೃತಿಕವಾಗಿಯೂ ಕನ್ನಡಿಗರಿಗೆ ಮಹತ್ವವಾಗಿದೆ. ಜೈನ. ಶೈವ. ವೈಷ್ಣವರ ಕೇಂದ್ರ ಸ್ಥಳವಾಗಿದ್ದು ಅನೇಕ ದೇವಾಲಯಗಳನ್ನು ಹೊಂದಿದೆ. ಸ್ಮಾರಕ. ಶಾಸನ ಹಾಗೂ ಸಾಂಸ್ಕೃತಿಕ ಕುರುಹುಗಳಿಂದ ಸಮೃದ್ಧ ವಾಗಿದೆ.ಒಮ್ಮೆ ಎಲ್ಲರೂ ಭೇಟಿ ಕೊಡಲೇಬೇಕಾದ ದೇವಸ್ಥಾನ.

✍️ಶ್ರೀಮತಿ. ವಿದ್ಯಾ. ಹುಂಡೇಕರ

Don`t copy text!